ವಿಶೇಷ ಚೇತನರಿಗೆ UDID ಕಾರ್ಡ್ ಶಿಬಿರಕ್ಕೆ ಮಹಾಂತೇಶ್ ಬ್ರಹ್ಮ ಮನವಿ

Suddivijaya
Suddivijaya June 21, 2024
Updated 2024/06/21 at 11:49 AM

suddivijayanews21/06/2024
ಸುದ್ದಿವಿಜಯ, ಜಗಳೂರು: ತಾಲ್ಲೂಕಿನಲ್ಲಿ ಯುಡಿಐಡಿ ಕಾರ್ಡ್ ಶಿಬಿರ ಹಮ್ಮಿಕೊಳ್ಳಲು ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧಕ್ಷ ಮಹಾಂತೇಶ್ ಬ್ರಹ್ಮ ಶಾಸಕ ಬಿ.ದೇವೇಂದ್ರಪ್ಪನವರ ಸಮ್ಮುಖದಲ್ಲಿ ದಾವಣಗೆರೆ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್‍ಗೆ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ, ಜಗಳೂರು ತಾಲ್ಲೂಕಿನಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ವಿಶೇಷಚೇತನರಿದ್ದು 500ಕ್ಕು ಅಧಿಕ ವಿಶೇಷಚೇತನರು ಯುಡಿಐಡಿ ಕಾರ್ಡ್ ಪಡೆಯದೇ ಸೌಲಭ್ಯ ವಂಚಿತರಾಗಿದ್ದಾರೆ.

ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಆಡಿಯೋ ಮೀಟರ್,ಮಾನಸಿಕ ತಜ್ಞರು,ಪಿಜಿಷಿಯನ್ ಕಡ್ಡಾಯವಾಗಿ ಒಳಗೊಂಡಂತೆ ಕೀಲು ಮೂಳೆ ತಜ್ಞರು,ಕಣ್ಣು ಕಿವಿ ಗಂಟಲು ತಜ್ಞ ವೈದ್ಯರು ಸೇರಿದಂತೆ ವಿಕಲಚೇತನರಿಗೆ ಸರಾಗವಾಗಿ ಬಂದು ಸೇರುವ ಸೂಕ್ತ ಸ್ಥಳದಲ್ಲಿ ಯುಡಿಐಡಿ ಕಾರ್ಡ್ ಶಿಬಿರವನ್ನು ಜಗಳೂರಿನಲ್ಲಿ ಅತಿ ತುರ್ತಾಗಿ ಆಯೋಜನೆ ಮಾಡಬೇಕೆಂದು ತಿಳಿಸಿದರು.

ಪ್ರತಿಕ್ರಿಯೆ ನೀಡಿದ ಸಿಇಓ ಸುರೇಶ್ ಬಿ.ಇಟ್ನಾಳ್, ಶೀಘ್ರವಾಗಿ ಜಗಳೂರಿನಲ್ಲಿ ಯುಡಿಐಡಿ ಕಾರ್ಡ್ ಶಿಬಿರ ಏರ್ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ಚೇತನರು ನಮ್ಮ ಸಮಾಜದ ಬಹು ಮುಖ್ಯ ಅಂಗ. ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಚಾಚು ತಪ್ಪದೇ ಅಧಿಕಾರಿಗಳು ತಲುಪಿಸಬೇಕು ಎಂದು ಹೇಳಿದರು.

ಶಾಸಕರಾದ ಚಿಕ್ಕಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ, ಜಗಳೂರಿನಲ್ಲಿ ಯುಡಿಐಡಿ ಕಾರ್ಡ್ ಶಿಬಿರ ಏರ್ಪಡಿಸಲು ಸೂಚನೆ ನೀಡಿದ್ದು, ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸುವುದರ ಮುಖಾಂತರ ನನ್ನ ಅವಧಿಯಲ್ಲಿ ವಿಶೇಷಚೇತನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಪ್ರಯತ್ನಿಸುವೆ ಎಂದು ತಿಳಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!