ಸಂಗೇನಹಳ್ಳಿ ಕೆರೆಗೆ ಬಿದ್ದು ಅನುಮಾನಾಸ್ಪದವಾಗಿ ವೃದ್ಧೆ ಸಾವು

Suddivijaya
Suddivijaya October 21, 2023
Updated 2023/10/21 at 2:00 PM

ಸುದ್ದಿವಿಜಯ, ಜಗಳೂರು: ಚಿತ್ರದುರ್ಗ, ಜಗಳೂರು ಗಡಿಗ್ರಾಮವಾದ ಸಂಗೇನಹಳ್ಳಿ ಗ್ರಾಮದ ಬೃಹತ್ ಕೆರೆಯಲ್ಲಿ ತಾಲೂಕಿನ ಬಂಗಾರಿಗುಡ್ಡ ಗ್ರಾಮದ ವೃದ್ಧೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಮೃತಪಟ್ಟ ವೃದ್ಧೆ ಹೆಸರು ಬಸಮ್ಮ(68) ಎಂದು ತಿಳಿದು ಬಂದಿದೆ. ಶುಕ್ರವಾರ ಬಂಗಾರಿಗುಡ್ಡ ಗ್ರಾಮದಿಂದ ನಾಪತ್ತೆಯಾಗಿದ್ದು ಸಂಗೇನಹಳ್ಳಿ ಕೆರೆಯಲ್ಲಿ ಶನಿವಾರ ಹೆಣವಾಗಿ ಪತ್ತೆಯಾಗಿದ್ದಾರೆ. ಮುಖದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಯಲ್ಲಿ ಬಿದ್ದು ವೃದ್ಧಿ ಸಾವನ್ನಪ್ಪಿರುವ ಚಿತ್ರಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಯಲ್ಲಿ ಬಿದ್ದು ವೃದ್ಧಿ ಸಾವನ್ನಪ್ಪಿರುವ ಚಿತ್ರ

ಬಸಮ್ಮ ಅವರಿಗೆ ಏಳು ಜನ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳು ಸಂಬಂಧಿಕರು ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ. ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಸಿದ್ದು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆ ಎತ್ತಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಿದ್ದಾರೆ.

ಘಟನೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯ ಸುತ್ತಲೂ ಜಾಲಿ: ಅಪ್ಪರ್ ಭದ್ರಾ ಯೋಜನೆಯಿಂದ ತುಂಬುವ ಸಂಗೇನಹಳ್ಳಿ ಕೆರೆಯ ಸುತ್ತಲೂ ಬಳ್ಳಾರಿ ಜಾಲಿ ಗಿಡಗಳು, ಲಂಟನ ಪೊದೆಗಳು ಬೆಳೆದಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ನಡೆದು ಹೋಗುತ್ತಿದ್ದಾಗ ಈ ವೃದ್ಧೆ ಬಿದ್ದು ಸಾವನ್ನಪ್ಪಿರಬಹುದು

ಜಾಲಿಗಡಿಗಳನ್ನು ಕಿತ್ತು ಹಾಕಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!