ಜಗಳೂರು: ಪವಾಡ ಪುರುಷ ಶ್ರೀ ಸಿರಡಿ ಶ್ರೀ ಸಾಯಿಬಾಬಾರ ದರ್ಶನ ಇನ್ನು ಸನಿಹ

Suddivijaya
Suddivijaya November 20, 2023
Updated 2023/11/20 at 3:58 PM

ಸುದ್ದಿವಿಜಯ, ಜಗಳೂರು: ಬಾಬಾ… ಶ್ರೀ ಶಿರಡಿ ಸಾಯಿಬಾಬಾ ಅವರ ಪವಾಡಗಳ ಬಗ್ಗೆ ಚಿಕ್ಕಮಗುವೂ ಕೂಡ ಹೇಳುತ್ತದೆ. ಬಡವ ಶ್ರೀಮಂತನಾದ, ಎಣ್ಣೆ ಇಲ್ಲದೆ ದೀಪ ಉರಿದ, ಕುದಿಯುವ ಅನ್ನಕ್ಕೆ ಕೈ ಆಡಿಸಿದ ಕಥೆ, ಮಾನಸಿಕ ರೋಗಿ, ಕುಷ್ಟ ರೋಗಿ ಬಾಬಾರ ಆಶೀರ್ವಾದಿಂದ ಸರಿಯಾದ ಕಥೆಗಳೆಲ್ಲ, ಅವು ಸತ್ಯ ಘಟನೆಗಳು.

ಅವರು ಪವಾಡ ಪುರುಷರು. ಅತಿಮಾನುಷ ಶಕ್ತಿಯನ್ನು ಹೊಂದಿದ್ದ ಬಾಬಾ ಜೀ ತಮ್ಮ ಶಕ್ತಿಯನ್ನು ಒಳ್ಳೆಯದಕ್ಕೆ ಬಳಸಿದರು. ಬೇರೆಯವರ ತೊಂದರೆ ಪರಿಹರಿಸಲು ಮಾತ್ರ ಬಳಸಿದವರು ಬಾಬಾ. ಯಾರು ಬಾಬಾರನ್ನು ನಂಬುವುದಿಲ್ಲವೋ ಅವರಿಗೆ ಕೂಡ ನಂಬಿಕೆ ಹುಟ್ಟಿಸುವಂತಿದೆ ಬಾಬಾ ಅವರ ಪವಾಡಗಳು.

ಅಂತಹ ದೈವ ಮಾನವ ಇಡೀ ಭಾರತದ ಎಲ್ಲೆಡೆ ಪೂಜಿಸುತ್ತಿದ್ದಾರೆ. ದೇಶದ ಶ್ರೀಮಂತ ದೇಗುಲಗಳಲ್ಲಿ ಶಿರಡಿಯ ಸಾಯಿ ಬಾಬಾ ಮಂದಿರ ಕೂಡ ಒಂದು. ಕಲಿಯುಗದ ಬಂಧುವಾಗಿ ಬಾಬಾ ಅನೇಕ ಜನರ ಕಷ್ಟಗಳ ನಿವಾರಣೆ ಮಾಡಿದ್ದಾರೆ. ಇಂದಿಗೂ ಶಿರಡಿ ಬಾಬಾರ ಮಂದಿರಕ್ಕೆ ಅನೇಕ ಭಕ್ತರು ಹರಿದು ಬರುತ್ತಾರೆ.

ಆರ್ಥಿಕ ಸಂಕಷ್ಟಗಳಿಂದ ಶಿರಡಿಗೆ ಹೋಗದ ಭಕ್ತರಿಗೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಬೃಹತ್ ಸಾಯಿ ಮಂದಿರ ನಿರ್ಮಾಣವಾಗಿದೆ. ಪ್ರೊ.ತಿಪ್ಪೇಸ್ವಾಮಿ ಮತ್ತು ಪುತ್ರಿ ಸ್ವಾತಿ ತಿಪ್ಪೇಸ್ವಾಮಿ ಅವರು ನಿರ್ಮಿಸಿದ ಶ್ರೀ ಸಾಯಿಬಾಬಾ ಮಂದಿರ ಉದ್ಘಾಟನೆಯ ಕಾರ್ಯಕ್ರಮಗಳು ನ.20 ರಿಂದ 23ರವರೆಗೆ ನಿರಂತರವಾಗಿ ನಡೆಯಲಿವೆ.

ಸಾಯಿಯ ಪ್ರೇರಣೆ:
ಭಗವಂತನಾದ ಶ್ರೀ ಸಾಯಿ ಬಾಬಾರ ಪ್ರೇರಣೆಯಿಂದ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದವರಾದ ಪ್ರೊ.ತಿಪ್ಪೇಸ್ವಾಮಿ ಮತ್ತು ಪುತ್ರಿ ಸ್ವಾತಿ ತಿಪ್ಪೇಸ್ವಾಮಿ ಅವರು ಲೋಕೋದ್ಧಾರಕ್ಕಾಗಿ ಸಾಯಿ ಬಾಬಾರ ಮಂದಿರ ನಿರ್ಮಾಣ ಮಾಡಿದ್ದಾರೆ.

ನ.20ರ ಸೋಮವಾರ ಗೋಧೂಳಿ ಸಮಯಕ್ಕೆ ಗಂಗಾ ಪೂಜೆ, ಗಂಗಾಪುಣ್ಯ ತೀರ್ಥ ಸಂಗ್ರಹಣ, ಗಣಪತಿ ಪೂಜೆ, ಮಂಗಳ ಕಳಶ, ವಾದ್ಯ ವೈಭವದೊಂದಿಗೆ ಪುರಪ್ರವೇಶ, ಶ್ರೀ ಸಿರಡಿ ಸಾಯಿಬಾಬಾ ದೇವಾಲಯದ ವಾಸ್ತುಪೂಜೆ, ದ್ವಾರಪಾಲಕ ಜಯ ಮತ್ತು ವಿಜಯ ಪೂಜೆಯೊಂದಿಗೆ ಪ್ರವೇಶ ಬಲಿ, ದಿಗ್ಬಲಿಹರಣ, ಗೋಮಾತೆ ಪೂಜೆ ಶಿವಾಯಗ ಮಂಟಪ ದ್ವಜಾರೋಹಣ ಆಲಯ ಪ್ರವೇಶ ಕಾರ್ಯಗಳು ನೆರವೇರಿದವು.

ದೇವಸ್ಥಾನ ಉದ್ಘಾಟನೆಗೆ ಸಿದ್ಧವಾಗಿದೆ ಬೃಹತ್ ವೇದಿಕೆ:
ಶ್ರೀ ಶಿರಡಿ ಸಾಯಿಬಾಬಾ ನೂತನ ಮಂದಿರ ಪ್ರಾರಂಭೋತ್ಸವ, ವಿಮಾನ ಗೋಪುರ ಕಳಸಾರೋಹಣ ಹಾಗೂ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧವಾಗಿದೆ. ನ.22 ರಂದು ಬೆಳಿಗ್ಗೆ ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮೀಜಿಗಳು,ನೊಣವಿನಕೆರೆ ವಿರಕ್ತ ಮಠದ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಡಾ.ಶಿವಾನುಭವ ಚರವರ್ಯ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿಗಳು ಮತ್ತು ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಲಿದೆ.

ದೇವಸ್ಥಾನ ಉದ್ಘಾಟನೆ:

ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟನೆಗೆ ಮಾಡಲಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರ, ಬಸವರಾಜ್ ಶಿವಗಂಗಾ, ಡಾ.ಶ್ರೀನಿವಾಸ್, ಪಿ.ರವಿಕುಮಾರ್,  ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಯಿಬಾಬಾರ ದರ್ಶನ ಪಡೆಯಲು ಬನ್ನಿ…

ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಸಂಸ್ಕೃತ  ಶ್ಲೋಕದ “ಎಲ್ಲರಿಗೂ ಭಗಂತನೊಬ್ಬನೇ ಮಾಲೀಕ”

ನಮ್ಮ ಸ್ವಗ್ರಾಮವಾದ ಸೊಕ್ಕೆಯಲ್ಲಿ ಬಾಬಾರ ಅನುಗ್ರಹ ಹಿನ್ನೆಲೆ ದೇವಸ್ಥಾನ ನಿರ್ಮಾಣ ಮಾಡಿದ್ದೇವೆ.

ಲೋಕ ಕಲ್ಯಾಣಕ್ಕಾಗಿ ನಿರ್ಮಾಣವಾದ ದೇವಸ್ಥಾನ ಉದ್ಘಾಟನೆಗೆ ಭಕ್ತರು ಆಗಮಿಸಿ ಬಾಬಾರ ಆಶೀರ್ವಾದ ಪಡೆಯಬೇಕು ಎಂದು ಪ್ರೋ.ತಿಪ್ಪೇಸ್ವಾಮಿ ಮತ್ತು ಪುತ್ರಿ ಸ್ವಾತಿ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!