ಜಗಳೂರು ಪಟ್ಟಣದ ನಾಲಂದ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

Suddivijaya
Suddivijaya December 6, 2023
Updated 2023/12/06 at 3:00 PM

ಸುದ್ದಿವಿಜಯ, ಜಗಳೂರು: ಇದೇ ಡಿ.23 ರಂದು ಶನಿವಾರ ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾಜಿ ಸಂಸದ ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಎಂ ವಿವಿಯ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಪ್ರೊ. ತೇಜಸ್ವಿ ಕಟ್ಟಿಮನಿ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಯಲು ಸೀಮೆಯ ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನಲ್ಲಿ ಮಾನವ ಸಂಪನ್ಮೂಲ ಅಧಿಕವಾಗಿದ್ದು ಅತಿ ಹೆಚ್ಚು ಪದವಿ ಪಡೆದ ಯುವಕ ಯುವತಿಯರಿದ್ದಾರೆ.

ಜಗಳೂರು ಪಟ್ಟಣದಲ್ಲಿ ಜಿಎಂ 'ಮ.ಹಾ' ಚಾರಿಟಬಲ್ ಫೌಂಡೇಶನ್ ವತಿಯಿಂದ ಪ್ರೊ.ತೇಜಸ್ವಿ ಕಟ್ಟಿಮನಿ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸುದ್ದಿಗೋಷ್ಠಿ ನಡೆಸಿದರು.
ಜಗಳೂರು ಪಟ್ಟಣದಲ್ಲಿ ಜಿಎಂ ‘ಮ.ಹಾ’ ಚಾರಿಟಬಲ್ ಫೌಂಡೇಶನ್ ವತಿಯಿಂದ ಪ್ರೊ.ತೇಜಸ್ವಿ ಕಟ್ಟಿಮನಿ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸುದ್ದಿಗೋಷ್ಠಿ ನಡೆಸಿದರು.

ವಿದ್ಯಾಭ್ಯಾಸ ಮುಗಿಸಿ ಹೊರ ಬಂದಿರುವ ಯುವಕರಿಗೆ ಉದ್ಯೋಗ ಅವಕಾಶಗಳ ಮಹಾಪೂರವೇ ಹರಿಯಲಿದೆ.

10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ, ಎಂಬಿಎ, ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್, ಮೆಕಾನಿಕಲ್, ಕೆಮಿಕಲ್), ಡಿಪ್ಲಮಾ, ಐಟಿಐ ಸೇರಿದಂತೆ ಕೌಶಲ ಆಧಾರಿತ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಲಭ್ಯವಾಗಲಿದೆ.

ಈಗಾಗಲೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ 52 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ನಾಲಂದ ಕಾಲೇಜು ಆವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ಉದ್ಯೋಗ ಮೇಳ ಆರಂಭಗಾಗಲಿದ್ದು ಆನ್‍ಲೈನ್ ನೋಂದಾಣಿ ಮತ್ತು ಸ್ಥಳದಲ್ಲೇ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ.

ಯಾವುದೇ ಶುಲ್ಕ ಪಾವತಿ ಅಗತ್ಯವಿಲ್ಲ. ಒಬ್ಬ ಅಭ್ಯರ್ಥಿಗೆ ನಾಲ್ಕು ಕಂಪನಿಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆರು ಸಾವಿರ ಉದ್ಯೋಗ ಅವಕಾಶಗಳಿವೆ. ಜಿಎಂ ಗ್ರೂಪ್ ಆಫ್ ಕಂಪನಿಯಲ್ಲೂ 45ಕ್ಕೂ ಹೆಚ್ಚು ವಿಭಾಗಗಳಲ್ಲಿ ಉದ್ಯೋಗಿಗಳು ಬೇಕಾಗಿದ್ದಾರೆ.

ಹೀಗಾಗಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಹೊಂದಿದ್ದು ಆಯ್ಕೆಯಾದ ಅಭ್ಯರ್ಥಿಗೆ ಆರಂಭದಿಂದ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವವರೆಗೂ ಸಂಪೂರ್ಣ ಚಾರಿಟಿ ಫೌಂಡೇಶನ್ ಜವಾಬ್ದಾರಿಯಾಗಿದೆ ಎಂದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನ.23ರಂದು ಸಂಸದ ಜಿಎಂ ಸಿದ್ದೇಶ್ವರ್ ಮತ್ತು ವಿವಿಧ ಗಣ್ಯರು ಕಾರ್ಯಕ್ರಮದಕ್ಕೆ ಚಾಲನೆ ನೀಡಲಿದ್ದಾರೆ. ಇದು ಎಂಪಿ ಎಲೆಕ್ಷನ್ ಚುನಾವಣೆ ಗಿಮಿಕ್ ಅಲ್ಲ.

ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಂಸದರಾದ ಜಿಎಂ ಸಿದ್ದೇಶ್ವರ್ ಆಯೋಜನೆ ಮಾಡಿದ್ದಾರೆ. ವಿದ್ಯಾವತಂತ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಂಡಲ್ ಅಧ್ಯಕ್ಷ ಎಚ್.ಎಸ್.ಮಹೇಶ್ ಬಿಜೆಪಿ ಮುಖಂಡರಾದ ಶಿವಕುಮಾರ್ ಸ್ವಾಮಿ, ಪಪಂ ಸದಸ್ಯ ನವೀನ್, ಸತೀಶ್ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!