ಸುದ್ದಿವಿಜಯ,ಜಗಳೂರು: ಮಳೆ ಬಾರದೇ ಕಂಗೆಟ್ಟಿರುವ ರೈತರು ಒಂದಡೆಯಾದರೆ, ಕುರಿ ಮೇಕೆಗಳಿಗೆ ಆಹಾರಕ್ಕಾಗಿ ಕುರಿಗಾಯಿಗಳು ರಸ್ತೆ ಬದಿಯಲ್ಲಿ ಬೆಳೆದ ಮರಗಳ ತಲೆ ಕಡಿದು ಮೇಯಿಸಿಕೊಳ್ಳುತ್ತಿದ್ದಾರೆ.
ಹೌದು, ಜಗಳೂರನಿಂದ ಸೊಕ್ಕೆ ಮಾರ್ಗವಾಗಿ ಉಜ್ಜಿನಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳನ್ನು ಅರಣ್ಯ ಇಲಾಖೆ ಕಳೆದ ಎರಡು ಮೂರು ವರ್ಷಗಳಿಂದ ನೆಟ್ಟು ಪೋಷಿಸುತ್ತಿದೆ.
‘ಹಸಿರೇ ಉಸಿರು’ ಎಂಬ ಶ್ಲೋಗನ್ ಎಲ್ಲರಿಗೂ ಗೊತ್ತು. ಬದುಕೋಕೆ ನಮಗೆ ಗಾಳಿ ಬೇಕೇ ಬೇಕು. ಈಗಾಗಲೇ ಮಳೆಯಿಲ್ಲದೇ ಕಂಗಾಲಾಗಿರುವ ಜನರು ಮಳೆಗಾಗಿ ಹಪಹಪಿಸುತ್ತಿದ್ದಾರೆ.ಮಳೆ ಬರೋಕೆ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವ ಸತ್ಯ ಗೊತ್ತಿದ್ದರೂ ಕುರಿ ಕಾಯುವವರು ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟು ರೆಂಬೆ ಕೊಂಬೆಗಳನ್ನು ಮುರಿದು ಮೇಯಿಸಿಕೊಂಡು ಹೋಗುತ್ತಿದ್ದಾರೆ.
ಬದಲಾಗುತ್ತಿರುವ ಜಾಗತೀಕ ತಾಪಮಾನಕ್ಕೆ ಮರಗಳು ಪ್ರಶ್ನಿಸುತ್ತಿವೆ ‘ಯಾಕ್ರಪ್ಪ ನಮ್ಮ ತಲೆ ಕಡೀತಿರಿ? ನಾವೇನು ಮಾಡಿದ್ವಿ ನಿಮಗೆ’ ಎಂದು ಭವಿಷ್ಯದ ಪೀಳಿಗೆ ಉಳಿಯಬೇಕು ಎಂದಾದರೆ ಮರಗಿಡ ಬೆಳೆಸಬೇಕು ಎಂಬ ಅರಿವು ಎಲ್ಲರಿಗೂ ಗೊತ್ತು. ಆದರೆ ಈ ರೀತಿ ಸಾಲು ಮರಗಳನ್ನು ಕಡಿದರೆ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ.
ಪ್ರಜ್ಞಾವಂತರಾದ ನಾವೆಲ್ಲರೂ ಅರಣ್ಯ ಉಳಿಸದಿದ್ದರೆ ಭವಿಷ್ಯವಿಲ್ಲ. ಎಲ್ಲವೂ ಅರಣ್ಯಾಧಿಕಾರಿಗಳೇ ಮಾಡಬೇಕು ಎಂಬ ಮೊಂಡುವಾದ ಅನಗತ್ಯ. ಸುದ್ದಿವಿಜಯದ ಕಳಕಳಿ ಇಷ್ಟೆ ಮರಗಿಡಗಳಿಗೂ ನಿಮಗಿರುವಂತೆ ಜೀವ ಇದೆ.
ಕಡಿಯುವ ಮುನ್ನ ಅವುಗಳಿಗೂ ನೋವಾಗುತ್ತದೆ. ದಯಮಾಡಿ ಯೋಚಿಸಿ. ಮರಗಳು ಕೂಗುತ್ತಿವೆ. ‘ನಮಗೂ ಜೀವ ಇದೆ ಎಂದು’ ಪ್ಲೀಸ್ ಕಡಿಯಬೇಡಿ ಮರಗಳನ್ನು. ಇದೇ ಸುದ್ದಿವಿಜಯ ಕಳಕಳಿ.