ಸುದ್ದಿವಿಜಯ, ಜಗಳೂರು: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿ ಕುಂಭದ್ರೋಣ ಮಳೆಯ ರುದ್ರನರ್ತನ ಮಾಡಿದೆ. ಜೋರು ಗಾಳಿ, ವಿಪರೀತ ಗುಡುಗು, ಮಿಂಚು, ಸಿಡಿಲಿನ ನರ್ತನಕ್ಕೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಯಾಗಿದೆ.
ರಾತ್ರಿ ಭಾರಿ, ಗುಡುಗು, ಸಿಡಿಲು ಸಹಿತ ಆರಂಭವಾದ ಮಳೆ ನಾಲ್ಕು ತಾಸು ಸುರಿಯಿತು. ಮಳೆಯ ಆರ್ಭಟಕ್ಕೆ ತೆಂಗು, ಅಡಕೆ, ಬಾಳೆ ಬೆಳೆಗಳು ನೆಲಕ್ಕೆ ಬಿದ್ದಿವೆ. ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ತಾಲೂಕಿನ ಮುಷ್ಟಿಗರಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಾಗರಾಜ್ ಎಂಬುವರಿಗೆ ಸೇರಿದ ಆಕಳು ಮೃತಪಟ್ಟಿದೆ. ರಸ್ತೆ ಮಾಕುಂಟೆ 2, ಕಾಟನೇಹಳ್ಳಿ 2, ರಸ್ತೆ ಮಾಕುಂಟೆ ಗೊಲ್ಲರಹಟ್ಟಿ 2 ಮುಚ್ಚನೂರು 2 ವಿದ್ಯುತ್ ಕಂಬಗಳು ಬುಡ ಸಮೇತ ಮಕಾಡೆ ಬಿದ್ದಿವೆ, ಇದರಿಂದ ಬಹುತೇಕ ಗ್ರಾಮಗಳಲ್ಲಿ ರಾತ್ರಿ ಪೂರ್ತಿ ವಿದ್ಯುತ್ ನಿಲುಗಡೆ ಆಗಿತ್ತು.
ಕೂಲಂಗಟ್ಟೆ ಗ್ರಾಮದ ರೈತರ ರುದ್ರೇಶ್ ಅವರ 3 ಎಕರೆ ಅಡಕೆ ತೋಟ ಸಿಡಿಲಿಗೆ ಹಾನಿಯಾಗಿದೆ. ಕೆಳಗೋಟೆ ಗ್ರಾಮದ ವಿಶಾಲಕ್ಷಮ್ಮ, ಶಂಭು ಮನೆ, ಬಣಕಾರು ಶರಣಪ್ಪ ದನದಕೊಟ್ಟಿಗೆ,
ದೇವಿಕೆರೆ ಪ್ರೇಮಕ್ಕ, ಮಲ್ಲಾಪುರ ತಿಪ್ಪೇಸ್ವಾಮಿ, ಕಟ್ಟಿಗೆ ಹಳ್ಳಿಯಲ್ಲಿ 1 ಮನೆ, ದೊಡ್ಡಬೊಮ್ಮನಹಳ್ಳಿ ಲಕ್ಕಮ್ಮ ಮನೆ ಸಂಪೂರ್ಣ ಕುಸಿದು ಬಿದ್ದಿವೆ. ಅಣಬೂರು ನಾಗರಾಜ್ ಮನೆ, ಮರಿಕುಂಟೆ 1, ಮಾಳಮ್ಮನಹಳ್ಳಿ 1 ಸೇರಿದಂತೆ 15ಕ್ಕೂ ಹೆಚ್ಚು ಮನೆಗಳು ಮಳೆ ಕುಸಿದು ಬಿದ್ದಿವೆ.
ಬಾರದ ಕೆರೆಗೆ ಬಂತು ನೀರು:
ಗಡಿಮಾಕುಂಟೆ ಗ್ರಾಮದ ಕೆರೆಯೂ ದಶಕದ ನಂತರ ಉತ್ತಮ ಮಳೆಯಿಂದಾಗಿ 6 ಅಡಿಯಷ್ಟು ನೀರು ಸಂಗ್ರಹವಾಗಿದೆ. ಎಷ್ಟೆ ಮಳೆ ಬಂದರೂ ಕೆರೆ ನೀರು ಬರುತ್ತಿರಲಿಲ್ಲ.ಆದರೆ ವರ್ಷದ ಮುಂಗಾರು ಮುನ್ನವೆ ಕೆರೆ ನೀರು ಬಂದಿರುವುದರಿಂದ ರೈತರ ಮುಖದಲ್ಲಿ ಹರ್ಷ ತಂದಿದೆ. ಈಗೆ ಎರಡ್ಮೂರು ಮಳೆ ಬಂದರೆ ಕೆರೆ ಕೋಡಿಬೀಳುವ ಸಾಧ್ಯತೆ ಇದೆ.
ಜಗಳೂರು ಕೆರೆ, ಸೊಕ್ಕೆ, ಕೆಳಗೋಟೆ, ಸಂಗೇನಹಳ್ಳಿ ಕೆರೆ, ಹುಚ್ಚವ್ವನಹಳ್ಳಿ ಕೆರೆಗಳಿಗೆ ಸ್ವಲ್ಪ ಮಟ್ಟಿಗೆ ನೀರು ಬಂದಿದ್ದು, ಕೆರೆಗಳಿಗೆ ಜೀವ ಕಳೆ ಬಂದಿದೆ.