ಜಗಳೂರು: ಕಲ್ಯಾಣದ ಕಣ್ಮಣಿ ಬಸವಣ್ಣ ಸಾಂಸ್ಕೃತಿಕ ರಾಯಭಾರಿ, ಅಭಿನಂದನಾರ್ಹ

Suddivijaya
Suddivijaya January 18, 2024
Updated 2024/01/18 at 7:06 PM

ಸುದ್ದಿವಿಜಯ, ಜಗಳೂರು: ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ  ರಾಯಭಾರಿಯನ್ನಾಗಿ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ಸಚಿವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತರಳಬಾಳು ಶಾಖಾ ಮಠ ಸಾಣೆಹಳ್ಳಿಯ ಮಠದ ಪೀಠಾಧಿಪತಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಗುರುವಾರ ಮೂರು ದಿನಗಳ ಕಾಲ ನಡೆದ ಸಾಣೆಹಳ್ಳಿಯ ಶಿವ ಸಂಚಾರ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶ್ರೀಗಳು ಮಾತು ಆರಂಭಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಗಳಿಗೆ ಕರೆ ಮಾಡಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಕ್ಯಾಬಿನೆಟ್‍ನಲ್ಲಿ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಸಾರ್ವಜನಿಕರೊಂದಿಗೆ ಸರಕಾರದ ತೀರ್ಮಾನ ಮತ್ತು ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಹಂಚಿಕೊಂಡು ಸರಕಾರದಕ್ಕೆ ಶ್ರೀಗಳು ಅಭಿನಂದನೆ ಸಲ್ಲಿಸಿದರು. ಜಗಳೂರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಶಿವ ಸಂಚಾರ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಡಾ.ಪಂಡಿತಾರಾಧ್ಯ ಶ್ರೀಗಳು ಮಾತನಾಡಿದರು.ಜಗಳೂರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಶಿವ ಸಂಚಾರ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಡಾ.ಪಂಡಿತಾರಾಧ್ಯ ಶ್ರೀಗಳು ಮಾತನಾಡಿದರು.

ಕಲ್ಯಾಣದ ಕಣ್ಮಣಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೊಷಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತೀಕ ಲಿಂಗಾಯ ಮಹಾಸಭಾ, ವಿವಿಧ ಮಠಾಧೀಶರು, ಪ್ರಗತಿಪರ ಸಂಘಟನೆಗಳು ಸೇರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು.

ಹೀಗಾಗಿ ಸಿದ್ದರಾಮಯ್ಯನವರು ತೆಗೆದುಕೊಂಡ ಈ ತೀರ್ಮಾನ ನಿಜಕ್ಕೂ ಶ್ಲಾಘನಾರ್ಹ. ಬಸವಣ್ಣನವರನ್ನು ಸಾಂಸ್ಕೃತಿಕ ನೇತಾರ ಎಂದು ಘೋಷಣೆ ಮಾಡಿದ್ದರಿಂದ ಬಸವಣ್ಣ ಯಾರು? ಎಂದು ಪ್ರತಿಯೊಬ್ಬರಿಗೂ ಯೋಚನೆ ಹುಟ್ಟುತ್ತದೆ.

ಬಸವಣ್ಣನಿಂದ ಸಮಾಜಕ್ಕೆ ಕೊಡುಗೆ ಏನು? ಅಷ್ಟೇ ಅಲ್ಲ ಬಸವಣ್ಣನವರ ಸಂದೇಶ ತಿಳಿದುಕೊಳ್ಳಲು ಜನ ಸಾಮಾನ್ಯರಲ್ಲಿ ಕುತೂಹಲ ಉಂಟಾಗುತ್ತದೆ.

ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಆರ್ಥಿಕ ತಜ್ಞರಾಗಿ, ಸಮಾಜ ಸುಧಾರಕರಾಗಿ ಬಸವಣ್ಣ ಮಾಡಿದ ಕ್ರಾಂತಿ ಪರಿಣಾಮ ಅವರನ್ನು ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಾನೂ ಸಹ ಮೂಲತಃ ಕಲಾವಿಧ. ಗುರು ಪರಂಪರೆ ಅನುಗ್ರಹದಿಂದ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ತರಳಬಾಳು ಮಠದ ಭಕ್ತರಾದ ನನ್ನ ಗುರುವಾರ ಡಾ.ಟಿ.ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಿಂದ ಸಾಕಷ್ಟು ಕಲಿತೆ.

ಶರಣ ಸತಿ ಲಿಂಗಪತಿ, ಜೋಕುಮಾರಸ್ವಾಮಿ ನಾಟಕಗಳಲ್ಲಿ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದೇನೆ. 12ನೇ ಶತಮಾನದ ಕಲ್ಯಾಣ ಪರಂಪರೆಯನ್ನು ಪಂಡಿತಾರಾಧ್ಯ ಶ್ರೀಗಳಲ್ಲಿ ಕಾಣುತ್ತಿದ್ದೇನೆ ಎಂದರು.

ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಹೃದಯವನ್ನು ಕಟ್ಟುವಹಾಗೆ, ಮನಸ್ಸು ಮುಟ್ಟುವಹಾಗೆ ಬದುಕಬೇಕು. ಯಾರಿಗೆ ಅನುಮಾನ ಹೊಟ್ಟೆ ಕಿಚ್ಚು ಇರುತ್ತದೋ ಅವರು ನಾಶವಾಗುತ್ತಾರೆ. ಮತ್ಸರ, ಅನುಮಾನ ಪಡುವ ಬದಲಾಗಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಆರೈಕೆ ಆಸ್ಪತ್ರೆ ಮುಖ್ಯಸ್ಥ, ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಟಿ.ಜಿ. ರವಿಕುಮಾರ್ ಮಾತನಾಡಿ, ಕಳೆದ 23 ವರ್ಷಳಿಂದ ಪಂಡಿತಾರಾಧ್ಯ ಶ್ರೀಗಳು ನಾಟಕದ ಮೂಲಕ ಸಾಕಷ್ಟು ಪರಿವರ್ತನೆ ಮಾಡುತ್ತಿದ್ದಾರೆ.

ಸಾಮಾಜಿಕ, ಆರ್ಥಿಕ ರಂಗಳಲ್ಲಿ ಜನ ಸಾಮಾನ್ಯರು ಮುಂದೆ ಬರಬೇಕು ಎನ್ನುವ ಉದ್ದೇಶ ಅವರದ್ದು, ಅಮರಭಾರತಿ ವಿದ್ಯಾ ಸಂಸ್ಥೆಯಲ್ಲಿ ಪ್ರತಿವರ್ಷ ನಾಟಕೋತ್ಸವ ನಡೆಸುತ್ತಿದ್ದೆವು. ನಾನು ಸಹ ಕಲಾವಿಧನಾಗಿ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಪಂಡಿತಾರಾಧ್ಯರು ಮೌನ ಕ್ರಾಂತಿಯ ಹರಿಕಾರರು.ಸಮಾಜ ಆರೋಗ್ಯಕರವಾಗಿರಲು ಉಚಿತ ಆರೋಗ್ಯ ಶಿಬಿರಗಳ ಹಮ್ಮಿಕೊಂಡು ಬರುತ್ತಿದ್ದು ಎಲ್ಲ ರಂಗಗಳೂ ಆರೋಗ್ಯಪೂರ್ಣವಾಗಿರಬೇಕು ಎಂಬುದು ನನ್ನ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪಲ್ಲಾಗಟ್ಟೆ ಎಸ್.ಕೆ.ಮಂಜುನಾಥ್, ಕೆಪಿಸಿಸಿ ಎಸ್‍ಟಿ ಘಟಕದ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಇದ್ದರು. ಮೂರು ದಿನಗಳ ನಾಟಕೋತ್ಸವದಲ್ಲಿ ‘ಜೊತೆಗಿರುವನು ಚಂದಿರ’, ‘ತಾಳಿಯ ತಕರಾರು’ ಮತ್ತು ‘ಕಲ್ಯಾಣದ ಬಾಗಿಲು’ ನಾಟಕ ಪ್ರದರ್ಶನ ನಡೆಯಿತು.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!