ಜಗಳೂರು: ವಿಂಡ್ ಫ್ಯಾನ್ ಹಾವಳಿ ವಿರುದ್ಧ ಸಿಡಿದೆದ್ದ ರೈತರು

Suddivijaya
Suddivijaya June 26, 2024
Updated 2024/06/26 at 1:12 PM

suddivijayanews26/06/2024
ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ವಿಂಡ್ ಫ್ಯಾನ್ ಕಂಪನಿಗಳ ಹಾವಳಿ ವಿರುದ್ಧ ಬುಧವಾರ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ( ನಂಜುಂಡಸ್ವಾಮಿ ಬಣ) ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೈಕ್ ರ್ಯಾಲಿಯ ಮೂಲಕ ಪ್ರತಿಭಟನೆ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭಗೊಂಡು ಪ್ರತಿಭಟನಾ ರ್ಯಾಲಿಯೂ ಮಹಾತ್ಮಗಾಂಧಿ ಹಳೇ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಕಲೀಂವುಲ್ಲ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ ಮಾತನಾಡಿ, ಅಳಿವಿನಂಚಿನಲ್ಲಿರುವ ಕೊಂಡುಕುರಿ ಪ್ರಾಣಿಯೂ ಏಷ್ಯಾ ಖಂಡದಲ್ಲಿಯೇ ಜಗಳೂರು ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶದ ಎರಡನೇ ಸ್ಥಾನ ಪಡೆದಿದೆ.

ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಸೂಕ್ಷ್ಮ ವಲಯ ಹಾಗೂ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ವಿಂಡ್ ಫ್ಯಾನ್ ಅಳವಡಿಸಿರುವುದು ಖಂಡನೀಯ.  ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಸೂಕ್ಷ್ಮ ವಲಯ ಹಾಗೂ ಸರಕಾರಿ ಜಾಗಗಳಲ್ಲಿ ಅಕ್ರಮವಾಗಿ ವಿಂಡ್ ಫ್ಯಾನ್ ಅಳವಡಿಸಿರುವುದನ್ನು ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಸೂಕ್ಷ್ಮ ವಲಯ ಹಾಗೂ ಸರಕಾರಿ ಜಾಗಗಳಲ್ಲಿ ಅಕ್ರಮವಾಗಿ ವಿಂಡ್ ಫ್ಯಾನ್ ಅಳವಡಿಸಿರುವುದನ್ನು ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರ ಸೂಕ್ಷ್ಮ ವಲಯ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿದೆ. ಹಾಗಾಗಿ ಸುತ್ತಮುತ್ತಲಿನ 48ಕ್ಕೂ ಹೆಚ್ಚು ಗ್ರಾಮದ ಕುರಿ, ಮೇಕೆ, ಜಾನುವಾರುಗಳು ಒಳಗೆ ಪ್ರವೇಶ ನೀಡದೇ ಸುತ್ತಲು ಟ್ರಂಚ್ ಹಾಕಲಾಗಿದೆ.

ಆದರೆ ಖಾಸಗಿ ಕಂಪನಿಗಳು ಬೃಹತ್ ಗಾತ್ರದ ವಿಂಡ್‍ಫ್ಯಾನ್ ಅಳವಡಿಸಲು ಅಧಿಕಾರಿಗಳು ಅವಕಾಶ ಹೇಗೆ ನೀಡಿದರು ಎಂದು ಪ್ರಶ್ನಿಸಿದ ರೈತ ಹೋರಾಟಗಾರರು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಇಲ್ಲವಾದರೆ ಅರಣ್ಯದಲ್ಲಿ ಜಮೀನು ಉಳುಮೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಅಖಂಡ ರೈತ ಸಂಘದ ಅಧ್ಯಕ್ಷ ಹೇಮರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಕಂಪನಿಗಳೊಂದಿಗೆ ಮಧ್ಯವರ್ತಿಗಳು, ಅಧಿಕಾರಿಗಳು ಶಾಮಿಲಾಗಿ ಫ್ಯಾನ್ ದಂಧೆ ನಡೆಸುತ್ತಿದ್ದಾರೆ.

ಇದರಿಂದ ಹವಾಮಾನ ವೈಪರಿತ್ಯದಿಂದ ಕಾಡು ಪ್ರಾಣುಗಳು ಅರಣ್ಯ ತೊರೆದು ನಾಡಿನತ್ತಾ ಮುಖ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಕರಡಿಗಳ ದಾಳಿಯೂ ಹೆಚ್ಚಾಗಿ ಅನೇಕ ರೈತರ ಗಾಯಗೊಂಡು ಈಗಲು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದ್ದರಿಂದ ಇನ್ನು ಮುಂದೆ ತಾಲೂಕಿನ ಯಾವುದೇ ಗ್ರಾಮಗಳಲ್ಲೂ ಫ್ಯಾನ್ ಅಳವಡಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ರೈತ ಸಂಘದ ಪ್ರ. ಕಾರ್ಯದರ್ಶಿ ಲಕ್ಷ್ಮಣ್‍ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಭರಮಸಮುದ್ರ ಕುಮಾರ್, ಜಯರಾಂ, ಪಾಲನಾಯಕ, ಬಸವರಾಜ್, ಮಲ್ಲಿಕಾರ್ಜುನ್, ರಂಗಪ್ಪ, ನಾಗರಾಜ್, ಮಹಾಂತೇಶ್ ಸೇರಿದಂತೆ ಮತ್ತಿತರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!