ಜಗಳೂರು: ಕಾನನಕಟ್ಟೆ ಟೋಲ್ ಸಿಬ್ಬಂದಿ ವಜಾ ಪ್ರತಿಭಟನೆ!

Suddivijaya
Suddivijaya October 28, 2022
Updated 2022/10/28 at 12:57 AM

ಸುದ್ದಿವಿಜಯ,ಜಗಳೂರು: ಕಾನನಕಟ್ಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 54ರಲ್ಲಿ ಕಾರ್ಯನಿರ್ವಹಿಸುವ 30ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ವಜಾಗೊಂಡ ಸಿಬ್ಬಂದಿ ಗುರುವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಐಟಿಯು ನೇತೃತ್ವದಲ್ಲಿ ಪ್ರತಿಭನೆ ನಡೆಸಿದ ವಜಾಗೊಂಡ ಸಿಬ್ಬಂದಿ ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳದೇ ಇದ್ದರೆ ಅಮರಣಾಂತ ಉಪವಾಸ ಮಾಡುತ್ತೇವೆ ಎಂದು ಪಟ್ಟು ಹಿಡಿದು ಧರಣಿ ಸತ್ಯಾಗ್ರಹ ನಡೆಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಅನಂದರಾಜ್ ಮಾತನಾಡಿ, ಸುಮಾರು ಐದು ತಿಂಗಳಿನಿಂದ ಅನಗತ್ಯ ಗೊಂದಲ ಸೃಷ್ಟಿ ಮಾಡಿ ಕಾರ್ಮಿಕರನ್ನ ಬೀದಿಗೆ ತಂದಿರುವುದು ದುರಂತ. ಟಿಬಿಆರ್ ಹಾಗೂ ಟ್ಯಾಬ್ ಕಂಪನಿಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನಿಯ.

ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್‍ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನೆಡೆಸಿದರು.
ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್‍ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನೆಡೆಸಿದರು.

ಟ್ಯಾಬ್ ಕಂಪನಿಯ ಮೆನೇಜರ್ ರಘುನಂದನ್ ಎಂಬುವ ವ್ಯಕ್ತಿ ಸ್ಥಳಿಯ ಆಡಳಿತವಾಗಲಿ ರಾಜಕಾರಣಿಗಳು  ಹೇಳುವ ಯಾವುದೆ ಮಾತಿಗೂ ಬೆಲೆ ಕೊಡುವುದಿಲ್ಲ. ಸ್ಥಳಿಯವಾಗಿ ಗ್ರಾಮಗಳ ನಡುವೆ ಸ್ವಾಮರಸ್ಯ ಹಾಳು ಮಾಡುವ ಕಾರ್ಯಮಾಡುತ್ತಿದ್ದಾರೆ ಒಂದು ವೇಳೆ ಇದೆ ಕಾರ್ಯಮುಂದುವರಿದರೆ ಟೋಲ್ ಫ್ರೀ ಮಾಡಿ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ಮಹಾಲಿಂಗಪ್ಪ ಜೆಎಚ್ ಹೊಳೆ ಮಾತನಾಡಿ, 30ಜನ ಕಾರ್ಮಿಕರನ್ನ ಏಕಾಏಕಿ ಕೇಲಸದಿಂದ ತೆಗೆದು ಹಾಕಿರುವುದು ಖಂಡನಿಯ ಯಾವುದೆ ಷರತ್ತು ವಿದಿಸದೇ ಪುನರ್ ಕೇಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕರಾದ ಅಂಜಿನಪ್ಪ ಶಿವಕುಮಾರ್ ಬಸವರಾಜ್ ಮಲ್ಲಿಕಾರ್ಜುನ ಹಾಗೂ ಬಂಗಾರಿಗುಡ್ಡದ ಮಹಿಳಾ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು. ಜಗಳೂರು ಪಟ್ಟಣದ ಪೊಲೀಸ್ ಸಬ್ಇನ್‍ಸ್ಟೆಕ್ಟರ್ ಮಹೇಶ್ ಹೊಸಪೇಟ ಸೇರಿದಂತೆ ಅನೇಕ ಸಿಬ್ಬಂದಿ ಪ್ರತಿಭಟನಾ ನಿರತ ಕಾರ್ಮಿಕರ ಮತ್ತು ಕಂಪನಿ ಮಧ್ಯೆ ಅಹಿತರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!