ಜಗಳೂರು: ಅಪರಾಧ ತಡೆಗೆ ಪ್ರತಿಯೊಬ್ಬರೂ ಸಹಕಾರ ಅಗತ್ಯ

Suddivijaya
Suddivijaya December 20, 2023
Updated 2023/12/20 at 3:14 PM

ಸುದ್ದಿವಿಜಯ, ಜಗಳೂರು: ಪೊಲೀಸರು ಮನುಷ್ಯರು. ನಮಗೇನು ಅತೀಂದ್ರಿಯ ಶಕ್ತಿಗಳು ಇರುವುದಿಲ್ಲ. ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ತಿಳಿಸಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ ಅಪರಾಧ ತಡೆಯುವ ಮುನ್ನೆಚ್ಚರಿಕೆಗಳ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಪಟ್ಟಣದ ಹೊರ ಭಾಗದಲ್ಲಿ ಜನ ವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ನಮ್ಮ ಪೊಲೀಸರು ಮನೆ ಮನೆಗೆ ತೆರಳಿ ಬಿತ್ತಿ ಪತ್ರಗಳನ್ನು ನೀಡುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುವುದು.

ಪಪಂ ಸದಸ್ಯರು ತಮ್ಮ ವಾರ್ಡ್‍ಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಿ. ಸರಗಳ್ಳತನ, ಮನೆ ಕಳ್ಳತನ, ಡ್ರಗ್ಸ್ ಮಾರಾಟ ಜಾಲಗಳ ಬಗ್ಗೆ ಮಾಹಿತಿ ನೀಡಲು ನಿಮಗೆ ಭಯವಾದರೆ 112ಗೆ ಕರೆ ಮಾಡಿ. ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು. ಮನೆಗಳಿಗೆ ಬೀಗ ಹಾಕಿ ಪ್ರವಾಸ ಹೋಗುವ ವ್ಯಕ್ತಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ನಮ್ಮ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ.ಪಟ್ಟಣ ಪಂಚಾಯಿತಿಯಿಂದ ಪೊಲೀಸ್ ಠಾಣೆಗೆ 30 ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡುವ ಪತ್ರವನ್ನು ಹಸ್ತಾತರಿಸಲಾಯಿತು.ಪಟ್ಟಣ ಪಂಚಾಯಿತಿಯಿಂದ ಪೊಲೀಸ್ ಠಾಣೆಗೆ 30 ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡುವ ಪತ್ರವನ್ನು ಹಸ್ತಾತರಿಸಲಾಯಿತು.

ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ನಿಮ್ಮ ಮನೆಯ ಮಕ್ಕಳ ಮೇಲೆ ನಿಗಾ ಇಡುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಅಪರಾಧ ತೆಡೆ, ಡ್ರಗ್ಸ್ ಮುಕ್ತ ಸಮಾಜ ನಮ್ಮ ಗುರಿ ಅಗಿದ್ದು ಪ್ರತಿಯೊಬ್ಬ ನಾಗರೀಕನು ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದರು.ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಅಪರಾಧ ಆಗುವುದಕ್ಕೂ ಮೊದಲು ಮುನ್ನಚ್ಚರಿಕೆ ವಹಿಸುವುದು ಮುಖ್ಯ. ನಮ್ಮ ಮನೆಗಳಲ್ಲಿ ಬೆಲೆ ಬಾಳುವ ಆಭರಣ, ಹಣ ಇಡುವ ಬದಲು ಬ್ಯಾಂಕ್‍ಗಳಲ್ಲಿ ಇಟ್ಟರೆ ಹೆಚ್ಚು ಸೂಕ್ತ. ಪೊಲೀಸ್ ಇಲಾಖೆ ಮಾತ್ರ ಸಮಾಜದ ರಕ್ಷಣೆಯಲ್ಲ ಜವಾಬ್ದಾರಿಯಲ್ಲ ಪ್ರತಿಯೊಬ್ಬರೂ ಪೊಲೀಸರಿಗೆ ಬೆಂಬಲವಾಗಿ ನಿಂತರೆ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಪಪಂ ಸದಸ್ಯರಾದ ಎಂಎಲ್‍ಎ ತಿಪ್ಪೇಸ್ವಾಮಿ ಮತ್ತು ರಮೇಶ್‍ರೆಡ್ಡಿ ಪಟ್ಟಣದಲ್ಲಿ ಅಪರಾಧ ತಡೆಗೆ ಕೆಲ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಇಓ ಕೆ.ಟಿ.ಕರಿಬಸಪ್ಪ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!