ಸುದ್ದಿವಿಜಯ, ಜಗಳೂರು :ತಾಲೂಕಿನ ತೋರಣಗಟ್ಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ವೀರಪ್ಪ ಆವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ಘೋಷಿಸಿದರು.
ಹಿಂದಿನ ಅಧ್ಯಕ್ಷ ಟಿ.ಜಿ. ಬಾಲಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.
ಗ್ರಾಪಂ ನಲ್ಲಿ ಒಟ್ಟು 17 ಜನ ಸದಸ್ಯರಿದ್ದು ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದ ಕ್ಷೇತ್ರಕ್ಕೆ ವೀರಪ್ಪ ಹೊರತುಪಡಿಸಿ ಬೇರೆ ಯಾವ ಸದಸ್ಯರು ಉಮೇದುವಾರಿಕೆ ಸಲ್ಲಿಸದೇ ಇರುವುದರಿಂದ ಚುನಾವಣಾ ನಿಯಮದಂತೆ ಚುನಾವಣಾಧಿಕಾರಿಗಳು ವೀರಪ್ಪ ಉಪಾಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ಜಗಳೂರು ತೋರಣಗಟ್ಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ವೀರಪ್ಪ ಆವಿರೋಧವಾಗಿ ಆಯ್ಕೆಯಾದರು.
ಚುನಾವಣೆಗೆ ಸದಸ್ಯರಾದ ಮಂಜುಳ, ಶ್ವೇತಾ, ಈರಣ್ಣ ಗೈರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಪಿಡಿಓ ಬಸವರಾಜ್ಯ್ಯ, ಕಾರ್ಯದರ್ಶಿ ಸತೀಶ್, ಪರಮೇಶ್ ,
ಅಧ್ಯಕ್ಷೆ ರೂಪ, ಸದಸ್ಯರಾದ ಜಿ.ಸಿ. ಶ್ರೀನಿವಾಸ, ಈರಮ್ಮ, ಸಿದ್ದಲಿಂಗಮ್ಮ, ಕೆ.ಬಿ.ಓಬಳೇಶ್, ದುರ್ಗಮ್ಮ, ಬಾಲಪಪ್, ಬಸವರಾಜ್, ಮಂಗಳಗೌರಮ್ಮ, ಪಾಂಡುರಂಗಪ್ಪ, ಭಾರತಿ , ಚೌಡಮ್ಮ ಸೇರಿದಂತೆ ಮುಖಂಡರಾದ ಕೃಷ್ಣಮೂರ್ತಿ, ಬಾಲಕೃಷ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.