suddivijaya/news/14/8/2023
ಸುದ್ದಿವಿಜಯ, suddivijaya.com ಜಗಳೂರು:ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹಾಗೂ ನಟ ಉಪೇಂದ್ರ ಫೇಸ್‍ಬುಕ್ ಲೈವ್ ವಿಡಿಯೋದಲ್ಲಿ ಊರು ಅಂದ್ಮೇಲೆ ಇರುತ್ತೆ ಎಂದು ವಿವಾದಾತ್ಮಕ ಹೇಳಿಕೆ ಖಂಡಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪ್ರತಿಭಟನೆ ನಡೆಸಿ ಗ್ರೇಡ್-2ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ನಟ ಉಪೇಂದ್ರ ಅವರು ದಲಿತರನ್ನು ಕಡೆಗಣಿಸಿ ಅವಮಾನ ಮಾಡಿದ್ದಾರೆ. ಇವರೊಬ್ಬ ಬುದ್ದಿವಂತ ನಟರೆನಿಸಿಕೊಂಡು ಈ ರೀತಿಯಾಗಿ ಮಾತನಾಡಿರುವುದು ಎಷ್ಟು ಸರಿ ಆ.12ಕ್ಕೆ ಪ್ರಜಾಕೀಯ ಪಕ್ಷ ಹುಟ್ಟಿಕೊಂಡು 6 ವರ್ಷಗಳ ಸಂಭ್ರಮದಲ್ಲಿದ್ದ ಉಪೇಂದ್ರ ಸೋಶಿಯಲ್ ಮೀಡಿಯಾದ ಮೂಲಕ ದಲಿತರ ವಿರುದ್ಧವಾದ ಹೇಳಿಕೆ ನೀಡಿದ್ದಾರೆ.
ಅವರು ತಮ್ಮ ಪ್ರಚಾರಕ್ಕಾಗಿ ಮತ್ತೊಂದು ಸಮುದಾಯವನ್ನು ಬಳಸಿಕೊಂಡು ತುಂಬ ನೋವುಂಟು ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಸಾಮರಸ್ಯದ ಬದುಕನ್ನು ಹಾಳು ಮಾಡಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಉಪೇಂದ್ರ ನಟನೆಯ ಚಿತ್ರಗಳನ್ನು ದಲಿತರು ವೀಕ್ಷಣೆ ಮಾಡಿ ಪ್ರೋತ್ಸಹಿಸಿದ್ದಾರೆ. ಸಾಕಷ್ಟು ಜನರ ಅಭಿಮಾನಿಗಳಿದ್ದಾರೆ. ಹೀಗಿದ್ದ ಮೇಲೆ ದಲಿತರನ್ನು ಹೊಲೆಗೇರಿಗೇರಿಗೆ ಹೋಲಿಸಿ ಜಾತಿ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ದಲಿತರನ್ನು ಕೆರಳಿಸಿದ್ದಾರೆ. ಮಾಡಿದ ತಪ್ಪಿಗಾಗಿ ಅವರಿಗೆ ಕಾನೂನಿನ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಕುಬೇಂದ್ರಪ್ಪ, ಪೂಜಾರಿ ಸಿದ್ದಪ್ಪ, ಗೋಡೆ ದುರುಗಪ್ಪ, ಎನ್, ಹನುಮಂತಪ್ಪ, ಬಸವರಾಜ್, ಗೌರಮ್ಮನಹಳ್ಳಿ ವೆಂಕಟೇಶ್, ನೀಲಪ್ಪ, ತೋರಣಗಟ್ಟೆ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.