ಮೀನುಗಾರಿಕೆ ನೀತಿ ಜಾರಿಗೆ ಚಿಂತನೆ: ಶಾಸಕ ಬಿ.ದೇವೇಂದ್ರಪ್ಪ

Suddivijaya
Suddivijaya September 11, 2023
Updated 2023/09/11 at 3:36 PM

ಸುದ್ದಿವಿಜಯ, ಜಗಳೂರು: ಮೀನುಗಾರಿಕೆ ತಲ ತಲಾಂತರದಿಂದ ದಿಂದ ಬಂದ ಒಂದು ಸಮುದಾಯದ ವೃತ್ತಿಯಾಗಿದ್ದು ಮೀನಿನ ಸಂತತಿ ಮುಂದಿನ ತಲೆಮಾರಿಗೂ ಉಳಿಯಬೇಕಾದರೆ ಸರಕಾರ ಮೀನುಗಾರಿಕೆ ನೀತಿ ಜಾರಿಗೆ ತರಲು ಚಿಂತನೆ ಮಾಡುತ್ತದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಸಂಗೇನಹಳ್ಳಿಯಲ್ಲಿ ಸೋಮವಾರ ಮೀನುಗಾರರಿಗೆ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಮ್ಮಿಕೊಂಡಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಇಲಾಖೆ ಯೋಜನೆಗಳ ಮಾಹಿತಿ ಕಾರ್ಯಾಗಾರ ಹಾಗೂ ಕೆರೆಗೆ ಮೀನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗಳೂರು ತಾಲೂಕಿನ ಸಂಗೇನಹಳ್ಳಿಯಲ್ಲಿ ಸೋಮವಾರ ಮೀನು ಬಿಡುವ ಕಾರ್ಯಕ್ರಮಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಚಾಲನೆ ನೀಡಿದರು.ಜಗಳೂರು ತಾಲೂಕಿನ ಸಂಗೇನಹಳ್ಳಿಯಲ್ಲಿ ಸೋಮವಾರ ಮೀನು ಬಿಡುವ ಕಾರ್ಯಕ್ರಮಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಚಾಲನೆ ನೀಡಿದರು.

ಸಂಗೇನಹಳ್ಳಿ ಕೆರೆ ದೊಡ್ಡದಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಡಿ ಇದೇ ಕೆರೆಗೆ ಮೊದಲು ನೀರು ತುಂಬಿಸಿ ನಂತರ ಇತರೆ ಕೆರೆಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಕೆರೆ ಉಳಿವಿಗಾಗಿ ಎಲ್ಲರು ಕೈಜೋಡಿಸಬೇಕು, ಕೆರೆ ಜೀವಂತಿಕೆ ಕಾಪಾಡಿದರೆ ಅಂತರ್ಜಲ ವೃದ್ದಿಗೊಂಡು ಕೊಳವೆಬಾವಿಗಳು ಮರುಪುರಣಗೊಳ್ಳುತ್ತವೆ. ಕೆರೆಗಳ ಬಗ್ಗೆ ನಿರ್ಲಕ್ಷ ಬೇಡ, ಕಾಳಜಿ ಇರಲಿ ಎಂದು ಸಲಹೆ ನೀಡಿದರು.

ಮೀನು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಅದನ್ನು ಸೇವಿಸುವುದರಿಂದ ಕೊಬ್ಬಿನಿಂದ ದೂರ ಉಳಿಯಬಹುದು, ಬುದ್ದಿಮಟ್ಟ ಚುರುಕಾಗಲಿದೆ. ಹಾಗಾಗಿ ಮೀನು ಸಾಕಾಣಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಅಣ್ಣಪ್ಪಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪ.ಪಂ ಸದಸ್ಯರಾದ ರಮೇಶ್, ತಾನಾಜಿ ಗೋಸಾಯಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಸಣ್ಣಸೂರಯ್ಯ, ಕುರಿ ಜಯ್ಯಣ್ಣ,ಮಾಜಿ ಪ.ಪಂ ಅಧ್ಯಕ್ಷ  ಜಯ್ಯಣ್ಣ, ಗೋಪಿ, ಮಹಮದ್ ಗೌಸ್, ಶೇಖರಪ್ಪ, ಮಹಮದ್ ಅಲಿ, ಅನೂಪ್ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!