ನಾಳೆಯಿಂದ ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆ

Suddivijaya
Suddivijaya May 28, 2024
Updated 2024/05/28 at 11:43 AM

suddivijayanews28/5/2024

ಸುದ್ದಿವಿಜಯ, ಜಗಳೂರು: ಪ್ರಸ್ತುತ(2024-25) ಸಾಲಿನ ಶೈಕ್ಷಣಿಕ ಶಾಲೆಗಳು ನಾಳೆ ಬುಧವಾರ (ಮೇ.29) ಆರಂಭವಾಗಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ ತಿಳಿಸಿದರು.

ಬೇಸಿಗೆ ರಜೆಯನ್ನು ಮುಗಿಸಿದ ಮಕ್ಕಳು ಹೆಗಲಿಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗಲು ಸಿದ್ಧರಾಗಿದ್ದು ಶೇ.75 ರಷ್ಟು ಪಠ್ಯ ಪುಸ್ತಕ ಪೂರೈಕೆ ಮಾಡಲಾಗಿದೆ. ಉಳಿದ ಶೇ.25 ರಷ್ಟು ಪಠ್ಯ ಪುಸ್ತಕಗಳನ್ನು ಜೂನ್ ಮೊದಲ ವಾರದಲ್ಲಿ ಸರಬರಾಜು ಮಾಡಲು ಇಲಾಖೆ ಸಿದ್ಧವಾಗಿದೆ ಎಂದು ತಿಳಿಸಿದರು. ಜಗಳೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸರಕಾರಿ ಶಾಲಾ ಶಾಲೆಗಳ ಸ್ವಚ್ಛತೆ ಕಾರ್ಯಯವನ್ನು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿಡಿ ಹಾಲಪ್ಪ ಪರಿಶೀಲನೆ ನಡೆಸಿದರು.ಜಗಳೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸರಕಾರಿ ಶಾಲಾ ಶಾಲೆಗಳ ಸ್ವಚ್ಛತೆ ಕಾರ್ಯಯವನ್ನು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿಡಿ ಹಾಲಪ್ಪ ಪರಿಶೀಲನೆ ನಡೆಸಿದರು.

ತಾಲೂಕಿನಾದ್ಯಂತ ಒಟ್ಟು ಸರಕಾರಿ, ಅನುದಾನ, ಅನುದಾನ ರಹಿತ ಒಟ್ಟು 628 ಸರಕಾರಿ ಪ್ರಾಥಮಿಕ ಶಾಲೆಗಳಿವೆ. 275 ಅನುದಾನಿತ ಶಾಲೆಗಳಿವೆ ಈಗಾಗಲೇ ಆಯಾ ಶಾಲೆಗಳಲ್ಲಿರುವ ಒಟ್ಟು 16332 ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.

ಮೇ.31 ರಿಂದ ಶಾಲೆಗಳು ಪುನಾರಂಭ ಆಗಲಿದ್ದು, ಮೇ.29 ಮತ್ತು 30 ರಂದು ಪ್ರಾರಂಭೋತ್ಸವ ನಡೆಯಲಿದೆ. ಎರಡು ದಿನಗಳ ಕಾಲ ಶಾಲೆಗಳ ಸ್ವಚ್ಛತೆ, ಮೂಲಭೂತ ಸೌಕರ್ಯ ಕಲ್ಪಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.ಸ.ಹಿ.ಪ್ರಾ. ಶಾಲೆ ಐಯ್ಯನಹಳ್ಳಿ ಯಲ್ಲಿ ಶಾಲಾ ಸ್ವಚ್ಛತೆ ಕಾರ್ಯ ನಡೆಯುತ್ತಿರುವುದು..ಸ.ಹಿ.ಪ್ರಾ. ಶಾಲೆ ಐಯ್ಯನಹಳ್ಳಿಯಲ್ಲಿ ಶಾಲಾ ಸ್ವಚ್ಛತೆ ಕಾರ್ಯ ನಡೆಯುತ್ತಿರುವುದು..

ಮೇ.31 ರಂದು ಸಿಹಿ ಊಟದೊಂದಿಗೆ ಮಕ್ಕಳನ್ನು ಸ್ವಾಗತಿಸಲು ಎಲ್ಲ ಶಿಕ್ಷಕರ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದರು.
ಶಾಲಾ ವಾತಾವರಣ ವೃದ್ಧಿಗೆ ಸೂಚನೆ: ತಾಲೂಕಿನಲ್ಲಿ ಸೋರುವ ಶಾಲೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅವುಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣ ಕಟ್ಟಿ ಲಭ್ಯ ಅನುದಾನದಲ್ಲಿ ಸುಣ್ಣ-ಬಣ್ಣ ಹಾಗೂ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಕೈಗೊಂಡು ಶಾಲಾ ವಾತಾವರಣವನ್ನು ಚೇತೋಹಾರಿಯಾಗಿರುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಮಕ್ಕಳನ್ನು ಸರಕಾರಿ ಶಾಲೆಗಳತ್ತ ಸೆಳೆಯಲು ಆಯಾ ಶಾಲೆಗಳ ಶಿಕ್ಷಕರು ವಿಭಿನ್ನವಾಗಿ ಜಾಗೃತಿ ಮೂಡಿಸಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!