ಸುದ್ದಿವಿಜಯ, ಜಗಳೂರು: ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಗುರುವಾರ ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪತ್ರ ಮೇಳ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಚೆ ಅಧೀಕ್ಷಕ ಚಂದ್ರಶೇಖರ್ ಮಾತನಾಡಿ, 2023ನೇ ಏ.1 ರಿಂದ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಪ್ರಾರಂಭವಾಗಿದೆ. ಕೇಂದ್ರ ಸರಕಾರದ ಯೋಜನೆ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ.
ಮಹಿಳಾ ಸಬಲೀಕರಣ ಈ ಯೋಜನೆಯ ಮೂಲ ಉದ್ದೇಶ ಆಗಿರುತ್ತದೆ ಎಂದರು. ಮಹಿಳಾ ಸಮ್ಮಾನ ಉಳಿತಾಯ ಪತ್ರ ತೆರೆಯುವ ಗ್ರಾಹಕರಿಗೆ ಶೇ.7.5 ದರದಲ್ಲಿ ಬಡ್ಡಿ ಸಿಗುತ್ತದೆ. ಎರಡು ವರ್ಷಗಳ ಈ ಯೋಜನೆ ಉಳಿದ ನಿರ್ದಿಷ್ಟ ಠೇವಣಿ ಯೋಜನೆಗೆ ಹೋಲಿಸಿದರೆ ಹೆಚ್ಚು ಲಾಭದಾಯಕ ಹಾಗೂ ಈ ಯೋಜನೆ 2025ನೇ ಮಾರ್ಚ್ 31ರವರೆಗೆ ಲಭ್ಯವಿರುತ್ತದೆ.
ದಾವಣಗೆರೆ ಅಂಚೆ ವಿಭಾಗದಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪತ್ರ ಯೋಜನೆ ಎಲ್ಲಾ ಮಹಿಳೆಯರಿಗೆ ತಲುಪಿಸಲು ಅಂಚೆ ಕಚೇರಿಗಳಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಖಾತೆ ತೆರೆದ ಎಲ್ಲಾ ಅಂಚೆ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಒಂದು ಮೇಳದಲ್ಲಿ 555 ಖಾತೆ ತೆರೆದು ಬಿಳಿಚೋಡು ಮೊದಲ ಸ್ಥಾನದಲ್ಲಿದ್ದು ಒಟ್ಟು 18 ಲಕ್ಷ 4 ಸಾವಿರ ಠೇವಣಿ ಸಂಗ್ರಹವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಂಚೆ ಅಧೀಕ್ಷಕ ಗುರು ಪ್ರಸಾದ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಚೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಅಂಚೆ ಉಪ ಉಪ ಪಾಲಕ ರಾಜಶೇಖರ, ಜಾಕಿರ್ ಹುಸೇನ್, ರೇವಣ ಸಿದ್ದಪ್ಪ, ಶಿಧರ ಮೂರ್ತಿ, ಪುರುಷೋತ್ತಮ, ಬಿಳಿಚೋಡು ಅಂಚೆ ಕಚೇರಿ ಸಿಬ್ಬಂದಿ ಹಾಗೂ ಜಗಳೂರು ಅಂಚೆ ಕಚೇರಿ ಎಲ್ಲಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.