ಸುದ್ದಿವಿಜಯ, ಜಗಳೂರು: ತಾಲೂಕು ಗೂಗುದ್ದು ಗ್ರಾಮದ ಹಣ್ಣಿನ ವ್ಯಾಪಾರಿ ಈಶಪ್ಪ ಮತ್ತು ಸರಿತಾ ದಂಪತಿ ಮಗಳಾದ ಈ.ಸಹನಾ ಅವರು ಪಿಯುಸಿ ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ದಾವಣಗೆರೆಯ ಅವರಗೊಳ್ಳದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯುತ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯೆ ಯಾರಪ್ಪನ ಸೊತ್ತಲ್ಲ, ಸಾಧಕರ ಸೊತ್ತು ಎಂಬುದಕ್ಕೆ ರೈತಾಪಿ ವರ್ಗದ ಈ.ಸಹನಾ ಅವರೇ ನಿದರ್ಶನ.
ಪೋಷಕರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ ಸಹ ಹೆತ್ತವರಿಗೆ ಹೊರೆಯಾಗಬಾರದು ಎಂದು ಸಿಕ್ಕ ಸರಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಅಂಕಗಳನ್ನು ಪಡೆಸಿದ್ದಾರೆ.
ಮಗಳ ಸಾಧನೆ ಬಗ್ಗೆ ಈಶಪ್ಪ ಸಂತೋಷ ವ್ಯಕ್ತಪಡಿಸಿದರು. ಮಗಳು ವಿದ್ಯಾಭ್ಯಾಸ ಮಾಡಲಿ ಎಂದು ನಮ್ಮ ಕಷ್ಟಗಳನ್ನು ತೋರಿಸದೇ ಅವಳಿಗೆ ಬೆಂಬಲವಾಗಿ ನಿಂದೆವು. ಅವಳು ಕಷ್ಟ ಪಟ್ಟು ಓದಿದ್ದಾಳೆ ಎಂದು ಖುಷಿಪಟ್ಟರು.
ಸಹನಾ ಸಾಧನೆಗೆ ಗ್ರಾಮಸ್ಥರು, ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ಸಿಹಿ ತಿನಿಸಿ ಸಂತೋಷ ಹಂಚಿಕೊಂಡರು.
ಸಾಧಕಿ ಸಹನಾ ಅಂಕಗಳೆಷ್ಟು:
ಕನ್ನಡ -98, ಇಂಗ್ಲಿಷ್ -85, ಭೌತಶಾಸ್ತ್ರ -92, ರಾಸಾಯನಿಕ ಶಾಸ್ತ್ರ 93, ಗಣಿತ-98, ಜೀವಶಾಸ್ತ್ರ 97, ಒಟ್ಟು ಆರು ನೂರಕ್ಕೆ563 ಅಂಕಗಳನ್ನು ಗಳಿಸಿ ಕಾಲೇಜಿಗೆ ತಾಲೂಕಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ