ಸುದ್ದಿವಿಜಯ ಜಗಳೂರು: ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಸವೇಶ್ವರರ ಭಾವಚಿತ್ರವನ್ನು ಟ್ರ್ಯಾಕ್ಟರ್‍ನಲ್ಲಿರಿಸಿ ಹೂವುಗಳಿಂದ ಅಲಂಕರಿಸಿ, ಎತ್ತಿನ ಬಂಡಿಗಳನ್ನು ಹೂಡಿಕೊಂಡು ಅವುಗಳಿಗೂ ಹೂಗಳಿಂದ ಸಿಂಗರಿಸಿಕೊಂಡು ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಸಮಾಳ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಮೆರವಣಿಗೆ ಮಾಡಲಾಯಿತು.ಜಗಳೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಮೊದಲಿಗೆ ಹೊರಕೆರೆ ತಗ್ಗಿನ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಭವ್ಯ ಮೆರವಣಿಗೆ ಭುವನೇಶ್ವರಿ ವೃತ್ತ, ಎಸ್‍ಬಿಐ ಬ್ಯಾಂಕ್, ಮಹಾತ್ಮಗಾಂಧಿ ಹಳೆ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಮೂಲಕ ಸಂಚರಿಸಿ ತಾಲೂಕು ಕಚೇರಿಗೆ ತೆರಳಿತು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯೆ ಮಂಜಮ್ಮ, ಶಿವನಗೌಡ್ರು, ಮಾಜಿ ಎಪಿಎಸಿ ಅಧ್ಯಕ್ಷ ಎನ್.ಎಸ್ ರಾಜು, ಮುಖಂಡರಾದ ಮಂಜಣ್ಣ, ಕಲ್ಲೇಶ್, ಶಿವಣ್ಣ ಸೇರಿದಂತೆ ಮತ್ತಿತರರಿದ್ದರು ಭಾಗವಹಿಸಿದ್ದರು.