ಸುದ್ದಿವಿಜಯ, ಜಗಳೂರು: ಬರಪೀಡಿತ ಜಗಳೂರು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಶಿರಿಡಿ ಸಾಯಿ ಬಾಬಾರ ಆಶೀರ್ವಾದಿಂದ ಉತ್ತಮ ಮಳೆ, ಬೆಳೆಯಾಗಿ ರೈತರು, ಜನ ಸಾಮಾನ್ಯರು ಸುಖ, ಶಾಂತಿಯಿಂದ ಜೀವಿಸುವಂತಾಗಲಿ ಎಂದು ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪೀಠಾಧಿಪತಿ ಡಾ.ಶಿವಾನುಭವ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಆಶೀರ್ವದಿಸಿದರು.
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಸೋಮವಾರ ಮತ್ತು ಮಂಗಳವಾರ ಮಂಡಲ ಪೂಜೆ, ಮಹಾರುದ್ರಾಭಿಷೇಕ, ಹೋಮ. ಪೂರ್ಣಾವತಿಯಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ದಿಶಾ ಕಮಿಟಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ ಮತ್ತು ಅವರ ತಂದೆ ಪ್ರೊ.ಜೆ.ಎಂ.ತಿಪ್ಪೇಸ್ವಾಮಿ ಅವರು ತಮ್ಮ ತಂದೆ ತಾಯಿಯರ ಸಂಕಲ್ಪದಂತೆ ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಸಂಸ್ಕೃತ ಶ್ಲೋಕದಂತೆ ಹುಟ್ಟಿದ ಊರಿನ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟಿದ್ದಾರೆ.ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಸೋಮವಾರ ಮತ್ತು ಮಂಗಳವಾರ ಎರಡ ದಿನ ಸಾಯಿ ಬಾಬಾ ಮಂದಿರದಲ್ಲಿ ನಡೆದ ಮಂಡಲ ಪೂಜೆ, ಮಹಾರುದ್ರಾಭಿಷೇಕ, ಹೋಮ. ಪೂರ್ಣಾವತಿಯಿ ಧಾರ್ಮಿಕ ಕಾರ್ಯಕ್ರಮದಲ್ಲಿ ನೊಣವಿನಕೆರೆ ಶ್ರೀಗಳನ್ನು ಆಶೀರ್ವಚನ ನೀಡಿದರು.
ಸ್ವಾರ್ಥ ರಹಿತವಾಗಿ ಅವರು ಎಲ್ಲ ಧರ್ಮಿಯರಿಗೂ ಒಳಿತಾಗಲಿ ಎಂದು ಸಾಯಿ ಮಂದಿರ ನಿರ್ಮಿಸಿ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ನಿತ್ಯ ನಡೆಯುವಂತೆ ಇಲ್ಲಿಯೂ ಅನ್ನದಾಸೋಹ, ಸಾಯಿಬಾಬಾ ಸ್ಮರಣೆ ಮತ್ತು ತ್ರಿಕಾಲ ಪೂಜೆ ನೆರವೇರಲಿ. ಎಲ್ಲ ಭಕ್ತರು ಅವರಿಗೆ ಬಲ ತುಂಬ ಬೇಕು ಎಂದು ಕರೆ ನೀಡಿದರು.
ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಎಸ್.ಹೊಸಮನಿ ಮಾತನಾಡಿ, 48 ದಿನಗಳ ಕಾಲ ನಿರಂತರ ಧಾರ್ಮಿಕ ಪೂಜಾ ವಿಧಿವಿಧಾನ ಮತ್ತು ಭಜನಾ ಕಾರ್ಯಕ್ರಮಗಳನ್ನು ನೆರವೇರಿಸಿದ ಪ್ರೊ.ಜೆ.ಎಂ.ತಿಪ್ಪೇಸ್ವಾಮಿ ಮತ್ತು ಪುತ್ರಿ ಸ್ವಾತಿ ತಿಪ್ಪೇಸ್ವಾಮಿ ಅವರು ಈ ಭಾಗದ ಜನರ ಭರವಸೆಯ ಬೆಳಕಾಗಿದ್ದಾರೆ.ಇದೊಂದು ಐತಿಹಾಸಿಕ ಮೈಲಿಗಲ್ಲು. ತಾಲೂಕಿನಲ್ಲಿ ಎಲ್ಲಿಯೂ ಸಾಯಿ ಬಾಬಾ ಮಂದಿರ ಇರಲಿಲ್ಲ. ಶಿರಿಡಿಗೆ ಹೋಗಲು ಸಾಧ್ಯವಾಗದ ಭಕ್ತಿರು ಈ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ಬಾಬಾರ ಆಶೀರ್ವಾದ ಪಡೆದು ಪುನೀತರಾಗಿ ಎಂದರು.
ದಿಶಾ ಕಮಿಟಿ ಸದಸ್ಯೆ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಮಾತನಾಡಿ, ಕುಡಿಯಲು ನೀರಿನ ಸಮಸ್ಯೆ ಇರುವ ಸೊಕ್ಕೆ ಗ್ರಾಮದಲ್ಲಿ ಸಾಯಿ ಬಾಬಾರ ಮಂದಿರ ನಿರ್ಮಾಣವಾದ ಮೇಲೆ ಕೊರಿಸಿದ ಬೋರ್‍ವೆಲ್‍ಗಳಲ್ಲಿ ಸಾಕಷ್ಟು ನೀರು ಬರುತ್ತಿದ್ದು ಬಾಬಾರ ಪವಾಡವೇ ಸರಿ.
ತಂದೆಯವರ ಅಭಿಲಾಶೆಯಂತೆ ಸಾಯಿ ಬಾಬಾ ಮಂದಿರ ನಿರ್ಮಾಣವಾಗಿರುವುದು ಸಂತೋಷ ಉಂಟು ಮಾಡಿದೆ ಎಂದರು.ಕಾರ್ಯಕ್ರಮದಲ್ಲಿ 48 ದಿನಗಳ ಕಾಲ ಭಜನೆ ಮಾಡಿದ ಹೊಸಕೆರೆ, ಲಕ್ಕಂಪುರ, ವಾಲ್ಮೀಕಿ ಮತ್ತು ಪಾಂಡುರಂಗ ಭಜನಾ ಮಂಡಳಿಯ ಸದಸ್ಯರಿಗೆ ಮತ್ತು ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ ಭಕ್ತರಿಗೆ ಸನ್ಮಾನಿಸಲಾಯಿತು.
ಈ ವೇಳೆ ವಿಜಯನಗರ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಪೀಠಾಧಿಪತಿ ಮಹಾಂತ ವಿದ್ಯಾದಾಸ ಬಾಬಾ, ದೇವಸ್ಥಾನ ನಿಮಾತೃ ಪ್ರೊ.ಜೆ.ಎಂ.ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ತಿರುಮಲಾ, ಉಪಾಧ್ಯಕ್ಷೆ ಚೌಡಮ್ಮ, ಸೊಕ್ಕೆ ನಾಗರಾಜ್ ಸೇರಿದಂತೆ ಅನೇಕರು ಇದ್ದರು.