ಸುದ್ದಿವಿಜಯ, ಜಗಳೂರು: ತಾಲೂಕಿನ ಜ್ಯೋತಿಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಗುಡಿಸಲು ಭಸ್ಮವಾಗಿದ್ದು ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ವೈಯಕ್ತಿಕವಾಗಿ 25 ಸಾವಿರ ರೂ. ಧನ ಸಹಾಯ ಮಾಡಿ ಸಾಂತ್ವನ ಹೇಳಿ ತಕ್ಷಣವೇ ಮನೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜ್ಯೋತಿಪುರ ಗ್ರಾಮದ ಜಿ.ಬಸವರಾಜ್ ಗಂಗಮ್ಮ ಅವರು ಬೆಳಿಗ್ಗೆ ಜಮೀನಿಗೆ ಕೆಲಸಕ್ಕೆ ಹೋದಾಗ ಮನೆಯಲ್ಲಿದ್ದ ವಿದ್ಯುತ್ ಶಾರ್ಟ್ ಆಗಿದ್ದರಿಂದ ಗುಡಿಸಲು ಹೊತ್ತಿ ಉರಿದಿದೆ. ತಕ್ಷಣವೇ ಸ್ಥಳೀಯರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದಾರೆ.ಅಗ್ನಿ ಶಾಮನ ವಾಹನ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಗುಡಿಸಲಿನಲ್ಲಿದ್ದ ಕಾಳಿನ ಚೀಲ, ಟಿವಿ, ಮಂಚ, ಬಟ್ಟೆ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು.
ಬೆಂಕಿ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಎತ್ತುಗಳನ್ನು ಮಾರಿದ್ದ 60 ಸಾವಿರ ಮತ್ತು ಮನೆ ನಿರ್ಮಾಣಕ್ಕೆಂದು ಸಾಲ ಮಾಡಿ ತಂದಿಟ್ಟಿದ್ದ 50 ಸಾವಿರ ಹಾಗೂ 30 ಗ್ರಾಂ ಬಂಗಾರ ಸಂಪೂರ್ಣ ಸುಟ್ಟು ಹೋಗಿದ್ದು ಅಂದಾಜು ಎರಡು ಲಕ್ಷ ರೂ ನಷ್ಟವಾಗಿದೆ. ನಿತ್ಯ ಬಳಕೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ಬಸವರಾಜ್ ಪುತ್ರ ಹನುಮಂತ ಕಣ್ಣೀರು ಹಾಕಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ದೇವೇಂದ್ರಪ್ಪ ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಅರುಣ್ ಕಾರಗಿ ಮತ್ತು ಗ್ರಾಪಂ ಕಾರ್ಯದರ್ಶಿಗೆ ತಕ್ಷಣವೇ ಮನೆ ನಿರ್ಮಾಣಕ್ಕೆ ವ್ಯವಸ್ಥೆ ಮತ್ತು ಕುಟುಂಬದವರಿಗೆ ಊಟಕ್ಕೆ ಬೇಕಾಗುವ ದಿನಸಿ ವ್ಯವಸ್ಥೆ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ಸಿದ್ದೇಶ್ ಅವರಿಗೆ ಸೂಚಿನೆ ನೀಡಿದರು.ಬೆಸ್ಕಾಂ ಎಇಇಗೆ ಕರೆ ಮಾಡಿದ ಶಾಸಕ ಬಿ.ದೇವೇಂದ್ರಪ್ಪ ತಾತ್ಕಾಲಿಕವಾಗಿ ವಿದ್ಯುತ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಜಗಳೂರು ತಾಲೂಕಿನ ಜ್ಯೋತಿಪುರ ಗ್ರಾಮದಲ್ಲಿ ಶನಿವಾರ ಬೆಳಿಗೆ ಶಾರ್ಟ್ ಸಕ್ರ್ಯೂಟ್‍ನಿಂದ ಗುಡಿಸಲು ಭಸ್ಮವಾಗಿದ್ದು ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ಸಹಾಯಧನ ಮಾಡಿದರು.
ಕಾಂಗ್ರೆಸ್ ಮುಖಂಡರಾದ ತಮಲೇಹಳ್ಳಿ ಗುರುಮೂರ್ತಿ, ಗುತ್ತಿಗೆದಾರ ಸುಧೀರ್, ಲಕ್ಷ್ಮಣ, ಡಿ.ಆರ್.ಹನುಮಂತಪ್ಪ, ಬರ್ಕತ್ ಆಲಿಸಂತ್ರಸ್ತ ಕುಟುಂಬಕ್ಕೆ ಹತ್ತು ಸಾವಿರ ರೂ ಸಹಾಯ ಧನ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಕಂದಾಯಾಧಿಕಾರಿ ಧನಯಂಜಯ, ಗ್ರಾಪಂ ಅಧ್ಯಕ್ಷ ಸಿದ್ದೇಶ್, ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮದ್ ಗ್ರಾಪಂ ಸದಸ್ಯರು ಇದ್ದರು. ಈ ಅವಘಡ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.