ಸುದ್ದಿವಿಜಯ, ಜಗಳೂರು: ಯೋಗಿ ನಾರಾಯಣರು ಉಪನಿಷತ್ತಿನ ಕಾಲದ ದಾರ್ಶನಿಕರ ಸಾಲಿಗೆ ಸೇರಿದವರು. ಎಲ್ಲ ಭೋಧನೆಗಳು, ಉಪನೀಷತ್ತುಗಳು, ರಾಮಾಯಣ ಮಹಾಭಾರತ ಮತ್ತು ಭಗವದ್ಗೀತೆಯನ್ನು ಆದರಿಸಿದ ಭಕ್ತಿಯ ಸಾರವನ್ನು ಬೋಧಿಸಿದ ಮಹಾನ್ ಸಮಾಜ ಸುಧಾರಕ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಸ್ಮರಿಸಿದರು.
ತಾಲೂಕಿನ ತೋರಣಟ್ಟೆ ಗ್ರಾಮದಲ್ಲಿ ಮಂಗವಾರ ಬಲಿಜ ಜನಾಂಗದವರಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಯೋಗಿನಾರಾಯಣ ಯತೀಂದ್ರರ 297ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೈವಾರ ತಾತಯ್ಯ ಅವರು ನಿಜವಾದ ಅತೀಂದ್ರಿಯ ಯೋಗಿಯ ಗುರುತಾಗಿದ್ದರು. ಅವರ ಕೃತಿಗಳಲ್ಲಿ ಅನುಭವಗಳ ಸಾರವನ್ನು ಕಾಣಬಹುದು. ಶ್ರೀ ರಾಮಾನುಜರಂತೆ ಜಾತಿ, ಮತ, ಲಿಂಗ ಭೇದವಿಲ್ಲದೇ ಎಲ್ಲರಿಗೂ ಮುಕ್ತಿದೊರೆಯುತ್ತದೆ ಎಂದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ಶ್ರೀ ಯೋಗಿ ನಾರಾಯಣರು 1726ರಲ್ಲಿ ಕೈವಾರದಲ್ಲಿ ತೆಲುಗು ಭಾಷಿಕ ಬಣಜಿಗ ಸಮುದಾಯಲ್ಲಿ ಜನಿಸಿದರು. ತಾತಯ್ಯನವರು ವಿಷ್ಣುವಿನ ಆರಾಧಕರಾಗಿದ್ದರಿಂದ ನಾರಾಯಣ ಎಂದೇ ನಾಮಾಂಕಿತರಾದರು.
ಹರಿ ಮತ್ತು ಶಿವ ಕಥೆಗಳಿಂದ ಜೀವನದುದ್ದಕ್ಕೂ ಭಕ್ತಿಯ ಸುಧೆ ಹರಿಸಿದ ಅವರು ಸಮ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಿದ ಮಹಾನ್ ಜ್ಞಾನಿಗಳು ಎಂದರು.
ಕೆಪಿಸಿಸಿ ಎಸ್.ಟಿ.ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿದರು. ತೋರಗಟ್ಟೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಗಿ ನಾರಾಯಣರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ತೋರಣಗಟ್ಟೆ ಲೋಕೇಶ್, ಪ್ರೊ. ಚಂದ್ರಶೇಖರ್, ರಾಮಾಂಜನೇಯ, ಜಿ.ಸಿ.ಶ್ರೀನಿವಾಸ್, ರುದ್ರಮುನಿ, ಎಸ್.ಎಂ.ವೆಂಕಟೇಶ್, ಜಗಳೂರು ರುದ್ರಮುನಿ, ದೇವರಾಜ್, ಪ್ರಕಾಶ್ ವೈ.ನ್, ತಿಪ್ಪೇಸ್ವಾಮಿ, ಗೌಡರ ತಿಪ್ಪೇಸ್ವಾಮಿ, ಜಿ.ಶಿವಮೂರ್ತಿ, ಟಿ.ಜಿ.ಶಿವಮೂರ್ತಿ, ಎಸ್.ಬಿ.ವೆಂಕಟೇಶ, ತಾಪಂ ಮಾಜಿ ಸದಸ್ಯರಾದ ಕಮಲಮ್ಮ, ಹುಲಿಕುಂಟೆಪ್ಪ, ನಾಗರಾಜ್ ಜಗಳೂರು, ಜಯಕುಮಾರ್, ಟಿ.ಎಚ್.ದತ್ತಾತ್ರೇಯ ಸೇರಿ ನೂರಾರು ಜನರು ಕಾರ್ಯಕ್ರಮದಲ್ಲಿ ಇದ್ದರು.