ಜಗಳೂರು: ಶೋಭಾಯಾತ್ರೆ ಮೂಲಕ ಬಾಲ್ಯ ಗಣಪತಿ ಮೂರ್ತಿ ವಿಸರ್ಜನೆ

Suddivijaya
Suddivijaya October 1, 2023
Updated 2023/10/01 at 1:06 PM

ಸುದ್ದಿವಿಜಯ, ಜಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ವಿಸ್ತಾರವಾಗಿರುವ ವೈವಿಧ್ಯಮಯ ಭವ್ಯ ಭಾರತದಲ್ಲಿ ಪ್ರತಿ ಗ್ರಾಮದಲ್ಲೂ ವಿಘ್ನೇಶ್ವರನನ್ನು ಪೂಜಿಸುತ್ತಾರೆ. ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ದೇಶ ಕಟ್ಟಲು ಕೈ ಜೋಡಿಸಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ತುಮಾಟಿ ಲೇಔಟ್‍ನಲ್ಲಿ ಪ್ರತಿಷ್ಠಾಪಿಸಲಾಗಿರುವ 9ನೇ ವರ್ಷದ ಬಾಲ್ಯ ಗಣಪತಿ ವಿಘ್ನೇಶ್ವರ ಮೂರ್ತಿ ವಿಸರ್ಜನೆ ಅಂಗವಾಗಿ ಬಾಲ್ಯ ಗಣಪತಿ ಉತ್ಸವ ಸಮಿತಿ ಭಾನುವಾರ ಆಯೋಜಿಸಿದ್ದ ರುದ್ರಾಭಿಷೇಕ, ಮಹಾಮಂಗಳಾರತಿ, ಅನ್ನಸಂತರ್ಪಣೆ ಮತ್ತು ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜಗಳೂರು ಪಟ್ಟಣದ ತುಮಾಟಿ ಲೇಔಟ್‍ನಲ್ಲಿ 9ನೇ ವರ್ಷದ ಬಾಲ್ಯಗಣಪತಿ ಮೂರ್ತಿ ವಿಸರ್ಜನೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು. ಜಗಳೂರು ಪಟ್ಟಣದ ತುಮಾಟಿ ಲೇಔಟ್‍ನಲ್ಲಿ 9ನೇ ವರ್ಷದ ಬಾಲ್ಯಗಣಪತಿ ಮೂರ್ತಿ ವಿಸರ್ಜನೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.

ಸೌಹಾರ್ಧಯುತವಾಗಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿ. ಸಂಘರ್ಷಗಳಿಗೆ ಎಡೆ ಮಾಡಿಕೊಡದೇ ಶಾಂತಿಯುತವಾಗಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿ. ಯಾವುದೇ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ. ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ.

ಜಗಳೂರು ಪಟ್ಟಣದಲ್ಲೇ ಅತ್ಯಂತ ದೊಡ್ಡ ಗಣೇಶ ಉತ್ಸವಾಗಿದ್ದು ಸಾವಿರಾರು ಜನ ಭಾಗವಹಿಸುವುದರಿಂದ ಜವಾಬ್ದಾರಿಯುತವಾಗಿ ವರ್ತಿಸಬೇಕು. ಗಣೇಶನ ವಿಸರ್ಜನೆಯಲ್ಲಿ ಸಮಿತಿಯವರು ಪೊಲೀಸರ ಜೊತೆ ಸಹಕರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಶೋಭಾಯಾತ್ರೆ ಮೂಲಕ ಗಣಪನ ವಿಸರ್ಜನೆ:
ಬಾಲ್ಯ ಗಣಪತಿಯ ವಿಸರ್ಜನೆಯಲ್ಲಿ ಸಾವಿರಾರು ಭಕ್ತರು ಬೃಹತ್ ಶೋಭಾಯಾತ್ರೆ ಹಮ್ಮಿಕೊಂಡಿದ್ದರು. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕೆಸರಿ ಧ್ವಜ ಹಾರಾಡಿದವು. ತುಮಾಟಿ ಲೇಔಟ್‍ನಿಂದ ಹೊರಟ ಮೆರವಣಿಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಹಾತ್ಮಾಗಾಂಧಿ ಬಸ್‍ನಿಲ್ದಾಣ, ಪೊಲೀಸ್ ಠಾಣೆ ಮುಂಭಾಗದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಭವ್ಯ ಮೆರವಣಿಗೆ ಸಾಗಿತು.

ಜಾನಪದ ಕಲಾಪ್ರಕಾರಗಳಾದ ಗೊಂಬೆಕುಣಿತ, ಡೊಳ್ಳುಕುಣಿತ, ನಂದಿಧ್ವಜ ಕುಣಿತ, ನಾಸಿಕ್ ಡೋಲ್ ಪೂಜಾಕುಣಿತ, ಕುದುರೆ ಕುಣಿತ, ಬಸವನಕುಣಿತ, ಕರಡಿಕುಣಿತ, ಬಸವನ ಕುಣಿತದ ಸೇರಿದಂತೆ ಛದ್ಮವೇಷದಾರಿಗಳು ದಾರಿಯುದ್ದಕ್ಕೂ ಭಕ್ತರನ್ನು ರಂಜಿಸಿದರು. ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು, ಕಲಾ ಮೇಳಗಳು ಭಾಗವಹಿಸಿದವು. ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು, ಕಲಾ ಮೇಳಗಳು ಭಾಗವಹಿಸಿದವು.

ಡಿಜೆ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕಿದರು. ರಾತ್ರಿ ಸುಮಾರು 11.30ರವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. 12 ಗಂಟೆಯೊಳಗೆ ಜಗಳೂರು ದೊಡ್ಡಕೆರೆಯಲ್ಲಿ ಬಾಲ್ಯ ಗಣಪನ ವಿಸರ್ಜನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗದೆ. ಯಾವುದೇ ಅಹಿತಕ ಘಟನೆಗಳು ಜರುಗದಂತೆ ಪಟ್ಟಣದಲ್ಲಿ ನೂರಾರು ಪೊಲೀಸರನ್ನು ಬಿಗಿ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿತ್ತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!