ಸೊಕ್ಕೆ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜಿಗೆ ಆಗ್ರಹಿಸಿ ಶಾಸಕರಿಗೆ ಮನವಿ

Suddivijaya
Suddivijaya September 19, 2023
Updated 2023/09/19 at 12:54 PM

ಸುದ್ದಿವಿಜಯ, ಜಗಳೂರು: ತಾಲೂಕು ಗಡಿಗ್ರಾಮವಾದ ಸೊಕ್ಕೆ ಗ್ರಾಪಂ ನಲ್ಲಿ ನೂತನ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರಾತಿಗೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸೊಕ್ಕೆಯಿಂದ ಜಗಳೂರು ಪಟ್ಟಣಕ್ಕೆ 25 ಕಿ.ಮೀ ದೂರವಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. ನಿತ್ಯ ಜಗಳೂರಿಗೆ ಮತ್ತು ದಾವಣಗೆರೆ, ಕೊಟ್ಟೂರು ಕಾಲೇಜಿಗೆ ಓಡಾಡಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ.

ಆಟೋಗಳಿಲ್ಲ ವಾರದಲ್ಲಿ ಒಂದೆರಡು ದಿನಗ ಗೈರಾಬೇಕಾಗುತ್ತದೆ. ಆದ್ದರಿಂದ ಇಲ್ಲಿಯೇ ಹೊಸ ಕಾಲೇಜು ಪ್ರಾರಂಭವಾದರೆ ಎಲ್ಲಾ ಬಡ ಮಕ್ಕಳಿಗೆ ತುಂಬ ಅನುಕೂಲವಾಗುತ್ತದೆ. ಜಗಳೂರು ತಾಲೂಕಿನ ಸೊಕ್ಕೆಯಲ್ಲಿ ಹೊಸದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿಕೊಡಬೇಕು ಎಂದು ಗ್ರಾಮಸ್ಥರು ಮಂಗಳವಾರ ಒತ್ತಾಯಿಸಿದರು.ಜಗಳೂರು ತಾಲೂಕಿನ ಸೊಕ್ಕೆಯಲ್ಲಿ ಹೊಸದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿಕೊಡಬೇಕು ಎಂದು ಗ್ರಾಮಸ್ಥರು ಮಂಗಳವಾರ ಒತ್ತಾಯಿಸಿದರು.

ಪಾಲಕರಿಗೆ ತಮ್ಮ ಮಕ್ಕಳಿಗೆ ಹಣಕಾಸಿನ ಹೊರೆ ಕಡಿಮೆಯಾಗುತ್ತದೆ. ಆದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಲೇಜು ಮಂಜೂರು ಮಾಡಿಸುವಂತೆ ಗ್ರಾ.ಪಂ ಅಧ್ಯಕ್ಷ, ಎಸ್‍ಡಿಎಂಸಿ ಅಧ್ಯಕ್ಷ ಸೇರಿದಂತೆ ನೂರಾರು ಗ್ರಾಮಸ್ಥರು ಆಗಮಿಸಿ ಶಾಸಕರಿಗೆ ಮನವರಿಕೆ ಮಾಡಿದರು.

ಹೋಬಳಿ ಮತ್ತು ಗ್ರಾಪಂ ಸ್ಥಾನವಾಗಿರುವ ಸೊಕ್ಕೆಯಲ್ಲಿ ಸುಮಾರು 7627 ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ಗ್ರಾಮವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಯರಲಕಟ್ಟೆ, ಚಿಕ್ಕಬಂಟನಹಳ್ಳಿ, ಗೋಪಾಲಪುರ, ಗಡಿಮಾಕುಂಟೆ, ಹೊಸಲಕ್ಕಂಪುರ, ಹಳೆಲಕ್ಕಂಪುರ, ಚಿಕ್ಕ ಉಜ್ಜಯಿನಿ, ಗೌರಿಪುರ ಸೇರಿದಂತೆ ಇತರೆ ಗ್ರಾಮಗಳ ಹೊಂದಿಕೊಂಡಿವೆ.

ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿದ್ದರೂ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದೆ ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ತಿರುಮಲ, ಗ್ರಾ.ಪಂ ಸದಸ್ಯ ಪಾಪಣ್ಣ, ಮುಖಂಡರಾದ ದೇವಿಕರೆ ಸುರೇಶ್, ಲೋಕಣ್ಣ, ರಾಜಪ್ಪ, ಮಾರಣ್ಣ, ಡಿ.ಸಿ ಹನುಮಂತಪ್ಪ, ಟಿಪ್ಪುಸಾಬ್, ಹಳ್ಳೆಪ್ಪ, ಶೇಖರಪ್ಪ, ಭರಮಪ್ಪ, ಚನ್ನಬಸಪ್ಪ, ನಾಗರಾಜ್, ನಿವೃತ್ತ ಅಧಿಕಾರಿ ರಾಜುಸಾಬ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!