ಜಗಳೂರು: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಸಕರಿಂದ ಸಮವಸ್ತ್ರ ವಿತರಣೆ

Suddivijaya
Suddivijaya September 24, 2023
Updated 2023/09/24 at 1:39 PM

ಸುದ್ದಿವಿಜಯ, ಜಗಳೂರು:ಮಕ್ಕಳಿಗೆ ಓದಿನ ಮಹತ್ವ ತಿಳಿಸಿಕೊಡುವುದರ ಜೊತೆಗೆ ಮಗುವಿನ ದೈಹಿಕ ಬೆಳವಣಿಗೆಗೆ ಪೂರಕವಾಗಿ ಕ್ರೀಡೆಯಲ್ಲೂ ಆಸಕ್ತಿ ತೋರುವಂತೆ ಹುರುದುಂಬಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮಾಮೂಲಿ ಆದರೆ ಭಾಗವಹಿಸುವಿಕೆ ಮುಖ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ 2023-24ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಾನುವಾರ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗಳೂರು ಪಟ್ಟಣದ ಶಾಸಕ ಜನ ಸಂಪರ್ಕ ಕಚೇರಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸಮವಸ್ತ್ರ ವಿತರಿಸಿದರು.
ಜಗಳೂರು ಪಟ್ಟಣದ ಶಾಸಕ ಜನ ಸಂಪರ್ಕ ಕಚೇರಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸಮವಸ್ತ್ರ ವಿತರಿಸಿದರು.

ಕ್ರೀಡೆಯಿಂದ ಮಕ್ಕಳಲ್ಲಿ ಅದಮ್ಯ ಧೈರ್ಯ ಹುಟ್ಟುತ್ತದೆ. ಬದುಕಲು ಸ್ಪೂರ್ತಿ ನೀಡುವ ಕ್ರೀಡೆಯ ಬಗ್ಗೆ ಪ್ರತಿಯೊಬ್ಬರು ಆಸಕ್ತಿ ಬೆಳೆಸಿಕೊಳ್ಳಬೇಕು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಹಜವಾಗಿರುವ ದೇಹದಾಢ್ರ್ಯ ಕ್ರೀಡೆಗೆ ಪೂರಕವಾಗಿರುತ್ತದೆ. ಕ್ರೀಡೆಗಳಲ್ಲಿ ಸೋಲು, ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ. ಆತ್ಮವಿಶ್ವಾಸದಿಂದ ಆಟವಾಡಿ ಎಂದು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು.

ಸಮವಸ್ತ್ರ ಏಕತೆಯ ಸಂಕೇತವಾಗಿದೆ. ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅದನ್ನು ಆಸ್ವಾದಿಸಬೇಕು.

ಆಟದಲ್ಲಿ ಸೋಲುಗೆಲುವು ಒಂದು ಭಾಗ. ಯಾವುದೇ ಆಟವಾಗಿರಲಿ ಅದನ್ನು ಆಡುವುದರಲ್ಲಿ ಅಭಿರುಚಿ, ಇಷ್ಟ, ಉತ್ಸಾಹ ಇರಬೇಕು. ಆಟದೊಡನೆ ಸ್ವರ್ಧಾ ಮನೋಭಾವ ಜೊತೆ, ಜೊತೆಗೆ ನೆರಳಾಗಿ ಇರಬೇಕು.

ಕ್ರೀಡಾಳುಗಳಲ್ಲಿ ಆಸಕ್ತಿಯೊಂದಿದ್ದರೆ ಸಾಲದು ಶ್ರದ್ಧೆ, ಅಭ್ಯಾಸ ತರಭೇತಿ ಇವೆಲ್ಲವೂ ಇದ್ದರೆ ಮಾತ್ರ ಗೆಲ್ಲಲು ಸಾಧ್ಯ.
ಜಿಲ್ಲಾ ಮಟ್ಟದಲ್ಲಿ ತಾಲೂಕು ಪ್ರತಿನಿಧಿಸುವ ಎಲ್ಲ ವಿದ್ಯಾರ್ಥಿಗಳಲ್ಲಿ ಏಕತೆ ಕಾಣಲಿ ಎಂದು ಈ ಜರ್ಸಿಗಳನ್ನು ವಿತರಿಸಲಾಗಿದ್ದು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಗೆದ್ದು ಸಾಧನೆ ಮಾಡುವ ಮೂಲಕ ವಿಭಾಗೀಯ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಎಂದರು.

ಹಿರೇಮಲ್ಲನಹೊಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಅನೂಪ್‍ರೆಡ್ಡಿ ಮಾತನಾಡಿ, ಶಾಸಕರು ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದು ಎಲ್ಲ ಕ್ರೀಡಾಪಟುಗಳು ಏಕತೆಯಿಂದ ಕೂಡಿರಲು ಸಮವಸ್ತ್ರ ಕೊಡುಗೆಯಾಗಿ ನೀಡಿರವುದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಹೆಚ್ಚಿಸಿದೆ. ಅಪ್ಪರ್ ಭದ್ರಾ ಪ್ರಾಜೆಕ್ಟ್‍ನ ಸಿಎಸ್‍ಆರ್ ಫಂಡ್‍ನಿಂದ ಈ ಸಮವಸ್ತ್ರ ಕೊಡುಗೆಯಲ್ಲಿ ಕೈಜೋಡಿಸಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣ ಇಲಖೆ ಟಿಪಿಒ ಸುರೇಶ್‍ರೆಡ್ಡಿ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೆಲವೊಂದು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದೇ ಇದ್ದರೂ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಸಣ್ಣ ಸಾಧನೆಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಅರಿಶಿಣಗುಂಡಿ ಮಂಜಣ್ಣ, ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಬರ್ಕತ್ ಆಲಿ, ಪಪಂ ಸದಸ್ಯ ಮಹಮದ್ ಆಲಿ, ತಾನಾಜಿ ಗೋಸಾಯಿ, ಹುಚ್ಚಮ್ಮನಹಳ್ಳಿ ರಂಗಣ್ಣ

ತಮಲೇಹಳ್ಳಿ ಗುರು ಮೂರ್ತಿ, ಜಿಪಂ ಮಾಜಿ ಸದಸ್ಯ ಎಸ್.ಕೆ.ರಾಮರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಉಪನ್ಯಾಸಕ ಟಿ.ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!