ಸುದ್ದಿವಿಜಯ, ಜಗಳೂರು: ರಾಜ್ಯದಲ್ಲಿ ಇನ್ನು ಐದು ದಿನಗಳ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಡುವೆ ಜಗಳೂರು ತಾಲೂಕಿನಲ್ಲಿ ಭಾನುವಾರ ಮಧ್ಯಾಹ್ನದಿಂದ ಇಡೀ ರಾತ್ರಿ ಸುರಿದ ಮಳೆ ಸಮೃದ್ಧವಾಗಿದೆ.
ದಕ್ಷಿಣಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಾವಣಗೆರೆ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ 2 ದಿನ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.ರಾಜ್ಯದ ಹಲವೆಡೆ ಇನ್ನು 5 ದಿನ ಭಾರಿ ಮಳೆಯಾಗಲಿದೆ. ಇದರ ಪರಿಣಾಮ ಭಾನುವಾರ ಮಧ್ಯಾಹ್ನದಿಂದ ಸುರಿದ ಮಳೆ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕೆರೆ, ಕಟ್ಟೆ, ಬಾವಿಗಳಲ್ಲಿ ನೀರು ಬಂದಿದೆ.
ಹುಚ್ಚವ್ವನಹಳ್ಳಿ, ಕಾನನಕಟ್ಟೆ, ಬಂಗಾರಕ್ಕನಗುಡ್ಡ, ಹಿರಮೇಲ್ಲನಹೊಳೆ, ಅಣಬೂರು ಗೋಗುದ್ದು, ಹನುಮಂತಾಪುರ, ಚಿಕ್ಕಮಲ್ಲನಹಳ್ಳಿ, ಜಗಳೂರು ಪಟ್ಟಣ, ಕಟ್ಟಿಗೆಹಳ್ಳಿ, ಅರಿಶಿಗುಂಡಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ವರುಣನ ಅಬ್ಬರ ಜೋರಾಗಿತ್ತು.
ಹುಚ್ಚವ್ವನಹಳ್ಳಿ ಕೆರೆ ಶೇ.30 ಅಣಬೂರು ಹಳ್ಳ ತುಂಬಿ ಹರಿಯುತ್ತಿದೆ. ಕಾನಕಕಟ್ಟೆ ಗ್ರಾಮದಲ್ಲಿ ಕಾರು ಕೊಚ್ಚಿ ಹೋಗಿದೆ. ಕಾರಲ್ಲಿ ಇದ್ದ ಪ್ರಯಾಣಿಕರಿಗೆ ಈಜು ಬಂದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ,ಇನ್ನು ಕಾರು ನುಚ್ಚು ಗುಚ್ಚಾಗಿ ಸೇತುವೆಯೊಂದಕ್ಕೆ ತಡೆದು ನಿಂತಿದ್ದು, ಬೆಳಿಗ್ಗೆ ಹರಿಯುವ ನೀರಿನ ರಭಸ ಕಡಿಮೆಯಾದ ನಂತರ ಕಾರನ್ನು ಮೇಲಕ್ಕೆ ಎತ್ತಿದ್ದಾರೆ.