ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ವಿದ್ಯುತ್ ಶಾಕ್ ನಿಂದ 5 ಜನ ಬಲಿಯಾದರೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು, ಲೈನ್‍ಮನ್‍ಗಳಿಗೆ ಬುದ್ಧಿ ಬಂದಿಲ್ಲ.
ಮರೇನಹಳ್ಳಿ ಗ್ರಾಮದ ಮಧ್ಯದಲ್ಲಿರುವ ಶ್ರೀ ವೀರಾಂಜನೇಯ ಮತ್ತು ಶ್ರೀಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇರುವ ವಿದ್ಯುತ್ ಪೋಲ್ ವಾಲುವ ಹಂತದಲ್ಲಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಗುತ್ತಿಗೆದಾರರೊಬ್ಬರು ಕಾಮಗಾರಿ ಮುಗಿಸಿ ಹೋಗಿದ್ದರು. ಆದರೆ ಪ್ರಸ್ತುತ ಬೀಳುವ ಹಂತದಲ್ಲಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರು, ಮಕ್ಕಳು ಓಡಾಡುತ್ತಾರೆ. ಈ ವಿದ್ಯುತ್ ಕಂಬ ವಾಲಿ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಉರುಳುವ ಹಂತದಲ್ಲಿರುವ ಕಂಬವನ್ನು ದುರಸ್ತಿಗೊಳಿಸಿ ಎಂದು ಬೆಸ್ಕಾಂ ಕಚೇರಿಗೆ ಫೋನ್ ಮಾಡಿದರೂ ಯಾರೂ ರಿಸೀವ್ ಮಾಡ್ತಿಲ್ಲ. ಬೆಸ್ಕಾಂ ಎಇಇ ಗಿರೀಶ್ ನಾಯ್ಕ ಮತ್ತು ಸೆಕ್ಷನ್ ಆಫೀಸರ್ (ಎಸ್‍ಓ) ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಒಂದು ವೇಳೆ ವಿದ್ಯುತ್ ಕಂಬವಾಲಿದೆ ಸುಮಾರು ನಾಲ್ಕೈದು ಮನೆಗಳ ಮೇಲೆ ಬಿದ್ದು ಸಾವು ನೋವುಗಳು ಸಂಭವಿಸುವುದರಲ್ಲಿ ಅನುಮಾನವಿಲ್ಲ ಎಂದು ಗ್ರಾಮಸ್ಥರಾದ ನಾಗರಾಜ್, ನರಸಿಂಹಮೂರ್ತಿ, ಕೆ.ಸಿ ತಿಪ್ಪೇಸ್ವಾಮಿ. ಕಲ್ಲೇಶ್ ರುದ್ರಪ್ಪ ಬೆಸ್ಕಾಂ ಅಧಿಕಾರಿಗಳಿಗೆ, ಲೈನ್ ಮನ್‍ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಕ್ಷಣವೇ ವಿದ್ಯುತ್ ಕಂಬವನ್ನು ಸರಿಪಡಿಸದೇ ಇದ್ದರೆ ಬೆಸ್ಕಾಂ ಕಚೇರಿಯ ಮುಂದೆ ಊರಿನ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.