ಪೊಲೀಸ್ ಠಾಣೆ ಎಂದರೆ ಭಯ ಅಲ್ಲ, ಭರವಸೆ: ಎಸ್‍ಪಿ ಉಮಾ ಪ್ರಶಾಂತ್

Suddivijaya
Suddivijaya January 24, 2024
Updated 2024/01/24 at 3:18 PM

ಸುದ್ದಿವಿಜಯ, ಜಗಳೂರು: ಪೊಲೀಸ್ ಠಾಣೆ ಎಂದರೆ ಭಯ ಅಲ್ಲ, ಭರವಸೆಯಾಗಿದೆ ಎಂದು ದಾವಣಗೆರೆ ಜಿಲ್ಲಾ  ಪೊಲೀಸ್  ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಪಟ್ಟಣದಲ್ಲಿ ಬುಧವಾರ  ಪೊಲೀಸ್ ಠಾಣೆ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಜನ ಸ್ನೇಹಿಯಾಗಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯ. ಇತ್ತೀಚಿನ ದಿನಗಳಲ್ಲಿ ಜಗಳೂರು ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ. ಇದು ಹೀಗೆ ಮುಂದುವರಿಸಬೇಕು. ಶಾಂತಿ ಸೌಹಾರ್ಧತೆಯಿಂದ ಬದುಕಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ, ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ಮಹಿಳೆಯರು ಪುರುಷರಗಿಂತ ಕಡಿಮೆ ಇಲ್ಲ. ಆದರೂ ತಾರತಮ್ಮ ಮಾಡುತ್ತಿರುವುದು ಸರಿಯಲ್ಲ. ಮಹಿಳೆಗೆ ಶಿಕ್ಷಣ ಕೊಡಿಸಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತೋರಿಸುವ ಶಕ್ತಿ ಸ್ತ್ರೀಯಲ್ಲಿದೆ ಎಂದರು.ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ಇದೊಂದು ಅವಿಸ್ಮರಣೀಯ ದಿನ. ನಮ್ಮ ಸಾರ್ವಜನಿಕ ಆಸ್ತಿಯಾಗಿರುವ  ಪೊಲೀಸ್  ಠಾಣೆ ನವೀಕರಣಗೊಂಡು ಸಿಂಗಾರಗೊಂಡಿದೆ. ನಾವೆಲ್ಲ ನೆಮ್ಮದಿಯಿಂದ ಇರಬೇಕಾದರೆ  ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಸುಭದ್ರವಾಗಿದ್ದರೆ ಮಾತ್ರ ಸಾಧ್ಯ ಎಂದರು.

ಜನ ಇದ್ದಾಗ ಸಮಸ್ಯೆ ಸಹಜ. ಎಂಟು ತಿಂಗಳ ನನ್ನ ಶಾಸಕ ಅವಧಿಯಲ್ಲಿ ಕೊಮು ಗಲಭೆಗೆ ಅವಕಾಶ ನೀಡಿಲ್ಲ. ಜಾತಿ ಪ್ರಕರಣಗಳಿಲ್ಲ. ಅಹಿತರ ಘಟನೆ ನಡೆದಿಲ್ಲ. ಸಣ್ಣ ಪುಟ್ಟ ಕೇಸ್ ಬಂದಾಗ ಒಟ್ಟು ಗೂಡಿಸಿ ರಾಜಿಮಾಡಿದ್ದಾರೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಸಹಕರಿಸಬೇಕು ಎಂದರು.

ಠಾಣೆ ಎಂದರೆ ಭಯ ಪಡುವ ಅಗತ್ಯವಿಲ್ಲ. ರಾಮ ರಾಜ್ಯದ ಪರಿ ಕಲ್ಪನೆ ಗಾಂಧಿ ಕಂಡ ಕನಸ್ಸು ನನಸಾಗಿದೆ. ಅಯ್ಯೋದ್ಯಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಿದೆ. ಎಲ್ಲ ಸಮುದಾಯ ಒಗ್ಗಟ್ಟಿನಿಂದ ಕೆಲಸ ಮಾಡೋಣ. ನಿಮ್ಮ ಮಾರ್ಗದರ್ಶನದಲ್ಲಿ ಕಾನೂನು ವ್ಯವಸ್ಥೆ ಸರಿದಾರಿಗೆ ತರೋಣ ಎಂದರು.

ಪಿಐ ಶ್ರೀನಿವಾಸ್ ಮಾತನಾಡಿ, ನಾನು ಅಧಿಕಾರ ವಹಿಸಿಕೊಂಡ ಮೇಲೆ ಹಿಂದಿನ ಎಸ್.ಪಿ. ಮತ್ತು ಐಪಿಎಸ್ ಅಧಿಕಾರಿ ಸಿ.ಬಿ.ರಿಷ್ಯಂತ್ , ಸ್ಟೇಷನ್ ಮೂಲಸೌಕರ್ಯ ಅಭಿವೃದ್ಧಿಗೆ ಏನಾದರೂ ಮಾಡಿ ಎಂದು ಸಲಹೆ ನೀಡಿದ್ದರು.

ನಿರ್ಮಿತಿ ಕೇಂದ್ರದಿಂದ 7.50 ಲಕ್ಷ ರೂ ಮತ್ತು ಧ್ವಜ ಕಟ್ಟೆ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ದಾನಿಗಳು ಸಹಾಯ ಧನ ನೀಡಿದರು. ಕಾನೂನು ವ್ಯವಸ್ಥೆ ಅತೋಟಿಯಲ್ಲಿದೆ. ದೊಡ್ಡ ಮಟ್ಟದ ಅಹಿತರ ಘಟನೆಗಳು ನೆಡೆದಿಲ್ಲ. ವಿದ್ಯಾರ್ಥಿಗಳಿಗೆ ತೆರದ ಮನೆ, ಬಹಿರಂಗ ಸಾರ್ವಜನಿಕ ಸಭೆ ಸೇರಿದಂತೆ ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಮೆಲಾಧಿಕಾರಿಗಳ ಮತ್ತು ನಾಗರೀಕರ ಸಹಕಾರ ನೀಡಿದ್ದಾರೆ.

ನಾನು ಕಳೆದ ವರ್ಷ ದಿಂದ ಅರ್ಧ ಕೆಜಿ ಚಿನ್ನಾಭರಣ ಕಳ್ಳತನ ಪ್ರಕರಣ ಮತ್ತು 70 ಕಳುವಾದ ಮೊಬೈಲ್ ಹಿಂದಿರುಗಿಸಲಾಗಿದೆ. ನನ್ನ ಮನೆಯಂತೆ ಠಾಣೆ ಕಾಣುತ್ತಿದ್ದೆ. ನನ್ನ ಹೆತ್ತತಾಯಿ ನಂತರ ಎರಡನೆ ತಾಯಿ ಪೊಲೀಸ್ ಠಾಣೆಯಾಗಿದೆ ಎಂದರು.

ಮೊಬೈಲ್ ವಾರಸುದಾರರಿಗೆ ಕಾರ್ಯಕ್ರಮದಲ್ಲಿ ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಯಿತು.
ಮೊಬೈಲ್ ವಾರಸುದಾರರಿಗೆ ಕಾರ್ಯಕ್ರಮದಲ್ಲಿ ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಯಿತು.

ಹೆಚ್ಚುವರಿ ಎಸ್.ಪಿ ಗಳಾದ ವಿಜಯ್ ಕುಮಾರ್, ಮಂಜುನಾಥ್ ಮಾತನಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಯದ್ ಕಲೀಂಉಲ್ಲಾ, ಪೊಲೀಸ್ ಉಪಾಧೀಕ್ಷಕ ಬಿ.ಎಸ್ ಬಸವರಾಜ್, ಪಿಎಸ್‍ಐ ಸಾಗರ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಮಬಿ.ಮಹೇಶ್ವರಪ್ಪ,

ಕೆಪಿಸಿಸಿ ಸದಸ್ಯ, ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ಕಲ್ಲೇಶ್‍ರಾಜ್ ಪಟೇಲ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಮುಖಂಡ ಅನೂಪ್, ಸಿ. ಲಕ್ಷಣ್ ಸೇರಿದಂತೆ ಮತ್ತಿತರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!