ಸುದ್ದಿವಿಜಯ, ಜಗಳೂರು: ಮಣ್ಣು ಮತ್ತು ನೀರು ಮಲೀನವಾದರೆ ಭವಿಷ್ಯದಲ್ಲಿ ಆಪತ್ತು ಬಣ್ಣ ಹೆಚ್ಚದ ಶುದ್ಧ ಮಣ್ಣಿನ ಗಣಪತಿಗಳನ್ನು ರಚಿಸಿ ಮಣ್ಣಿನ ಮತ್ತು ನೀರಿನ ಆರೋಗ್ಯ ಕಾಪಾಡಿ ಎಂದು ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಾಧಿಕಾರಿ ಡಾ. ಲಕ್ಷ್ಮೀಕಾಂತ್ ಮಕ್ಕಳಿಗೆ ಅರಿವು ನೀಡಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಪಟ್ಟಣ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಯೂತ್‍ಫಾರ್ ಸೇವಾ ಇವರ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಭೂಮಿಯ ಮೇಲಿರುವ ಮನುಷ್ಯ, ಪ್ರಾಣಿ ಸೇರಿದಂತೆ ಸಕಲ ಜೀವರಾಶಿಗಳಿಗೂ ಮಣ್ಣು, ನೀರು, ಮರ ಬಹುಮುಖ್ಯವಾಗಿವೆ. ಇದರಲ್ಲಿ ಒಂದಿಲ್ಲವಾದರೂ ಬದುಕುವುದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲವನ್ನು ಮಿತವಾಗಿ ಬಳಸಿ ಉಳಿಸಬೇಕು ಎಂದು ತಿಳಿಸಿದರು.
ಮಕ್ಕಳು ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು, ಕಡಿಮೆ ಊಟ ಮಾಡಿ, ಹೆಚ್ಚು ನೀರು ಕುಡಿದು ಆರೋಗ್ಯವನ್ನು ಕಾಪಾಡಿಕೊಂಡರೆ ಆಯುಷ್ ದಿನಗಳ ಹೆಚ್ಚಾಗುತ್ತವೆ. ಪರಿಸರ ಸ್ನೇಹಿ ಮಣ್ಣಿನ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಪ್ಲಾಸ್ಟಿಕ್, ಬಣ್ಣ ಸಹಿತ ಮೂರ್ತಿಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಅತಿಯಾದ ಪ್ಲಾಸ್ಟಿಕ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ಬಳಕೆ ಮಾಡಬಾರದು, ಬಣ್ಣ ತಯಾರಿಕೆಯೊಳಗೆ ಲೋಹ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.ಬಣ್ಣ ನೀರೊಳಗೆ ಸೇರಿದರೆ ಜಲಚರಗಳು, ತರಕಾರಿ, ನೀರು ಕುಡಿ ಯುವುದ ರಿಂದ ವಿಷ ಯುಕ್ತವಾಗಲಿದೆ ಎಂದು ಸಲಹೆ ನೀಡಿದರು.
ಸಿಪಿಐ ಎಂ.ಶ್ರಿನಿವಾಸ್‍ರಾವ್ ಮಾತನಾಡಿ, ಪಿಒಪಿ, ಬಣ್ಣ ಲೇಪಿತ ಗಣೇಶ ಮೂರ್ತಿಯನ್ನು ಕೂರಿಸುವುದನ್ನು ತಡೆಯಬೇಕು. ಮಣ್ಣಿನ ಗಣೇಶಮೂರ್ತಿಯನ್ನು ನೀರಿನಲ್ಲಿಟ್ಟು ಕರಗಿಸಿ ಆ ನೀರನ್ನು ಸಸಿಗಳಿಗೆ ಹಾಕುವುದರಿಂದ ಸಮೃದ್ದಿಯಾಗಿ ಬೆಳೆಯುತ್ತವೆ ಎಂದರು.360ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಾಧ್ಯತೆ ಇದೆ. ಆದ್ದರಿಂದ ಪ್ರತಿ ಹಳ್ಳಿಯಲ್ಲಿ ಮಣ್ಣಿನ ಗಣೇಶ ಕೂರಿಸಲು ಎಲ್ಲರು ಸಹಕರಿಸಬೇಕು ಎಂದರು. ಯಾವುದೇ ಅಹಿತರ ಘಟನೆ, ಗಲಾಟೆ, ಕಳ್ಳತನ, ದೌರ್ಜನ್ಯಗಳು ನಡೆದಾಗ ತಕ್ಷಣವೇ ಪೊಲೀಸ್ ಇಲಾಖೆಯ 112 ನಂಬರ್ ಕರೆ ಮಾಡಿ ಅಪರಾಧ ತಡೆಯಬಹುದು ಎಲ್ಲರು ಸದುಪಯೋಗಪ ಡಿಸಿಕೊಳ್ಳಬಹುದು ಎಂದರು.
ಯೂತ್‍ಫಾರ್ ಸೇವಾ ಮುಖ್ಯಸ್ಥ ದಿದ್ದಿಗಿ ಪ್ರಶಾಂತ್ 200ಕ್ಕೂ ವಿದ್ಯಾರ್ಥಿಗಳಿಗೆ ಗಣೇಶಮೂರ್ತಿ ತಯಾರಿಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಜೆಎಂ ಇಮಾಂ ಶಾಲೆ, ಬಾಲಭಾರತಿ, ಎನ್‍ಎಂಕೆ. ಆರ್‍ವಿಎಸ್ ಸೇರಿದಂತೆ ಪಟ್ಟಣದ ವಿವಿಧ ಶಾಲೆಗಳ ಪ್ರೌಢಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡು ಶುದ್ಧ ಮಣ್ಣಿಗ ಗಣೇಶ ಮೂರ್ತಿಗಳನ್ನು ತಯಾರಿಸಿದರು.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ.ಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್, ಶಿಕ್ಷಕ ರಮೇಶ್ ಸೇರಿದಂತೆ ಮತ್ತಿತರಿದ್ದರು.