ಸುದ್ದಿವಿಜಯ, ಜಗಳೂರು: ಸಾಧು ಸದ್ಧರ್ಮ ಸಮಾಜದ ಹಿರಿಯ ಮುಖಂಡರು, ಸಿರಿಗೆರೆಯ ತರಳಬಾಳು ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಬಿದರಕೆರೆ ಗ್ರಾಮದ ಶ್ರೀಗುರುಸಿದ್ದೇಶ್ವರ ಪ್ರೌಢ ಶಾಲೆಯ ಸ್ಥಳೀಯ ಶಾಲಾ ಸಮಿತಿಯ ಅಧ್ಯಕ್ಷರಾಗಿದ್ದ ತಾಲೂಕಿನ ಗುತ್ತಿದುರ್ಗ ಗ್ರಾಮದ ದಿ.ಜಿ.ಕೆ.ಸಿದ್ದಪ್ಪನವರ ಕೈಲಾಸ ಶಿವಗಣಾರಾಧನೆ ಮತ್ತು ಸರ್ವ ಶರಣರ ಸಮ್ಮೇಳನ ಬುಧವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದಲ್ಲಿ ನಡೆಯಲಿದೆ.
ತರಳಬಾಳು ಶಾಖಾ ಮಠವಾಗಿರುವ ಸಾಣೆಹಳ್ಳಿ ಶ್ರೀಮಠದ ಪೀಠಾಧಿಪತಿ ಡಾ.ಶ್ರೀ.ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ನೆರವೇರಲಿದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಬಿ.ದೇವೇಂದ್ರಪ್ಪ,ದಾವಣಗೆರೆಯ ವಿಶ್ವಬಂಧು ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಮರುಳಸಿದ್ದಯ್ಯನವರು, ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡರು, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ನಿವೃತ್ತ ಉಪನ್ಯಾಸಕರಾದ ಐ.ಜಿ.ಚಂದ್ರಶೇಖರಯ್ಯ, ಜಿಪಂ ಮಾಜಿ ಸದಸ್ಯ, ಎಸ್.ಕೆ.ಮಂಜುನಾಥ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ನಿವೃತ್ತ ಉಪನ್ಯಾಸಕರಾದ ಸುಭಾಷ್ ಚಂದ್ರ ಭಾಗವಹಿಸಲಿದ್ದಾರೆ.