ಜಗಳೂರು: ನಾಳೆಯಿಂದ ನೀರಿನ ಸಮಸ್ಯೆ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

Suddivijaya
Suddivijaya February 16, 2024
Updated 2024/02/16 at 2:00 PM

ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನಾಳೆಯಿಂದ (ಶನಿವಾರ) ನಿತ್ಯ ಭೇಟಿ ನೀಡಿ ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸಿ ಎಂದು ಜಿಪಂ ಸಿಇಒ ಡಾ.ಸುರೇಶ್ ಬಿ.ಇಟ್ನಾಳ್ ಆದೇಶದಂತೆ ಪ್ರತಿ ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಕೆ.ಟಿ.ಕರಿಬಸಪ್ಪ ಹೇಳಿದರು.

ಶಾಸಕರಾದ ಬಿ.ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ರ್ಸ್ ಸಭೆಗೂ ಮುನ್ನ ಗ್ರಾಮಗಳಲ್ಲಿ ವಾಸ್ತವ ಏನೆಂದು ತಿಳಿಯಲು ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಸಾದಿಕ್ ಉಲ್ಲಾ,

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆ ಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಖಾಸಗಿ ಬೋರ್‍ವೆಲ್ ಮಾಲೀಕರ ಜೊತೆ ಒಪ್ಪಂದ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಾದ ಭೈರನಾಯಕನಹಳ್ಳಿ, ಹೊಸೂರು, ತಾರೆಹಳ್ಳಿ, ಗೌಡಗೊಂಡನಹಳ್ಳಿ,

ಹನುಮಂತಾಪುರ, ಕಾಟೇನಹಳ್ಳಿ, ಸೂರಗೊಂಡನಹಳ್ಳಿ, ಪಲ್ಲಾಗಟ್ಟೆ, ಗೌಡಿಕಟ್ಟೆ, ಸಿದ್ದಯ್ಯನಕೋಟೆ, ಉಜ್ಜಪ್ಪವಡೆರಹಳ್ಳಿ, ಉಚ್ಚಂಗಿಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಸಮಸ್ಯೆ ಇತ್ಯಾರ್ಥಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!