ಜಗಳೂರು: ತೈಲ ಬೆಲೆ ವಿರೋಧಿಸಿ ಮಾಜಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

Suddivijaya
Suddivijaya June 22, 2024
Updated 2024/06/22 at 1:01 PM

suddivijayanews22/06/2024
ಸುದ್ದಿವಿಜಯ, ಜಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವ ಕ್ರಮ ಖಂಡಿಸಿ ಶನಿವಾರ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಹೊರಟ ನೂರಾರು ಬಿಜೆಪಿ ಕಾರ್ಯಕರ್ತರು ಹೊಸಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ನಂತರ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿವರೆಗೂ ದ್ವಿಚಕ್ರ ವಾಹನವನ್ನು ಎತ್ತಿನಗಾಡಿಯಲ್ಲಿ ಇರಿಸಿ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರ ಮುಖಾಂತರ ರಾಜ್ಯಪಾಲರಿಗೆ ಲಿಖಿತ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಆಡಳಿತರೂಢ ರಾಜ್ಯ ಸರಕಾರ ಪೆಟ್ರೋಲ್ ಪ್ರತಿ ಲೀಟರ್‍ಗೆ 3.7 ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 3.9 ರಷ್ಟು ಬೆಲೆ ಏರಿಕೆಯನ್ನು ಏಕಪಕ್ಷೀಯ ನಿರ್ಧಾರಕೈಗೊಂಡಿದೆ.

ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಎಸ್‍ವಿ. ರಾಮಚಂದ್ರ ತೈಲ ಬೆಲೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಎಸ್‍ವಿ. ರಾಮಚಂದ್ರ ತೈಲ ಬೆಲೆ ವಿರೋಧಿಸಿ ಪ್ರತಿಭಟನೆ ನಡೆಸಿದರು.

ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲಾಗದೆ ಆರ್ಥಿಕ ಸಂಪನ್ಮೂಲದಲ್ಲಿ ಇಳಿಮುಖ ಅನುಭವಿಸುತ್ತಿದೆ. ಸರಕಾರಿ ಆಸ್ತಿ ನೊಂದಣಿಶುಲ್ಕ, ಬಿತ್ತನೆ ಬೀಜ ದರ, ಅಗತ್ಯ ವಸ್ತುಗಳ ಹಾಗೂ ತೈಲ ಬೆಲೆ ಏರಿಕೆಯೊಂದಿಗೆ ಜನವಿರೋಧಿ ನೀತಿಯೊಂದಿಗೆ ಜನಸಾಮಾನ್ಯರ ಬದುಕಿಗೆ ಅನ್ಯಾಯ ಮಾಡುತ್ತಿದೆ.

ಇದರಿಂದ ರೈತರ ಮೇಲೆ ಬರೆ ಹಾಕಿದಂತೆ ಆಗುತ್ತದೆ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,

ನಾನು ಬಿಜೆಪಿ ಆಡಳಿತಾವಧಿಯಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿ ಕಳಂಕರಹಿತ ಆಡಳಿತ ನಡೆಸಿರುವೆ.ಆದರೆ ಕಾಂಗ್ರೆಸ್ ನೇತೃತ್ವದ ಆಡಳಿತ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ.

ಆಡಳಿತಕ್ಕೆ ಬಂದು ಒಂದೇ ವರ್ಷದಲ್ಲಿ ವಾಲ್ಮೀಕಿ ನಿಗಮ ಮಂಡಳಿಯಲ್ಲಿ 187 ಕೋಟಿ ಹಣ ಭ್ರಷ್ಟಾಚಾರವನ್ನು ನಿಗಮದ ಹಣವನ್ನು ನುಂಗಿ ಹಾಕಿದ್ದಾರೆ.

ಹಾಗಾಗಿ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಮಾಜಿ ಜಿ.ಪಂ ಸದಸ್ಯ ಎಸ್.ಕೆ.ಮಂಜುನಾಥ್,ಮುಖಂಡರಾದ ಎ.ಎಂ.ಮರುಳಾರಾಧ್ಯ, ಜೆ.ವಿ.ನಾಗರಾಜ್,

ಬಿಸ್ತುವಳ್ಳಿ ಬಾಬು, ಬಿದರಕೆರೆ ರವಿಕುಮಾರ್, ಬಾಲೇನಹಳ್ಳಿ ಕೆಂಚನಗೌಡ, ಗಡಿಮಾಕುಂಟೆ ಸಿದ್ದೇಶ್, ಶಿವಕುಮಾರ್ ಸ್ವಾಮಿ, ಕಲ್ಲೇಶಪ್ಪ, ಸೂರಲಿಂಗಪ್ಪ, ಓಬಳೇಶ್, ವಕೀಲಹನುಮಂತಪ್ಪ, ರುದ್ರಮುನಿ, ಬಾಲರಾಜ್, ಪ.ಪಂಸದಸ್ಯರಾದ ತಿಪ್ಪೇಸ್ವಾಮಿ, ರೇವಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತ ಹಾಜರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!