ಸುದ್ದವಿಜಯ, ಜಗಳೂರು: ಜಗತ್ತು ಕಂಡ ಶ್ರೀಕೃಷ್ಣ, ಭಗವಾನ್ ಬುದ್ಧ, ಶ್ರೀ ಶಂಕಾರಾಚಾರ್ಯ, ಸ್ವಾಮಿ ವಿವೇಕಾನದ ಮೊದಲಾದವರು ಮಾನವನ ಆಧ್ಯಾತ್ಮೀಕ ಪ್ರಗತಿಯ ಸಾಧನೆಗಾಗಿ ತಮ್ಮ ಜೀವನವನ್ನೇ ಆದರ್ಶವಾಗಿಸಿ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾದರು. ಭಗವಾನ್ ಕೃಷ್ಣನ ಆದರ್ಶದ ಹಾದಿಯೇ ನಿಜವಾದ ಮೋಕ್ಷ ಎಂದು ಚಿತ್ರದುರ್ಗದ ಯಾದವ ಸಂಸ್ಥಾನದ ಪೀಠಾಧಿಪತಿ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ ಪ್ರತಿಪಾದಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಜಗತ್ತನ್ನು ಪರಿಪೂರ್ಣಗೊಳಿಸುವ ನಮ್ಮ ಪ್ರಯತ್ನದಲ್ಲಿ ನಮ್ಮನ್ನು ನಾವು ಪರಿಪೂರ್ಣವಾಗಿ ರೂಪಿಸಿಕೊಳ್ಳುತ್ತೇವೆ. ಇದುವೇ ಮಾನವ ಜೀವನದ ಗುರಿ.
ಮಹಾಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತು ಗೆಲ್ಲುವಂತೆ ಮಾಡಿದವರು ಶ್ರೀಕೃಷ್ಣ. ಕೃಷ್ಣನನ್ನು ಎಷ್ಟು ಅರ್ಥಮಾಡಿಕೊಂಡರೂ ಸಾಲದು. ಸಮುದಾಯ ಒಂದಾಗಬೇಕು. ಸಂಘಟನೆಯಾಗಿ ಶೈಕ್ಷಣೀಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸಂಕಷ್ಟದಲ್ಲಿರುವವರಿಗೆ ಕೈಜೋಡಿಸಿ ಎಂದರು.ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಯಾದವ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ತನು,ಮನ, ಧನ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಸಮುದಾಯ ಭವನದ ನೀಲ ನಕ್ಷೆ ತಯಾರಿಸಿ ನಿರ್ಮಾಣಕ್ಕೆ ಮುಂದಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ, ಬದುಕಿಗೆ ಪ್ರಬುದ್ಧ ದೃಷ್ಟಿಕೋನದೊಂದಿಗೆ ಆಧ್ಯಾತ್ಮೀಕ ದೃಷ್ಟಿಕೋನವನ್ನು ದೊರಕಿಸಿಕೊಡುವಲ್ಲಿ ಗೀತೆಯ ಸಾರ್ವತ್ರಿಕ ಆಕರ್ಷಣೆಯನ್ನು ತನ್ನದಾಗಿಸಿಕೊಂಡಿದೆ. ಭಗವದ್ಗೀತೆ ಅಧ್ಯಾಯನವು ಅರ್ಥವನ್ನು ಗ್ರಹಿಸಲಷ್ಟೇ ಸೀಮಿತವಾಗದೇ ಅದು ಪ್ರತಿಪಾದಿಸುವ ಸತ್ಯಗಳು ಅಂತರಿಕಗೊಳಿಸಿಕೊಳ್ಳಬೇಕೆಂದು 18 ಅಧ್ಯಯಗಳಲ್ಲಿ ತಿಳಿಸಲಾಗಿದೆ ಎಂದರು.
ಜಗತ್ತಿನಲ್ಲಿ ದುಷ್ಟರ ಕಾಟ ಜಾಸ್ತಿಯಾದಾಗ ಜಗದ ಉಳಿವಿಗಾಗಿ ಪ್ರತಿಯೊಂದು ಯುಗದಲ್ಲಿ ನಾನಾ ಅವತಾರಗಳಲ್ಲಿ ಕೃಷ್ಣ ಹುಟ್ಟಿ ಬರುತ್ತಾನೆ. ಇಡೀ ಮಾನವ ಕುಲವನ್ನು ಕಾಪಾಡುವ ಭಗವಂತ ಶ್ರೀಕೃಷ್ಣ. ಕೃಷ್ಣ ಎಂದರೆ ಯಾರು ಆನಂದವನ್ನು ಉಣಬಸಿಸುವವನು. ಕೃಷ್ಣ ಎಂದರೆ ಕಪ್ಪು, ಕಪ್ಪು ಎಂದರೆ ಶ್ಯಾಮ ಸುಂದರ.
ಶ್ರೀ ಕೃಷ್ಣನು ವ್ಯವಾಹರಿಕ ಆಧ್ಯಾತ್ಮದ ಸಂದೇಶವನ್ನಿತ್ತ ಅಪೂರ್ವ ಮಾನವತಾವಾದಿ. ಅವನ ಸಂದೇಶಗಳಲ್ಲಿ ವರ್ಗ, ವರ್ಣ ಹಾಗೂ ಲಿಂಗಭೇದಗಳಿಗೆ ಸ್ಥಾನವಿಲ್ಲ. ಕೃಷ್ಣನ ಚಿಂತನೆಗಳಲ್ಲಿ ವೈವಿಧ್ಯತೆಗಳಿದ್ದರೂ ಅದು ಸಮಗ್ರತೆಗೆ ಧಕ್ಕೆ ತಂದಿಲ್ಲ.
ಎಲ್ಲ ಮನುಷ್ಯರು ಆಧ್ಯಾತ್ಮೀಕವಾಗಿ ಸಮಾನರು ಎಂಬ ಮಹಾನ್ ತತ್ವವು ಅರಿವಿಗೆ ಬರುತ್ತದೆ. ನಿನ್ನ ಉದ್ಧಾರ ನಿನ್ನ ಕೈಯಿಂದಲೇ ಇದೆ ಎಂಬುದೇ ಕೃಷ್ಣನ ದಿವ್ಯ ಸಂದೇಶ. ಯಾದವರ ಆಶೀರ್ವಾದಿಂದ ನಾನು ಶಾಸಕನಾದೆ. ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಮಾಜಿ ಶಾಸಕರ ಕೊಡುಗೆ ಅಪಾರವಾಗಿದೆ.
ಅವರ ಹಾದಿಯಲ್ಲೇ ಕ್ಷೇತ್ರದ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ಮಾರ್ಚ್ ವರೆಗೆ ಅನುದಾನದ ಕೊರತೆಯಿದೆ. ಇನ್ನು ನಾಲ್ಕು ವರ್ಷಗಳಲ್ಲಿ ಯಾದವ ಸಮುದಾಯ ಭವನ ಮತ್ತು ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ತಾಲೂಕಿನಲ್ಲಿ 22 ಗೊಲ್ಲರಹಟ್ಟಿಗಳಿವೆ. ಶೈಕ್ಷಣೀಕವಾಗಿ, ಆರ್ಥಿಕವಾಗಿ ಸಮುದಾಯಗಳು ಬಲಗೊಳ್ಳಬೇಕು. ಸಮುದಾಯದಲ್ಲಿ ಸಾಕಷ್ಟು ಮೂಢನಂಬಿಕೆಗಳಿಗೆ ಅವುಗಳು ತೊಲಗಬೇಕು. ನಾನು ಶಾಸಕನಾಗಿದ್ದಾಗ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೆ. ಶ್ರೀಕೃಷ್ಣ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಲ್ಲ ಸಮುದಾಯಕ್ಕೆ ಸೇರಿದ ಭಗವಂತ ಎಂದರು.
ಸಂಸದ ಜಿ.ಎಂ.ಸಿದ್ದೇಶ್ ಪುತ್ರ ಅನಿತ್‍ಕುಮಾರ್ ಮಾತನಾಡಿದರು. ಈ ವೇಳೆ ಎಂಎಲ್‍ಸಿ ಜಯ್ಯಮ್ಮ ಬಾಲರಾಜ್, ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಯಾದವ ಸಂಘದ ಅಧ್ಯಕ್ಷ ಜಿ.ಸಿ.ಕೃಷ್ಣಮೂರ್ತಿ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್,
ಮಹಮದ್‍ಗೌಸ್, ಗೊಲ್ಲಸಮುದಾಯದ ಮುಖಂಡ ತೋರಣಗಟ್ಟೆ ಜೀವಣ್ಣ, ಪಲ್ಲಾಗಟ್ಟೆ ಶೇಖರಪ್ಪ, ನಜೀರ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಲ್ಯಾಬ್ ಶಿವು, ಯಾದವ ಸಂಘದ ಕಾರ್ಯದರ್ಶಿ ಬಿ.ಎನ್ ಪ್ರಕಾಶ್, ಕಾಡುಗೊಲ್ಲ ಯುವ ಸೇನೆ ಅಧ್ಯಕ್ಷ ಜಿ.ಆರ್.ಇಂದಿರೇಶ್,
ತೋರಣಗಟ್ಟೆ ಟಿ.ಜಿ.ಬಾಲಪ್ಪ, ಬಿ.ಬಾಲಪ್ಪ, ಗೊಲ್ಲರಹಟ್ಟಿ ತಿಪ್ಪೇಶ್, ಹಿರಿಯ ಸಂಶೋಧಕ ಸಿ.ಧನಂಜಯ್ ಕುಮಾರ್, ಮುಖಂಡ ತಿಪ್ಪೇಸ್ವಾಮಿಗೌಡ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಜೆ.ಮಹಾಲಿಂಗಪ್ಪ, ಶಿವಕುಮಾರ್ ಒಡೆಯರ್, ತಾಲೂಕು ಯಾದವ ಸಂಘದ ಪದಾಧಿಕಾರಿಗಳು, 22 ಗ್ರಾಪಂಗಳ ಗೊಲ್ಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಶ್ರೀಕೃಷ್ಣನ ಭಾವಚಿತ್ರ ಬೆಳ್ಳಿ ರಥದಲ್ಲಿ ಮರವಣಿಗೆ
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಶ್ರೀಕೃಷ್ಣನ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮರವಣಿಗೆ ಮಾಡಲಾಯಿತು. ಗಾಂಧಿವೃತ್ತದಲ್ಲಿ ಯುವಕರು ಮೊಸರು ಗಡಿಗೆ ಒಡೆದರು. ಶಾಸಕರು ಯಾದವ ಸಂಪ್ರದಾಯದ ಮಣೇವು ಆಚಣೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು.