ಸುದ್ದಿವಿಜಯ, ಜಗಳೂರು: ನರೇಗಾ ಯೋಜನೆಯಡಿ ಮಾಡಿದ ಕೂಲಿ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡದೇ ಗ್ರಾ.ಪಂ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ತಾಲೂಕಿನ ತೋರಣಗಟ್ಟೆ ಕೂಲಿಕಾರರು ಶನಿವಾರ ಆಪಾಧಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ತೋರಗಟ್ಟೆ ಗ್ರಾಪಂ ಕೆರೆ ಹೂಳೆತ್ತುವ ಕಾಮಗಾರಿ ಕಳೆದು ಒಂದುವರೆ ತಿಂಗಳಿಂದಲೂ ನಡೆಯುತ್ತಿದೆ. ಇಲ್ಲಿ ನಿತ್ಯ ಮಹಿಳೆಯರು, ಪುರುಷರು ಸೇರಿದಂತೆ 400ಕ್ಕೂ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ.
ಬಿಸಿಲನ್ನು ಲೆಕ್ಕಿಸದೆ ಕೂಲಿಗಾಗಿ ದುಡಿಯುತ್ತಿದ್ದೇವೆ. ಆದರೆ ಪಿಡಿಒ, ಎಂಜನಿಯರ್ ಎನ್‍ಎಂಆರ್ ತೆಗೆಯುವಾಗ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೂಲಿಕಾರು ಆರೋಪಿಸಿದರು.ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ನರೇಗಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪ್ರತಿ ಕೂಲಿಕಾರನಿಗೆ 349ರೂ ನೀಡಬೇಕು, ಆದರೆ ಎನ್‍ಎಂಆರ್‍ನಲ್ಲಿ ಮಾಡಿದ ತಪ್ಪಿನಿಂದ ಕೇವಲ 200 ರೂಗಳು ಮಾತ್ರ ಪಾವತಿಯಾಗುತ್ತಿದ್ದು, 149 ರೂ ಕಡಿಮೆಯಾಗಿದೆ.
ಬಿಸಿಲನ್ನು ಲೆಕ್ಕಿಸದೆ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಕೆಲಸ ಮಾಡಲಾಗಿದೆ. ಆದರೂ ಕೂಲಿ ಕಡಿತ ಮಾಡಿರುವುದು ಖಂಡನಿಯ ಎಂದರು.
ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ನರೇಗಾ ಯೋಜನೆ ಕೂಲಿಕಾರರ ಹಸಿವು ನೀಗಿಸುತ್ತಿದೆ. ಗ್ರಾಮಗಳಲ್ಲಿ ಕೆಲಸಗಳಿಲ್ಲದೇ ಜನರು ಬರೀಗೈಯಲ್ಲಿ ಕೂತಿದ್ದಾರೆ.ನರೇಗಾ ಕೆಲಸದಿಂದ ಹಸಿವಿನ ಚೀಲ ತುಂಬಿಕೊಳ್ಳಲು ಸಹಕಾರಿಯಾಗಿದೆ. ಆದರೆ ಪಿಡಿಒ ಬಸವರಾಜಯ್ಯ ಮತ್ತು ಎಂನಿಯರ್‍ಗಳ ಬೇಜವಾಬ್ದಾರಿಯಿಂದ ನೂರಾರು ಕುಟುಂಬಗಳಿಗೆ ಮೋಸವಾಗಿದೆ.
ಪೂರ್ಣ ಪ್ರಮಾಣದ ಕೂಲಿ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಮೇಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಬೇಜವಾಬ್ದಾರಿ ಪಿಡಿಒ:
ನರೇಗಾ ಕೆಲಸ ಮಾಡುವಾಗ ಕೂಲಿಕಾರರಿಗೆ ನೆರಳು, ಕುಡಿಯುವ ನೀರು ಪ್ರಥಮ ಚಿಕಿತ್ಸೆ ಕಿಟ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಆದರೆ ಈವರೆಗೂ ಯಾವುದೇ ನೆರಳಿನ ವ್ಯವಸ್ಥೆ ಮಾಡಿಲ್ಲ.
ಇದನ್ನು ಕೇಳಿದರೆ ಪಿಡಿಒ ಬಸವರಾಜಯ್ಯ ನೀವೇ ಗೂಟ ಕಟ್ಟಿಕೊಂಡು ಬಂದು ಚಪ್ಪರಾ ಹಾಕಿಕೊಳ್ಳಿ, ಇಲ್ಲ ಅಂದ್ರೆ ಮನೆ ಹೋಗಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ.
ಇನ್ನು ಎಂಜಿನಿಯರ್ ವೇಧಮೂರ್ತಿ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಮಾಹಿತಿ ಕೊಡುವುದಿಲ. ಕೂಲಿಕಾರರ ಲಕ್ಷಾಂತರ ರೂಗಳು ನಷ್ಟ ಮಾಡಿದ್ದಾರೆ. ನಷ್ಟ ತುಂಬಿಕೊಡಬೇಕು ಎಂದು ಕೂಲಿಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೂಲಿಕಾರರಾದ ಅನೀಲ್‍ಕುಮಾರ್, ಜಯ್ಯಣ್ಣ, ಬಸವರಾಜಪ್ಪ, ಅಂಜಿನಮ್ಮ, ದೇವರಾಜ್, ಭೀಮಣ್ಣ, ಕೃಷ್ಣಮೂರ್ತಿ, ತಿಪ್ಪಣ್ಣ,