ಮಾರ್ಚ್‌, 9 ರಂದು ‘ಜಗಲೂರು ಸೀಮೆಯ ಜಾತ್ರೆಗಳು’ ಕೃತಿ ಲೋಕಾರ್ಪಣೆ

Suddivijaya
Suddivijaya March 6, 2024
Updated 2024/03/06 at 1:39 PM

ಸುದ್ದಿವಿಜಯ, ಜಗಳೂರು: ಸಂಸ್ಕೃತಿಕವಾಗಿ ವೈವಿಧ್ಯತೆಯಿಂದ ಕೂಡಿರುವ ಜಗಳೂರು ಸೀಮೆಯ ಜಾತ್ರೆಗಳು, ರಥೋತ್ಸವಗಳು,ಪರುವುಗಳು, ಮಠಗಳ ಉತ್ಸವಗಳು, ಬುಡಕಟ್ಟು ಸಂಸ್ಕೃತಿಯ ಉತ್ಸವಗಳ ಕುರಿತು ರಚಿತವಾಗಿರುವ ‘ಜಗಲೂರು ಸೀಮೆಯ ಜಾತ್ರೆಗಳು ಸಂಸ್ಕೃತಿಕ ಅವಲೋಕನ’ ಕೃತಿ ಬಿಡುಗಡೆ ಕಾರ್ಯಕ್ರಮ ಇದೇ ಮಾ.9 ರಂದು ಶನಿವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃತಿಯ ಲೇಖಕ, ವಿಶ್ರಾಂತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ತಿಳಿಸಿದರು.

ಪಟ್ಟಣದ ಎಂಆರ್ ಕಂಫರ್ಟ್‍ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು. ಇಲ್ಲಿನ ಸಂಸ್ಕೃತಿಕ ವೈವಿಧ್ಯೆತೆಗಳ ಕುರಿತು 500 ಪುಟಗಳ ಕೃತಿ ಇದಾಗಿದ್ದು ಜಾತ್ರೆಗಳ ಒಳ ನೋಟಗಳ ವಿಶ್ಲೇಷಣೆ ಮಾಡಲಾಗಿದೆ.ಜಾತ್ರೆಗಳ, ರಥೋತ್ಸವಗಳ ಮತ್ತು ಉತ್ಸವಗಳ ಪರಂಪರೆಗಳು ಮುಂದಿನ ಪೀಳಿಗೆಗೆ ಉಳಿಸುವ ಕ್ರಿಯೆ ಮಾಡಲಾಗಿದೆ. ಈ ಕೃತಿಯಲ್ಲಿ ಸಾಮಾಜಿಕ ಸೌಹಾರ್ದತೆ ಒಳಗೊಂಡ ವಿಶೇಷತೆಗಳನ್ನು ಬಿಂಬಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗದ ವಿಶ್ರಾಂತ ಪ್ರಾಂಶುಪಾಲ ಎಂ.ಬಸಪ್ಪ ವಹಿಸಲಿದ್ದಾರೆ. ನಮ್ಮ ತಾಯಿ ಮಾತೃಶ್ರೀ ಕೆ.ಎಸ್.ಹನುಮಕ್ಕ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

 ಜಗಳೂರು ಪಟ್ಟಣದ ಎಂ.ಆರ್.ಕಂಫರ್ಟ್‍ನಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
 ಜಗಳೂರು ಪಟ್ಟಣದ ಎಂ.ಆರ್.ಕಂಫರ್ಟ್‍ನಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪುಸ್ತಕದ ಕುರಿತು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಟಗೋಡಿ ಜಾನಪದ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಟಿ.ಎಂ.ಭಾಸ್ಕರ್ ಮತ್ತು ಶಂಕರಘಟ್ಟದ ಕುವೆಂಪು ವಿವಿಯ ಜಾನಪದ ವಿದ್ವಾಂಸರಾದ ಡಾ.ಬಸವರಾಜ್ ನೆಲ್ಲಿಸರ ಭಾಗವಹಿಸಲಿದ್ದಾರೆ.

ಜಿಬಿಟಿ ಪಬ್ಲಿಕೇಷನ್ಸ್‍ನ ಪ್ರಕಾಶಕರಾದ ಜಿಬಿಟಿ ಮೋಹನ್ ಕುಮಾರ್ ಉಪಸ್ಥಿತರಿರಲಿದ್ದಾರೆ ಎಂದರು. ಅಂದು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ಭವನದವೆಗೆ ಡೊಳ್ಳು, ಕಹಳೆ, ಸಮಾಳ, ಪೋತರಾಜರ ಕುಣಿತ ಸೇರಿದಂತೆ ಎತ್ತಿನ ಗಾಡಿಗಳ ಮೆರವಣಿಗೆ ಮೂಲಕ ಜಾತ್ರೆಯೋಪಾದಿಯಲ್ಲೇ ವಿಭಿನ್ನಾವಾಗಿಉತ್ಸವ ಹಮ್ಮಿಕೊಳ್ಳಲಾಗುವುದು ಎಂದರು.

ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ, ಇದೊಂದು ಕರ್ನಾಟಕದಲ್ಲೇ ಐತಿಹಾಸಿ ಕೃತಿಯಾಗಿದ್ದು ತಾಲೂಕಿನ ಸಂಸ್ಕೃತಿಕ ವೈಭವಗಳ ಕುರಿತು ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ವಿಶ್ಲೇಷಣಾತ್ಮಕವಾಗಿ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ವಾಂಸರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಇಂದೊಂದು ವಸ್ತು ನಿಷ್ಠ ಕೃತಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಜಿಬಿಟಿ ಪಬ್ಲಿಕೇಷನ್ಸ್‍ನ ಪ್ರಕಾಶಕರಾದ ಜಿಬಿಟಿ ಮೋಹನ್, ದಲಿತ ಮುಖಂಡರಾದ ಉಪನ್ಯಾಸಕ ನಾಗಲಿಂಗಪ್ಪ, ಪವನ್ ಗ್ಯಾಸ್ ಮಾಲೀಕ ಗ್ಯಾಸ್ ಓಬಣ್ಣ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!