suddivijayanews27/08/2024
ಸುದ್ದಿವಿಜಯ, ಜಗಳೂರು: ದೇಹಾರೋಗ್ಯ ಉತ್ತಮವಾಗಿದ್ದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯಿಸಿದರು.
ತಾಲೂಕಿನ ಕಲ್ಲೆದೇವಪುರ ಗ್ರಾಮದಲ್ಲಿ ಮಂಗಳವಾರ ಪ್ರೌಢಶಾಲೆಗಳ ವಲಯಮಟ್ಟ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗುವುದರ ಜೊತೆಗೆ ಆರೋಗ್ಯವಂತನ್ನಾಗಿ ಇರಿಸುವುದು ವಿಶೇಷ.
ಇಂದಿನ ಪೀಳಿಗೆ ಈ ದೇಶದ ಆಸ್ತಿಯಾಗಿದ್ದು, ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಯಾದ ಕ್ರೀಡೆ, ಸಂಗೀತ, ಸಾಹಿತ್ಯ, ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವಂತಹ ಕೆಲಸ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಭಾಗವಹಿಸುವುದು ಬಹಳ ಮುಖ್ಯ ತೀರ್ಪುಗಾರರು ಸಹ ಸತ್ಯ ಮತ್ತು ನ್ಯಾಯದ ತೀರ್ಪುನ್ನು ನೀಡಬೇಕು. ಯಾವುದು ಕ್ರೀಡಾಪಟುಗೆ ಅನ್ಯಾಯವಾಗಬಾರದು.
ಯಾವ ಶಾಲೆಗೆ ಗೌರವ ಸಲ್ಲಬೇಕೋ ಆ ಶಾಲೆಗೆ ಸಲ್ಲುತ್ತದೆ. ಕ್ರೀಡಾಪಟುವನ್ನು ಗುರುತಿಸುವಂತಹ ಕೆಲಸ ಆಗಬೇಕು. ಅಂತವರನ್ನು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ವರೆಗೆ ಪ್ರೋತ್ಸಾಹಿಸಿ ತರಬೇತಿ ನೀಡಿ ಅವರಿಗೆ ಬೇಕಾದ ಅಗತ್ಯತೆಯನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ, ಡಿ.ಡಿ.ಹಾಲಪ್ಪ, ಗ್ರಾ.ಪಂ.ಅಧ್ಯಕ್ಷೆ ವಸಂತಕುಮಾರಿ, ಮಾಜಿ ಜಿ.ಪಂ ಸದಸ್ಯ ಕೆ.ಪಿ.ಪಾಲಯ್ಯ, ವಕೀಲ ಸಂಘದ ಅಧ್ಯಕ್ಷ ಬಿ.ಬಸವರಾಜ್, ಗ್ರಾ.ಪಂ.ಸದಸ್ಯ ಬಡಯ್ಯ,
ಮುಖ್ಯ ಶಿಕ್ಷಕ ರಮೇಶ್ ನಾಯ್ಕ, ಶಿಕ್ಷಕರಾದ ಚಿತ್ತಯ್ಯ, ನಾಗರಾಜ್ ನಾಯ್ಕ, ಚೈತ್ರ, ಮುಖಂಡರಾದ ಬಿ.ಮಹೇಶ್ವರಪ್ಪ, ಹಟ್ಟಿ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರಿದ್ದರು.