ಸುದ್ದಿವಿಜಯ, ಜಗಳೂರು:ಪ್ರೇರಣಾ ಸಮಾಜ ಸೇವಾ ಸಂಸ್ಥೆ ಹಾಗೂ ಸರ್ಕಾರಿ ಯೋಗ ಮತ್ತು ಪ್ರಾಕೃತಿ ಚಿಕಿತ್ಸೆಯ ಕೇಂದ್ರ ಇವರ ಸಹಯೋಗದೊಂದಿಗೆ ವಿಶ್ವ ಯೋಗ ದಿನಚಾರಣೆ ಕಾರ್ಯಕ್ರಮವನ್ನು ಜಗಳೂರು ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ವೈದ್ಯಧಿಕಾರಿ ಡಾ ನಾಗರಾಜ್ ಅವರು ನೆರವೇರಿಸಿ ಬಳಿಕ ಮಾತನಾಡಿದ ಅವರು, ಭಾರತದ ಸಂಸ್ಕೃತಿಯ ಯೋಗ ವಿಶ್ವದಲ್ಲಿ ಯೋಗ ದಿನಚಾರಣೆ ಆಚರಿಸಲಾಗುತ್ತಿದೆ.
ಯೋಗ ಮನುಷ್ಯನಿಗೆ ಶಾರೀರಿಕ, ಮಾನಾಸಿಕ ಹಾಗೂ ಆಧ್ಯಾತ್ಮಿಕ ವಾಗಿ ಸಹಕಾರಿಯಾಗಿದೆ. ಮಾನವನಿಗೆ ಬರುವ ಹೆಚ್ಚಿನ ಕಾಯಿಲೆಗಳನ್ನ ವಾಸಿ ಮಾಡುವಲ್ಲಿ ಅನುಕೂಲವಾಗಿದೆ. ಪ್ರತೀ ದಿನ ಯೋಗ ಮಾಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರೇರಣಾ ಸಮಾಜ ಸೇವಾ ಸಂಸ್ಥೆ ನಿರ್ದೇಶಕ ಫಾದರ್ ಸಿಲ್ವೆಸ್ಟರ್ ಪಿರೇರ , ಸಹಾ ನಿರ್ದೇಶಕ ಫಾದರ್ ರೋನಾಲ್ಡ್ , ಫಾದರ್ ವಿಷಸ್ , ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಾ.ಪಿ ಎಸ್ ಅರವಿಂದ್ , ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಚಾಲಕಿ ಅಕ್ಕ ಭಾರತಿ, ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಕೇಂದ್ರ ವೈದೆ ಡಾ. ಶ್ವೇತ ಬೆಳಗಲಿ. ತಪಸ್ಸು ಟ್ರಸ್ಟ್ ಮುಖ್ಯಸ್ಥ ಮಂಜುನಾಥ್ , ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಇದ್ದರು.