ಸುದ್ದಿವಿಜಯ, ಜಗಳೂರು: ಈ ದೇಶದ ಸಂಪತ್ತು ಹಣ, ಆಸ್ತಿ, ನೈಸರ್ಗಿಕತೆ ಅಲ್ಲ, ನಿಜವಾದ ಸಂಪತ್ತು ಆರೋಗ್ಯವಂತ, ಜ್ಞಾನವಂತ, ಸಂಸ್ಕಾರ ಹೊಂದಿದ ಯುವಕ-ಯುವತಿಯರು ಈ ದೇಶದ ಸಂಪತ್ತು ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ.
ವಿವೇಕಾನಂದ ಜಯಂತಿ ಹಿನ್ನೆಲೆ ರಕ್ತದಾನ ಶಿಬಿರ ಆಯೋಜನೆ ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ತಪೋಕ್ಷೇತ್ರ ಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಸ್ವಾಮಿ ಹೇಳಿದರು.
ಪಟ್ಟಣದ ವಾಲ್ಮಿಕಿ ಭವನದಲ್ಲಿ ಶುಕ್ರವಾರ ಸಮಾನ ಮನಸ್ಕರ ಬಳಗದ ವತಿಯಿಂದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 161ನೇಯ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಸ್ವಾರ್ಥಕ್ಕಾಗಿ ಬದುಕುವವರು ಇದ್ದು ಇಲ್ಲದಂತೆ, ಪರರ ಸುಖ-ದುಃಖಕ್ಕೆ ಮಿಡಿಯುವ ಹೃದಯಗಳು ಇಲ್ಲದಿದ್ದರು ಅವರ ಸಾಧನೆ ಅಜರಾಮರವಾಗಿರುತ್ತದೆ. ಈಗಿನ ಯುವ ಸಮೂಹವು ತಮ್ಮ ಜೀವನಗಳಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಸರ್ವಧರ್ಮ ಸಮನ್ವಯವನ್ನು ಸಾರಿದ ವಿಶ್ವದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣ ಎಂದರು.ಯುವ ಮುಖಂಡ ಬಿಸ್ತುವಳ್ಳಿ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಿರುವುದು ಸಂತಸ ತಂದಿದೆ.
ಮಹನೀಯರ ಸ್ಮರಣಾರ್ಥಕವಾಗಿ ಇವರೆಗೂ 19 ಬಾರಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಈ ಶಿಬಿರಕ್ಕೆ ಎಲ್ಲಾ ಯವಕರು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡುತ್ತಾ ಇದ್ದಾರೆ.
ಈ ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ. ಹೆಚ್ಚುಬಾರಿ ರಕ್ತದಾನ ಮಾಡಿದವರು ಬಂದು ರಕ್ತದಾನ ಮಾಡಿದಲ್ಲದೆ ಇನ್ನುಳಿದ ಯುವಕರಿಗೆ ಸ್ಫೂರ್ತಿಯಾಗಿರುವುದು ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಿ.ಎಸ್.ಅನಿತ್ ಕುಮಾರ್, ಗಡಿಮಾಕುಂಟೆ ಸಿದ್ದಣ್ಣ, ದಾವಣಗೆರೆ ಜಿಲ್ಲಾ ಆಸ್ಪತ್ರೆ ರಕ್ತಧಿಕಾರಿ ಡಾ.ಗೀತಾ, ದಸಂಸ ತಾಲ್ಲೂಕ್ ಸಂಚಾಲಕ ಬಿ.ಸತೀಶ್ ಮಲೆಮಾಚಿಕೆರೆ, ವಕೀಲ ತಿಪ್ಪೇಸ್ವಾಮಿ, ಬಿ.ಎನ್.ಸ್ವಾಮಿ ಉಪನ್ಯಾಸಕರು,
ಕ.ನ.ನಿ.ವೇ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ.ಜೆ ಹೆ.ಎಚ್.ಹೊಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ರೈತ ಯುವ ಮುಖಂಡ ಹೇಮರೆಡ್ಡಿ, ಪೂಜಾರಿ ಸಿದ್ದಪ್ಪ, ಹುಚ್ಚಂಗಿಪುರ ರವಿ.ಯು.ಸಿ, ಯುವ ಸಾಹಿತಿ ಜಗಜೀವನ್ ರಾಮ್.ಆರ್.ಎಲ್, ರಘು ಜಾಗ್ವಾರ್, ದಾವಣಗೆರೆ ಸಿ.ಜಿ.ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಗಳು ವರ್ಗ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.