ದೊಡ್ಡಮಾರಿಕಾಂಭ ಜಾತ್ರೆಯ ವೇಳೆ ಸರಗು ಚೆಲ್ಲುವಾಗ ವಾಹನಗಳ ಜಖಂ, 16 ಜನರ ಮೇಲೆ ಎಫ್‍ಐಆರ್

Suddivijaya
Suddivijaya April 26, 2023
Updated 2023/04/26 at 11:28 PM

Suddivijaya/kannadanews/27/04/2023

ಸುದ್ದಿವಿಜಯ, ಜಗಳೂರು: ಪಟ್ಟಣದಲ್ಲಿ ನಡೆಯುತ್ತಿರುವ ದೊಡ್ಡಮಾರಿಕಾಂಭ ಜಾತ್ರೆಯ ಏ.26 ರಂದು ಬುಧವಾರ ಸರಗು ಚೆಲ್ಲುವಾಗ ಬೆಳಗಿನ ಜಾವ 4.30ಕ್ಕೆ ಸುಮಾರಿಗೆ 20 ರಿಂದ 30 ಜನರ ಗುಂಪು ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದು ಕಾರಿಗೆ ಸುತ್ತುವರೆದು, ಗಾರಿನ ಗಾಜುಗಳನ್ನು ಹೊಡೆದು ಜಖಂಗೊಳಿಸಿದ್ದಾರೆ ಎಂದು ದಾವಣಗೆರೆ ನಗರದ ಸಿದ್ದರಾಮೇಶ್ವರ ಬಡಾವಣೆಯ ಮೋನಿಕಾ ಎಂಬುವವರು ಜಗಳೂರು ಪಟ್ಟಣದಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣ ಸಂಬಂಧ 16 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು ಅವೆಲ್ಲರನ್ನೂ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಇದೇ ಸಮಯದಲ್ಲಿ ಜಗಳೂರಿನ ಬಾಲಾಜಿ ಎಲೆಕ್ಟ್ರಿಕಲ್ಸ್‍ನ ಮದನಲಾಲ್ ಮತ್ತು ರಾಮಲಿಂಗೇಶ್ವರ ಸ್ವಾಮೀಜಿಯವರ ಕಾರು ಬಂದಿದ್ದು, ಅವರ ಕಾರುಗಳನ್ನು ತಡೆದು ಕಟ್ಟಿಗೆಗಳಿಂದ ಹೊಡೆದು ಜಖಂಗೊಳಿಸಿ ಆ ಎರಡು ಕಾರಿನಲ್ಲಿದ್ದವರ ಬಳಿ ಹೆದರಿಸಿ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ. ಎಂದು ನೀಡಿದ ದೂರಿನ ಮೇರೆಗೆ 16 ಜನರ ವಿರುದ್ಧ ಐಪಿಸಿ: 1860ರ ಅಡಿ 427,341,504,143,147,148,149,395,308 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ತನಿಖೆಯನ್ನು ದಾವಣಗೆರೆ ಎಸ್‍ಪಿ ಡಾ.ಕೆ.ಅರುಣ್ ಮಾರ್ಗದರ್ಶನದಲ್ಲಿ ಜಗಳೂರು ಠಾಣೆಯ ಸಿಪಿಐ  ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು ಆರೋಪಿಗಳ ಮತ್ತೆ ಕಾರ್ಯ ಕೈಗೊಳ್ಳಲಾಗಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಬೀಸಿದ ಪೊಲೀಸರು:

ಪ್ರಕರಣ ಸಂಬಂಧ 16 ಜನರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿ ಬಂಧಿಸುತ್ತಿದ್ದಂತೆ ಬುಧವಾರ ಸಂಜೆ 6.30 ರ ಸುಮಾರಿಗೆ ಹಬ್ಬದ ದಿನ ನಮ್ಮವರನ್ನು ಏಕೆ ಬಂಧಿಸಿದ್ದೀರಿ? ವಾಹನ ಜಖಂಗೊಳಿಸಿದ್ದಕ್ಕೆ ಏನು ಸಾಕ್ಷಿಯಿದೆ ತೋರಿಸಿ. ನಮ್ಮವರನ್ನು ಬಿಡುಗಡೆ ಮಾಡಿ ಎಂದು ನೂರಾರು ಜನರು ಪೊಲೀಸ್‍ಠಾಣೆಯ ಮುಂದೆ ಜಮಾಯಿಸಿ ಪ್ರಶ್ನಿಸುವ ವೇಳೆ ಠಾಣೆಗೆ ನುಗ್ಗುವ ಹಂತದಲ್ಲಿದ್ದ ಜನರನ್ನು ತಡೆಯಲು ಹೋದಾಗ ನಿಯಂತ್ರಣಕ್ಕೆ ಬಾರದ ಕಾರಣ ಪೊಲೀಸರು ಲಾಠಿ ಬೀಸಿದ್ದಾರೆ.

ಈ ವೇಳೆ ಒಬ್ಬ ಯುವಕನಿಗೆ ಗಂಭೀರ ಗಾಯವಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಅನೇಕ ಮಹಿಳೆಯರಿಗೆ, ವಯಸ್ಕರರಿಗೆ, ಯುವಕರಿಗೆ, ಒಂದು ವರ್ಷದ ಮಗುವಿಗೂ ಪೊಲೀಸರ ಲಾಠಿ ಏಟು ಬಿದ್ದಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ತನಿಖಾ ಹಂತದಲ್ಲಿದೆ.

ಈ ಪ್ರಕರಣ ಸಂಬಂಧ 16 ಜನರನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ. ಈ ಪ್ರಕರಣ ಸಂಬಂಧ ಮಾಹಿತಿ ತಿಳಿದು ಬಂದಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ.
-ಡಾ.ಕೆ.ಅರುಣ್, ಎಸ್.ಪಿ.ದಾವಣಗೆರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!