ಸಂವಿಧಾನಕ್ಕೆ ಚ್ಯುತಿ ತರುವವರಿಗೆ ಮತ ಚಲಾಯಿಸಬೇಡಿ: ಶಾಸಕ ಬಿ.ದೇವೇಂದ್ರಪ್ಪ

Suddivijaya
Suddivijaya January 16, 2024
Updated 2024/01/16 at 12:01 PM

ಸುದ್ದಿವಿಜಯ,ಜಗಳೂರು: ಬಹು ಧರ್ಮಗಳ ನೆಲೆವೀಡಾಗಿರುವ ಭಾರತದಲ್ಲಿ ಶೋಷಿತ ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಅವಶ್ಯಕ.

ಸಂವಿಧಾನಕ್ಕೆ ಚ್ಯುತಿ ತರುವವರಿಗೆ ಮತಚಲಾಯಿಸಬೇಡಿ ಎಂದು ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಭೋವಿ ಸಮಾಜದ ಸಹಯೋಗದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ಸ್ವಾಭಾವಿಕ.ಅದು ಚುನಾವಣೆಗೆ ಸೀಮಿತವಾಗಬೇಕಿದೆ.ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.

ಸಮುದಾಯದ ಅಭಿವೃದ್ದಿ ಗೆ ಪಕ್ಷಾತೀತ ಸಂಘಟಿತ ಹೊರಾಟ ಅನಿವಾರ್ಯ. ದೇಶದಲ್ಲಿ ಸಂವಿಧಾನ ಅನುಷ್ಠಾನ ಗೊಳಿಸುವವರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆಮಾಡಬೇಕಿದೆ ಎಂದ ಅವರು ರಾಜನಾಗುವವರೆಗೂ ಮಾತ್ರ ರಾಜಕಾರಣ ರಾಜನಾದಮೇಲೆ ರಾಜನೀತಿ ಪರಿಪಾಲಿಸಬೇಕು ಎಂದು ನಿದರ್ಶನ ನೀಡಿದರು.

12 ನೇ ಶತಮಾನದಲ್ಲಿ ಬೋವಿ ಸಮಾಜದಲ್ಲಿ ಜನಿಸಿ ಪವಾಡಗಳ ಮುಖಾಂತರ ಬಸವಣ್ಣನವರ ಅನುಭವಮಂಟಪದಲ್ಲಿ ಅಗ್ರಸ್ಥಾನದ ವಚನಕಾರರಾಗಿದ್ದ ಕರ್ಮಯೋಗಿ ಸಿದ್ದರಾಮೇಶ್ವರ ಸ್ವಾಮೀಜಿ ಸೊಲ್ಲಾಪುರದಲ್ಲಿ ದೇವಸ್ಥಾನ ಸ್ಥಾಪಿಸಿ, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಆದರ್ಶವಾಗಿದ್ದಾರೆ.

ವಿಧಾನ ಸಭಾ ಕ್ಷೇತ್ರದಲ್ಲಿ ಬೋವಿ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಬದ್ದ ಎಂದು ಭರವಸೆ ನೀಡಿದರು.

ಬೋವಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ವಕೀಲ ಡಿ.ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಕೆರೆ ,ಆಣೆಕಟ್ಟು,ವಸತಿಗೃಹಗಳ ಕಟ್ಟಡ ನಿರ್ಮಿಸಿದ ಬೋವಿ ಸಮಾಜಕ್ಕೆ ಸೂರಿಲ್ಲ,ಪ್ರಸಕ್ತವಾಗಿ ತಾಲೂಕಿನಲ್ಲಿ ಉದ್ಯೋಗವಿಲ್ಲದೆ ಉದ್ಯೋಗ ಅರಸಿ ಕಾಫಿನಾಡಿಗೆ ಗುಳೆ ಹೋಗುತ್ತಿದ್ದು.

ಅಂಬೇಡ್ಕರ್ ಆಶಯದಂತೆ ಶಿಕ್ಷಣ ಸಂಘಟನೆ ಹೊರಾಟದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಿದೆ. ಶಾಸಕರು ತಾಲೂಕಿನಲ್ಲಿ ಬೋವಿ ಸಮಾಜದವರಿಗೆ ಮನರೇಗಾದಡಿ ಸಮರ್ಪಕ ಉದ್ಯೋಗ ಕಲ್ಪಿಸಿ ಗುಳೆ ತಪ್ಪಿಸಲು ಮನವಿಮಾಡಿದರು.

ವಿವಿಧ ಇಲಾಖೆಗಳಡಿ ಪರಿಶಿಷ್ಟ ಸಮುದಾಯಗಳಿಗೆ ಕಳೆದ ದಶಕಗಳಿಂದ ಮೀಸಲಾತಿ ಕಡಿತಗೊಂಡಿದ್ದು. ಶೋಷಿತರ ಧ್ವನಿಯಾಗಿ ರಾಜ್ಯ ಸರಕಾರ ಮೀಸಲಾತಿಯಡಿ ಸರ್ಕಾರಿ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು,ಭೋವಿ ಸಮಾಜದ ತಾಲೂಕು ಅಧ್ಯಕ್ಷ ಅರ್ಜುನ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಮುಖಂಡರಾದ ಪುಟ್ಟಣ್ಣ, ಶಿವಣ್ಣಗೌಡ, ಓಮಣ್ಣ, ಸಿ.ತಿಪ್ಪೇಸ್ವಾಮಿ,

ಬಿ.ಮಹೇಶ್ವರಪ್ಪ,ಪೂಜಾರ್ ಸಿದ್ದಪ್ಪ,ಕುಬೇಂದ್ರಪ್ಪ,ಪಲ್ಲಾಗಟ್ಟೆ ಶೇಖರಪ್ಪ, ಅನೂಪ್ ರೆಡ್ಡಿ, ವಿರೇಶ್, ಎ.ಎಲ್.ತಿಪ್ಪೇಸ್ವಾಮಿ,ಬಂಗಾರಪ್ಪ, ಕುಮಾರ್ ,ನಾಯ್ಕ,ಶಂಕ್ರಪ್ಪ,ವೆಂಕಟೇಶ್,

ಅಂಜಿನಪ್ಪ,ರೇವಣಸಿದ್ದಪ್ಪ,ಅಹಮ್ಮದ್ ಅಲಿ,ಬಾಲ್ ರಾಜ್,ಸೇರಿದಂತೆ ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!