ಪ್ರಜಾಪ್ರಭುತ್ವ ಕಲ್ಪನೆಯ ಪಿತಾಮಹಾ ಬಸವಣ್ಣ : ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ

Suddivijaya
Suddivijaya May 10, 2024
Updated 2024/05/10 at 11:52 AM

ಸುದ್ದಿವಿಜಯ, ಜಗಳೂರು: ಪ್ರಜಾಪ್ರಭುತ್ವ ಕಲ್ಪನೆಯ ಪಿತಾಮಹಾ ಜಗಜ್ಯೋತಿ ಬಸವೇಶ್ವರರು ವಿಚಾರಧಾರೆಗಳನ್ನ ಪ್ರತಿ ಮನ ಮತ್ತು ಮನೆಗಳಿಗೆ ತಲುಪಿದಾಗ ಕಲ್ಯಾಣ ರಾಜ್ಯ ಸಾಧ್ಯ ಎಂದು ಪ್ರಗತಿಪರ ಚಿಂತಕರಾದ ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ ಹೇಳಿದರು.

ಪಟ್ಟಣದ ಪ್ರೇರಣಾ ಸಮಾಜ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ಕ್ರಾಂತಿಕಾರಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

12ನೇ ಶತಮಾನದಲ್ಲಿ ತುಂಬಿ ತುಳುಕುತ್ತಿದ್ದ ಅಂಧಕಾರ ಮೌಢ್ಯಾಚರಣೆ, ಜಾತಿಭೇದ, ಮೇಲು ಕೀಳು ಭಾವನೆಗಳ ವಿರುದ್ಧ ಹೋರಾಡಿ ಸಮಾನತೆ ಸಮಾಜವನ್ನು ನಿರ್ಮಾಣ ಮಾಡುವ ಕನಸ್ಸಿನೊಂದಿಗೆ ಅನುಭವ ಮಂಟಪ ನಿರ್ಮಾಣ ಮಾಡಿ ಭವಿಷ್ಯದ ಪ್ರಜಾಪ್ರಭುತ್ವ ಕಲ್ಪನೆಯನ್ನ ಹೊರತಂದರು.

ವಚನಗಳ ಮೂಲಕ ಲೋಕದ ಡೊಂಕವನ್ನು ತಿದ್ದುವ ಮೂಲಕ ಅಂಧಕಾರದ ವಿರುದ್ದ ಹೋರಾಡಿದ ಫಲವಾಗಿ ಮನುವಾಧಿಗಳ ಕುತಂತ್ರಕ್ಕೆ ಬಸವಣ್ಣ ಬಲಿಯಾದರು ಎಂದು ಖೇದ ವ್ಯಕ್ತಪಡಿಸಿದರು.ಜಗಳೂರು ಪಟ್ಟಣದ ಪ್ರೇರಣಾ ಚರ್ಚ್‍ನಲ್ಲಿ ಬಸವಣ್ಣನವರ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.ಜಗಳೂರು ಪಟ್ಟಣದ ಪ್ರೇರಣಾ ಚರ್ಚ್‍ನಲ್ಲಿ ಬಸವಣ್ಣನವರ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಸಿ.ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣ ಅವರನ್ನ ಕೇವಲ ವಚನದಿಂದ ಮಾತ್ರ ನೋಡಬಾರದು ಅವರು ಸಮಾಜದಲ್ಲಿ ಹುಟ್ಟದೆ ಇದ್ದರೆ ಅಂಬೇಡ್ಕರ್ ಅಂತ ನಾಯಕರಿಗೆ ಸಂವಿಧಾನ ಬರೆಯಲು ಸ್ಪೂರ್ತಿಯಾಗುತ್ತಿರಲಿಲ್ಲ.

ಹಲವಾರು ವಚನಕಾರರು ಶರಣರು ಸಂತರು ರಾಜ್ಯಕ್ಕೆ ಪರಿಚಯ ವಾಗುತ್ತಿರಲಿಲ್ಲ. ದೇವರ ಮೂರ್ತಿಯಾಗಿ ಪೂಜಿಸುವುದಕಿಂತ ಅವರ ಆದರ್ಶ ಮತ್ತು ಸಿದ್ದಾಂತಗಳನ್ನ ಪಾಲಿಸಿದಾಗ ಮಾತ್ರ ಬಸವಣ್ಣ ಅರ್ಥವಾಗಲು ಸಾಧ್ಯ ಎಂದರು.

ವಕೀಲ ಸಣ್ಣೋಬಯ್ಯ ಮಾತನಾಡಿ, ಮನುವಾದ ವಿರುದ್ದ ಕ್ರಾಂತಿ ಸಾರಿದ್ದ ಬಸವೇಶ್ವರ ಅವರಂತ ಮಹಾನ್ ಚಿಂತಕರನ್ನೆ ಬಿಡದ ಜಾತಿವಾದಿಗಳು ಗ್ರಂಥ ಬಂಡಾರವಾಗಿದ್ದ ಅನೇಕ ವಚನಗಳನ್ನ ಸುಟ್ಟರು ಸಹ ಅವರ ಹೆಸರು ಮಾತ್ರ ಅಜರಾಮರವಾಗಿದೆ ಎಂದರು.

ವಕೀಲರಾದ ರಂಗಸ್ವಾಮಿ, ರುದ್ರೇಶ್, ಮಹಾಂತೇಶ್, ತಿಪ್ಪೇಸ್ವಾಮಿ, ಡಿಎಸ್‍ಎಸ್ ಸಂಚಾಲಕ ಬಿ ಸತೀಶ್ ಪ್ರಗತಿಪರ ಹೋರಾಟಗಾರ ಆರ್.ಓಬಳೇಶ್ ಬಸವಣ್ಣ ಅವರ ವಿಚಾರಧಾರಿ ಮತ್ತು ಮೌಡ್ಯ ಮುಕ್ತ ಸಮಾನತೆ ಸಮಾಜದ ನಿರ್ಮಾಣ ಕುರಿತಾಗಿ ಅನೇಕ ವಿಚಾರಗಳನ್ನ ತಿಳಿಸಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಮರೇನಹಳ್ಳಿ ಬಸವರಾಜ್ , ಪಿ.ಮಂಜುನಾಥ್,ವಿಜಯ್ ಕೆಂಚೋಳ್, ಎಂ.ಎಸ್.ನಜೀರ್ ಅಹಮದ್, ಧನ್ಯಕುಮಾರ್ ನಾಯಕ ಸಮಾಜದ ಕಾರ್ಯದರ್ಶಿ ತಿಪ್ಪೇಸ್ವಾಮಿ,

ನೂರ್ ಅಹಮದ್ , ಕುಮಾರ ನಾಯ್ಕ ಓಬಳೇಶ್ ರಮೇಶ್ ಇಂದಿರಾ ಗುರುಸ್ವಾಮಿ, ಗೌರಿಪುರ ರಾಜಣ್ಣ, ವಕೀಲರು ಭೂಪತಿ, ಗುತ್ತಿದುರ್ಗ ರುದ್ರೇಶ್, ಸತೀಶ್, ಹನುಮಂತಪ್ಪ ಸೇರಿದಂತೆ ಹಲವರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!