ಸುದ್ದಿವಿಜಯ, ಜಗಳೂರು: ಕಳೆದೊಂದು ವರ್ಷಗಳಿಂದ ಮಳೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.
ಇಷ್ಟು ದಿನ ಮಳೆ ಬರಲಿ ದೇವರೇ ಅಂತಾ ಬೇಡಿಕೊಂಡಿದ್ದ, ಕನ್ನಡ ನಾಡಿಗೆ ಇದೀಗ ಭರ್ಜರಿ ಮಳೆಯ ಸಿಂಚನ ಆಗುತ್ತಿದೆ.
ಅದ್ರಲ್ಲೂ ಇಷ್ಟುದಿನ ಬಿದ್ದ ಮಳೆ ಬರೀ ಸ್ಯಾಂಪಲ್, ಇನ್ನು ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಅಸಲಿ ಮಳೆ ಶುರುವಾಗಲಿದ್ದು ಎಲ್ಲಾ ಕಡೆಯೂ ಭರ್ಜರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಮಳೆ ಇಲ್ಲದೆ ಕನ್ನಡ ನಾಡಿನ ರೈತರು ಪರದಾಡಿದ್ದರು. ದೇವರೆ ಒಂದೇ ಒಂದು ಭರ್ಜರಿ ಮಳೆ ಕೊಡು ಅಂತಾ ಕೃಷಿಕರು ದೇವರ ಮೊರೆ ಹೋಗಿದ್ದರು.
ಹೀಗಿದ್ದಾಗ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಬಿಂದಿಗೆ, ಟ್ಯಾಂಕರ್ ಹೀಗೆ ಪೈರುಗಳಿಗೆ ನೀರು ಹಾಕಲು ತೀವ್ರ ಕಷ್ಟ ಪಟ್ಟಿದ್ದರು. ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತು ಹೋಗಿದ್ದರು.ನೆಲ ಸಂಪೂರ್ಣ ಒಣಗಿ, ಬೆಳೆ ಕೂಡ ನಾಶವಾಗುತ್ತಿತ್ತು. ಹೀಗಿದ್ದಾಗ ರೊಚ್ಚಿಗೆದ್ದ ವರುಣ ದೇವ ಕನ್ನಡ ನಾಡಿನ ಜನರ ಮೇಲೆ ಕೃಪೆ ತೋರಿದ್ದು ಭರ್ಜರಿಯಾಗಿ ಮಳೆ ಸುರಿಸಲು ಶುರು ಮಾಡಿದ್ದಾನೆ.
ಅದರಲ್ಲೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ನಿರಂತರವಾಗಿ ಭರ್ಜರಿ ಮಳೆ ಬೀಳಲಿದೆ.
ಬೆಂಗಳೂರು ನಗರ, ವಿಜಯಪುರ, ರಾಯಚೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ , ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ
ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ರಾಮನಗರ ಚಿಕ್ಕಮಗಳೂರು , ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುತ್ತೆ ಎನ್ನಲಾಗಿದೆ. ಹಾಗೇ ಮೇ ತಿಂಗಳು ಪೂರ್ತಿ ಮಳೆಯ ಅಬ್ಬರವು ಇದೇ ರೀತಿ ಮುಂದುವರಿಯುತ್ತೆ ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.