suddivijaya8/08/2028
ಸುದ್ದಿವಿಜಯ, ಜಗಳೂರು; ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಿ.ಎಂ.ಕರುಣ ಎಂಬ ರೈತನ ಹೊಲದ ಬದುವಿನಲ್ಲಿದ್ದ ಎರಡು ಬೃಹತ್ ಶ್ರೀಗಂಧದ ಮರಗಳನ್ನು ಗಂಧದ ಮರ ಕಳ್ಳರು ಬುಧವಾರ ರಾತ್ರಿ ಕತ್ತರಿಸಿಕೊಂಡು ಹೋಗಿದ್ದಾರೆ.
ಕಳೆದ 10 ವರ್ಷಗಳಿಂದ ತಮ್ಮ ಜಮೀನನಲ್ಲಿ ರೈತ ಕರುಣ ಶ್ರೀಗಂಧದ ಮರಗಳನ್ನು ನೆಟ್ಟು ಬೆಳಸಿದ್ದರು. ಬುಧವಾರ ತಡ ರಾತ್ರಿ ಬಂದ ಶ್ರೀಗಂಧದ ಮರಗಳ ಕಳ್ಳರು ಮಷೀನ್ ಕಟ್ಟರ್ ಬಳಸಿ ಮರದ ಬುಡಗಳನ್ನು ಕತ್ತರಿಸಿ ರೆಂಬೆ ಕೊಂಬೆಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಮರುದಿನ ರೈತ ಬಂದು ವೀಕ್ಷಿಸಿದಾಗ ಮರಗಳಿಗೆ ಕೊಡಲಿ ಬಿದ್ದಿರುವುದು ಗೊತ್ತಾಗಿ ಸುತ್ತ ಮುತ್ತಲಿನ ಜಮೀನಿನ ರೈತರಲ್ಲಿ ವಿಚಾರಿಸಿದ್ದಾರೆ ನಂತರ ಜಮೀನಿನ ಕೋಗಳತೆ ದೂರದಲ್ಲಿ ಮರದ ದಿಮ್ಮಿಗಳನ್ನು ಹೊತ್ತೋಯ್ದು ತಂಡು ತುಂಡಾಗಿ ಕತ್ತರಿಸಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ದಾರೆ.ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ರೈತ ಕರುಣ ಅವರ ಹೊಲದಲ್ಲಿ ಶ್ರೀಗಂಧದ ಮರಗಳಿಗೆ ಕೊಡಲಿ ಬಿದ್ದಿರುವ ಚಿತ್ರ
ಸ್ಥಳಕ್ಕೆ ರೈತರು ಭೇಟಿ ನೀಡಿದಾಗ ಕಳ್ಳರು ಸಾಧ್ಯವಾದಷ್ಟು ತುಂಬಿಕೊಂಡು ಹೋಗಿ ಕೆಲ ತುಂಡುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ರೈತ ಕರುಣ ಈ ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.