ಸುದ್ದಿವಿಜಯ, ಜಗಳೂರು: ನಿರೀಕ್ಷೆಯಂತೆ ಪ್ರಸ್ತುತ ವರ್ಷ 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಖಾಸಗಿ ಶಾಲೆಗಳೇ ಮೈಲುಗೈ ಸಾಧಿಸಿವೆ.
ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಖಾಸಗಿ ಶಾಲೆಗಳಲ್ಲಿ ಬೆಸ್ಟ್ ಫಲಿತಾಂಶ ಬಂದಿದೆ. ಪಟ್ಟಣದ ಎನ್‍ಎಂಕೆ, ಜೆ.ಎಂ.ಇಮಾಂ ಶಾಲೆ, ಬಾಲಭಾರತಿ ಆಂಗ್ಲ ಮಾಧ್ಯಮ ಶಾಲೆ, ನವಚೇತನ ಶಾಲೆ,RVS ಶಾಲೆ ಮತ್ತು ದಿದ್ದಿಗೆ ಗ್ರಾಮದ ರೂರಲ್ ಪಬ್ಲಿಕ್ ಸ್ಕೂಲ್ ಉತ್ತಮ ಫಲಿತಾಂಶದ ಮೂಲಕ ಪೋಷಕರು ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
ಪಟ್ಟಣದ ಎನ್‍ಎಂಕೆ ಶಾಲೆಯ ಜೆ.ಎನ್.ಸಿಂಚನಾ(614), ಎನ್‍ಆರ್ ಸಂಜನಾ (605) ಮತ್ತು ಎಚ್.ಬಿ.ದೀಪಿಕಾ (605) ಅಂಗಳನ್ನು ಗಳಿಸುವ ಮೂಲಕ ಶೇ.91ರಷ್ಟು ಫಲಿತಾಂಶ ಬಂದಿದೆ.
ಜೆಎಂ ಇಮಾಂ ಶಾಲೆ ಫಲಿತಾಂಶ: ಪಟ್ಟಣದ ಜೆ.ಎಂ ಇಮಾಂ ಸ್ಮಾರಕ ಶಾಲೆಗೆ ಶೇ.93.47 ರಷ್ಟು ಫಲಿತಾಂಶ ಬಂದಿದ್ದು, ಎಂಜಿ ಸಿಂಚನಾ(611), ಮಹೇಶ್(608), ಕೆ.ಟಿ.ಅಮೃತಾ (600) ಪಡೆಯುವ ಮೂಲಕ ಉತ್ತೀರ್ಣರಾಗಿರುತ್ತಾರೆ.
RVS ಶಾಲೆ: ಸೌಮ್ಯಾ(596), ಹರ್ಷಿತಾ(590), ಮೊಹಮದ್ ಶೋಯಬ್(562) ಅಂಕಗಳಿಸಿದ್ದಾರೆ.
ಬಾಲಭಾರತಿ ಶಾಲೆ:
ಪಟ್ಟಣದ ಬಾಲಭಾರತಿ ಶಾಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಹೊರಬಂದಿದೆ. ಒಟ್ಟು 33 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಆಕಾಂಕ್ಷ(607), ವೈಷ್ಣವಿ (580) ಅಂಕಗಳಿಸುವ ಮೂಲಕ 86ರಷ್ಟು ಫಲಿತಾಂಶ ಬಂದಿದೆ.
ದಿವ್ಯ ಭಾರತಿ:ಶಾಲೆಯಲ್ಲಿ 26 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.45ರಷ್ಟು ಫಲಿತಾಂಶ ಬಂದಿದ್ದು, ಕರುಣಾ (424), ಶಶಿಕಲಾ (412) ಅಂಕಗಳಿಸಿದ್ದಾರೆ.
ಹೆಚ್ಚು ಅಂಕಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಮುಖ್ಯಸ್ಥರು, ಮುಖ್ಯೋಪಾಧ್ಯಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.