ಸುದ್ದಿವಿಜಯ, ಜಗಳೂರು: ಶ್ರಾವಣ ಮಾಸದ ಮೊದಲ ಭಾನುವಾರ ಹಿನ್ನೆಲೆ ತಾಲೂಕಿನ ಕಟ್ಟಿಗೆಹಳ್ಳಿ ಮತ್ತು ಅರಿಶಿಣಗುಂಡಿ ಗ್ರಾಮದ ಬಳಿ ಬೆಟ್ಟದಲ್ಲಿರುವ ಐತಿಹಾಸಿಕ ಶ್ರೀ ಸೋಮೇಶ್ವರ ಸ್ವಾಮಿಯ 3ನೇ ವರ್ಷದ ಆರಾಧನೆ ಕಾರ್ಯಕ್ರಮ ಭಾನುವಾರ ಬೆಳಗಿನ ಜಾವ ಜರುಗಲಿದೆ.
ಐತಿಹಾಸಿಕ ಹಿನ್ನೆಲೆಯುಳ್ಳಿ ಶ್ರೀ ಸೋಮೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಮೂರು ವರ್ಷಗಳ ಹಿಂದೆ ಕೆಡವಿ ನೂತನ ದೇವಸ್ಥಾನ ನಿರ್ಮಾಣ ಮಾಡಲಾಗಿತ್ತು.
2021ರಲ್ಲಿ ದೇವಸ್ಥಾನ ಶ್ರಾವಣ ಮಾಸದ ಮೊದಲವಾರ ಉದ್ಘಾಟನೆಯಾಗಿತ್ತು. ಹೀಗಾಗಿ ಪ್ರತಿವರ್ಷ ಶ್ರಾವಣ ಮಾಸದ ಮೊದಲ ಭಾನುವಾರ ಬೆಳಗಿನ ಜಾವ ಮೂರು ಗಂಟೆಯಿಂದ ಆರು ಗಂಟೆಯವರೆ ಶ್ರೀ ಸೋಮೇಶ್ವರ ಸ್ವಾಮಿಗೆ ನೂರಾರು ಭಕ್ತರು ಸೇರಿ ರುದ್ರಾಭಿಷೇಕ, ಅರ್ಚನೆ, ವಿಶೇಷ ಪೂಜೆ ಸೇರಿದಂತೆ ಅನೇಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
ಬೆಳಿಗ್ಗೆ ಅನ್ನ ಸಂತರ್ಪಣೆ ಕಾರ್ಯಕ್ರಮವಿದ್ದು ಅರಿಶಿಣಗುಂಡಿ, ಕಟ್ಟಿಗೆಹಳ್ಳಿ, ಲಿಂಗಣ್ಣನಹಳ್ಳಿ, ಜಮ್ಮಾಪುರ, ಮರೇನಹಳ್ಳಿ, ತೋರಣಗಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಬಂದು ಪೂಜಾ ವಿಧಿವಿಧಾನದಲ್ಲಿ ಭಾಗವಹಿಸಿ ಪ್ರಸಾದ ಸೇವನೆಯಲ್ಲಿ ಭಾಗವಹಿಸಲು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಕೋರಿಕೊಂಡಿದ್ದಾರೆ.