ಸುದ್ದಿವಿಜಯ, ಜಗಳೂರು: ನೂತನ ವರ್ಷ ಹಿನ್ನೆಲೆ ಸೋಮವಾರ ಶಾಸಕ ಬಿ.ದೇವೇಂದ್ರಪ್ಪ ಸೊಕ್ಕೆ ಗ್ರಾಮದ ಶಿರಡಿಯ ಶ್ರೀ ಸಾಯಿ ಬಾಬಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನೂತನ ನಾಡ ಕಚೇರಿ ಉದ್ಘಾಟನೆಗೆ ತೆರಳಿದ್ದ ಅವರು ಉದ್ಘಾಟನೆಗೂ ಮುನ್ನ ಶಿರಡಿ ಸಾಯಿ ಬಾಬಾ ಚಾರಿಟೇಬಲ್ ಟ್ರಸ್ಟ್ ನ ಪ್ರೊ.ತಿಪ್ಪೇಸ್ವಾಮಿ ಅವರ ಆಹ್ವಾನದ ಮೇರೆಗೆ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಹೊಸ ವರ್ಷ ಆಗಮದಿಂದ ನಾಡಿನಾದ್ಯಂತ ಮಳೆ ಬೆಳೆ ಉತ್ತಮವಾಗಿ ಆಗಲಿ. ಮಂದಗತಿಯಲ್ಲಿ ಸಾಗುತ್ತಿರುವ 57 ಕೆರೆ ತುಂಬಿಸುವ ಕಾಮಗಾರಿ ಇದೇ ವರ್ಷ ಮೇ ಮಾಹೆಗೆ ಪೂರ್ಣಗೊಂಡು ಎಲ್ಲ ಕೆರೆಗಳಿಗೂ ನೀರು ಹರಿಯುವಂತಾಗಲಿ.
ಅಪ್ಪರ್ ಭದ್ರಾ ಯೋಜನೆ ಶೀಘ್ರ ಪೂರ್ಣವಾಗಲು ದೈವ ಅನುಗ್ರಹ ಇರಲಿ ಎಂದು ಭಕ್ತಿಯಿಂದ ನಮಿಸಿ ಆಶೀರ್ವಾದ ಪಡೆದರು.
ಶ್ರೀ ಸಾಯಿಬಾಬಾ ಟ್ರಸ್ಟ್ ನವತಿಯಿಂದ ಹಾಗೂ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್ ಅಧ್ಯಕ್ಷ ಪ್ರೊ.ತಿಪ್ಪೇಸ್ವಾಮಿ ಶಾಸಕ ಬಿ.ದೇವೇಂದ್ರಪ್ಪ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರನ್ನು ಸನ್ಮಾನಿಸಿದರು.