ಸುದ್ದಿವಿಜಯ, ಜಗಳೂರು: ಕಳೆದ ಒಂದು ತಿಂಗಳಿನಿಂದ ಮುನಿಸಿಕೊಂಡ ಮಳೆರಾಯನ ಆಗಮನಕ್ಕೆ ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಮಳೆಗಾಗಿ ವಿರಾಟಪರ್ವ ಆರಾಧನೆ ವಿಶೇಷ ಕಾರ್ಯಕ್ರಮವನ್ನು ಶನಿವಾರ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು ಮೆಕ್ಕೆಜೋಳ, ಶೇಂಗಾ, ರಾಗಿ, ಹತ್ತಿ ತೊಗರಿ ಹೀಗೆ ಹಲವು ಬೆಳೆಗಳು ಬಾಡುತ್ತಿವೆ. ಹೀಗಾಗಿ ಮಳೆಗಾಗಿ ಮಹಾಭಾರತದ 18 ಪರ್ವಗಳಲ್ಲಿ ವಿರಾಟಪರ್ವವು ನಾಲ್ಕನೇ ಪರ್ವವಾಗಿದ್ದು ಹತ್ತು ಸಂಧಿಗಳನ್ನು ಹೊಂದಿದ್ದು, 800 ಪದ್ಯಗಳನ್ನು ಹೊಂದಿದೆ.
ಇದು ವ್ಯಾಸಮುನಿಗಳ ವಿರಚಿತವಾಗಿದ್ದು ಗದುಗಿನನಾರಯಣಪ್ಪರ ತರ್ಜುಮೆ ಮೂಡಿ ಬಂದಿದ್ದು, ಬೆಳಗ್ಗೆ 8 ಗಂಟೆಯಿಂದ 6 ಗಂಟೆಯವರೆಗೂ ವಿರಾಟಪರ್ವ ಆರಾಧನೆಯನ್ನು ಗ್ರಾಮದ ಇಬ್ಬರಿಂದ ಆರಾಧಿಸಲಾಯಿತು.
ಒಬ್ಬರು ಪದ್ಯಗಳನ್ನು ಓದಿದರೆ ಮತ್ತೊಬ್ಬರು ಆ ಪದ್ಯ ಅರ್ಥವನ್ನು ಬಿಡಿಸಿ ಕಥೆಯ ರೂಪದಲ್ಲಿ ವಿಸ್ತಾರವಾಗಿ ಜನರಿಗೆ ನಿರರ್ಗಳವಾಗಿ ಒಂದು ದಿನ ಪೂರ್ತಿಯಾಗಿ ತಿಳಿಸುತ್ತಾ ವಿರಾಟಪರ್ವ ಆರಾಧನೆ ಮಾಡಲಾಯಿತು.
ಪಾಂಡವರು 12 ವರ್ಷ ವನವಾಸ 1 ವರ್ಷ ಅಜ್ಞಾತವಾಸ ಮುಗಿಸುವ ಪ್ರಯುಕ್ತ ವಿರಾಟನ ರಾಯನ ರಾಜ್ಯವಾದ ಮತ್ಸ್ಯ ನಗರಕ್ಕೆ ಹೋಗುತ್ತಾರೆ ವಿರಾಟ ರಾಜಧಾನಿಯಾದ ಮತ್ಸ್ಯ ನಗರಿಯು ಪಾಂಡವರು ಗೌಪ್ಯವಾಗಿರಲು ಯೋಗ್ಯವಾದ ಸ್ಥಳವಾಗಿತ್ತು.
ಆದ್ದರಿಂದ ಅಜ್ಞಾತವಾಸ ಮುಗಿಸಲು ವೇಶ ಮರಿಸಿಕೊಂಡು ವಿರಾಟ ರಾಜ್ಯವನ್ನು ಸೇರಿಕೊಂಡು ಬದುಕು ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ವಿರಾಟ ರಾಜ್ಯವನ್ನು ಹೊರೆತು ಪಡಿಸಿ ಇಡೀ ಭರತಖಂಡದಲ್ಲಿ ಬರದ ಕ್ಷಾಮ ಉಂಟಾಗುತ್ತದೆ.
ಈ ಹಿನ್ನಲೆಯಲ್ಲಿ ಧರ್ಮಯರಾಯ ನೆಲಸಿರುವ ನಾಡಿನಲ್ಲಿ ಮಳೆ ಬೆಳೆ ಸಮೃದ್ಢಿಯಿಂದ ಸುಭಿಕ್ಷೆಯಿಂದ ಕೂಡಿರುತ್ತದೆ ಎಂಬ ವಾಡಿಕೆಯಿಂದ ವಿರಾಟಪರ್ವ ಹೆಸರಿನಲ್ಲಿ ಧರ್ಮರಾಯನ ಆರಾಧನೆ, ಸ್ಮರಣೆ, ಮಾಡಿದರೆ ನಾಡಿಗೆ ಸುಭಿಕ್ಷೆ ಲಭಿಸಬಹುದು ಎಂಬ ಕಾರಾಣದಿಂದ ವಿರಾಟಪರ್ವ ಆರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ವಿರಾಟಪರ್ವವನ್ನು ತಿಪ್ಪೇಸ್ವಾಮಿ ನಾಗಣ್ಣರೆಡ್ಡಿ, ಕಾಟಯ್ಯರು ತಿಪ್ಪೇಸ್ವಾಮಿ, ರಾಮಚಂದ್ರರೆಡ್ಡಿ ಸಂಸ್ಕøತದಲ್ಲಿ ಇರುವ ಪದ್ಯಗಳನ್ನು ಓದಿ ಅರ್ಥೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದೊಡ್ಡನಾಗಣ್ಣ, ಬೊಮ್ಮಣ್ಣ ಶ್ರೀನಿವಾಸ್, ಚಂದ್ರಣ್ಣರೆಡ್ಡಿ, ತೊಗರಿ ಮಾರುತಿ, ಸುನೀಲ್ ಸೇರಿದಂತೆ ಗ್ರಾಮದ ಅನೇಕರಿದ್ದರು.