ಸುದ್ದಿವಿಜಯ,ಜಗಳೂರು:ಪಟ್ಟಣದ ನಾಲಂದ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎ.ಎಸ್ ಶಾಂತೇಶ್ 583(ಶೇ.97.2) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ.
ತಾಲೂಕಿನ ಹೊಸಕೆರೆ ಗ್ರಾಮದ ಚಂದ್ರಕಲಾ ಶಂಕರಚಾರಿ ಇವರ ಪುತ್ರ ಎ.ಎಸ್ ಶಾಂತೇಶ್ ಪರಿಶ್ರಮದ ಫಲವಾಗಿ ಉತ್ತಮ ಫಲಿತಾಂಶ ಪಡೆದ ತಾಲೂಕಿಗೆ ಕೀರ್ತಿ ತಂದಿದ್ದಾನೆ.
ತಂದೆ ಶಂಕರಚಾರಿ ವೃತ್ತಿಯಲ್ಲಿ ಪುರೋಹಿತರಾಗಿದ್ದು, ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ವಿದ್ಯಾರ್ಥಿ ಎ.ಎಸ್ ಶಾಂತೇಶ್ ಊರಿಂದ ಓಡಾಡುತ್ತಾ ವಿದ್ಯಾಭ್ಯಾಸ ಮಾಡಿದ್ದು,
ಕಾಲೇಜಿನಲ್ಲಿ ಒಂದು ದಿನವೂ ಗೈರಾಗದೇ ನಿತ್ಯ ತರಗತಿಯಲ್ಲಿ ಪಾಲ್ಗೊಂಡು ಪರಿಶ್ರಮದಿಂದ ಓದಿದ ಫಲವಾಗಿ ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಮುಷ್ಠಿಗರಹಳ್ಳಿ ಗ್ರಾಮದ ನಿಹಾರಿಕ 568, ಜಗಳೂರಿನ ರಾಜೇಶ್ವರಿ 568, ವಿಕಾಸ್ 538, ಸಹನ 536, ಸಹನ 533 ಸಬೀಲ ಅಹಮದ್ 526, ವರ್ಷ ನಾಗೇಶ್ 434 ಅಂಕಗಳನ್ನು ಪಡೆದಿದ್ದಾರೆ. ಕಾಮರ್ಸ್‍ನಲ್ಲಿ ತೇಜಸ್ವನಿ 549 ಅಂಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾವಿಭಾಗದಲ್ಲಿ ಸಂದೀಪ್ ರ್ಯಾಂಕ್
ತಾಲೂಕಿನ ಕಮಂಡಲಗೊಂದಿ ವಾಸುದೇವರೆಡ್ಡಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಎನ್.ಸಂದೀಪ್ 584 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ.
ಮಲ್ಲಾಪುರ ಗ್ರಾಮದ ಬಡ ಕೂಲಿಕಾರನ ಮಗನಾದ ಎನ್.ಸಂದೀಪ್ ಗ್ರಾಮೀಣ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆ.ಎಂ ಕೌಶಿಕ್‍ಸ್ವಾಮಿ ಶಿಕ್ಷಣ ಶಾಸ್ತ್ರದಲ್ಲಿ 582 ಅಂಕಗಳನ್ನು ಪಡೆದಿದ್ದಾನೆ. ಎಂ.ಸಿ ಕಾರ್ತಿಕ್ ಕಾಮರ್ಸ್‍ನಲ್ಲಿ 569 ಅಂಕ ಪಡೆದ ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.