ಸುದ್ದಿವಿಜಯ, ಬೆಂಗಳೂರು: ಜೂನ್.4 ರಂದು ಸಾಕಷ್ಟು ನೀರನ್ನು ಪಕ್ಕದಲ್ಲೇ ಇಟ್ಟುಕೊಳ್ಳಿ ಎಂದು ಪ್ರತಿಪಕ್ಷಗಳ ನಾಯಕರಿಗೆ ಚುನಾವಣಾ ಚತರು ಪ್ರವೀಣ್ ಕಿಶೋರ್ ಲೇವಡಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಕುರಿತಂತೆ ಇತ್ತೀಚೆಗೆ ಭವಿಷ್ಯ ನುಡಿದ್ದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ (ಪಿಕೆ) ಈ ರೀತಿ ಟ್ಟೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಸರಿಯಾದ ರೀತಿಯಲ್ಲಿ ತಂತ್ರಗಾರಿಕೆ ನಡೆಸದ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಟ್ಟಿಹಾಕಲು ಇದ್ದ ಕೆಲವು ಅತ್ಯುತ್ತಮ ಅವಕಾಶಗಳನ್ನು ಹಾಳು ಮಾಡಿಕೊಂಡಿವೆ ಎಂದು ಪಿಕೆ ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮೋದಿ ಅವರ ಜನಪ್ರಿಯತೆ ಕುಸಿದಿತ್ತು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿತ್ತು.
ಆ ವೇಳೆ ಮೋದಿ ಅವರನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಬಹುದಾಗಿತ್ತು. ಆದರೆ ವಿರೋಧ ಪಕ್ಷದವರು ತಮ್ಮತಮ್ಮ ಮನೆಗಳಲ್ಲೇ ಕುಳಿತರು. ಇದರಿಂದ ಪ್ರಧಾನಿ ಅವರು ರಾಜಕೀಯವಾಗಿ ಪುಟಿದೇಳಲು ಸಾಧ್ಯವಾಯಿತು.
ಚೆನ್ನಾಗಿ ಆಡುವ ಬ್ಯಾಟರ್‍ನ ಕ್ಯಾಚ್‍ಗಳನ್ನು ಕೈಚೆಲ್ಲಿ ಜೀವದಾನ ನೀಡಿದರೆ ಆತ ಶತಕ ಹೊಡೆಯುತ್ತಾನೆ ಎಂದು ಅವರು ಟ್ಟೀಟರ್‍ನಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಕುಟುಕಿದ್ದಾರೆ.