ಸುದ್ದಿವಿಜಯ, ಜಗಳೂರು: ಸರಕಾರಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿಸಿರುವ ರೈತರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಇದುವರೆಗೂ ರೈತರಿಗೆ ಗ್ರೀನ್ ವೋಚರ್ ನೀಡಿಲ್ಲ ಎಂದು ರೈತರು ತಹಶೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ದೂರು ನೀಡಿದ ರೈತರು, ಬೆಂಬಲ ಬೆಲೆ ಯೋಜನೆ ಅಡಿ ಜನವರಿ 30 ರಿಂದ ರಾಗಿ ಖರೀದಿಸಿದ್ದು, ಇದುವರೆಗೂ 547 ರೈತರಿಂದ 20 ಕ್ವಿಂಟಲ್ ನಂತೆ ರಾಗಿ ಖರೀದಿಸಲಾಗಿದೆ. ಆದರೆ ಗ್ರೀನ್ ವೋಚರ್ ನೀಡಿಲ್ಲ. ಮಾರಾಟ ಮಾಡಿದ ರಾಗಿಗೆ ರೈತರಿಂದ ಸ್ಪಂದನೆ ಸಿಕ್ಕಿಲ್ಲ. ಕಳೆದ ಎರಡು ತಿಂಗಳಿಂದ ರೈತರನ್ನು ಅಲೆದಾಡಿಸುತ್ತಿದ್ದಾರೆ. 1500 ರೈತರ ಖಾತೆಗೆ ಹಣ ಜಮಾವಣೆಯಾಗಿಲ್ಲ.
ಶೀಘ್ರವೇ ರಾಗಿ ಮಾರಾಟ ಮಾಡಿದ ರೈತರಿಗೆ ಹಣ ನೀಡದೇ ಇದ್ದರೆ ಮೇ.10 ರಂದು ನಡೆಯಲಿರುವ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಹೇಳಿದರು.
ರೈತಮುಖಂಡ ನಿಂಗಪ್ಪ, ಶಿವಣ್ಣ ಬಸವರಾಜ್, ಬೀರಪ್ಪ, ಎಸ್.ಎ.ಬಸವರಾಜ್, ಕೆ.ಬಿ.ಮಂಜುನಾಥ್, ಸೈಫುದ್ದೀನ್, ಚೌಡಮ್ಮ, ಓಬಣ್ಣ, ತಿಮ್ಮಕ್ಕ ಸೇರಿದಂತೆ ನೂರಾರು ರೈತರು ಸಹಿ ಮಾಡಿದ ಪತ್ರದೊಂದಿಗೆ ಕೆಲವೇ ರೈತರು ತಹಶೀಲ್ದಾರ್ ಕಚೇರಿಗೆ ಅವರಿಗೆ ಮನವಿ ಸಲ್ಲಿಸಿದರು.