ನಾಳೆ ನಟ ಕಿಚ್ಚ ಸುದೀಪ್ ಜಗಳೂರಿನಲ್ಲಿ ಎಸ್‍ವಿಆರ್ ಪರ ರೋಡ್ ಶೋ!

Suddivijaya
Suddivijaya April 25, 2023
Updated 2023/04/25 at 12:25 PM

ಸುದ್ದಿವಿಜಯ, ಜಗಳೂರು: ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಪರ ನಟ ಕಿಚ್ಚ ಸುದೀಪ್ ಬುಧವಾರ 11 ಗಂಟೆಗೆ ಪ್ರಚಾರದ ರೋಡ್ ಶೋ ಆರಂಭಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಿ.ವಿ.ನಾಗಪ್ಪ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದರುವ ಸುದೀಪ್ ಸಿಎಂ ಹೇಳಿದ ಕ್ಷೇತ್ರಗಳಲ್ಲಿ ಮತಬೇಟೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ರಾಮಚಂದ್ರ ಅವರಿಗೆ ಆಪ್ತರಾಗಿರುವ ಅವರು ಬಿಜೆಪಿ ಅಭ್ಯರ್ಥಿಪರ ಮತಯಾಚನೆ ಮಾಡಲಿದ್ದಾರೆ.

ಬುಧವಾರ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಹೆಲಿಕಾಪ್ಟರ್‍ನಲ್ಲಿ ಬರಲಿರುವ ಸುದೀಪ್ ಅವರಿಗೆ ಪಟ್ಟಣದ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ದೊಡ್ಡಮಟ್ಟದ ಸ್ವಾಗತ ಸಿಗಲಿದೆ. ಸುದೀಪ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈವೇಳೆ ಬಿದರಕೆರೆ ರವಿ, ಎಸ್.ಕೆ.ಮಂಜುನಾಥ್, ದ್ಯಾಮನಗೌಡ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಇದ್ದರು.

ಸುದೀಪ್ ಆಗಮನದಿಂದ ಅಭಿಮಾನಿಗಳ ಜನಸಾಗರ:

ನಾಳೆ ನಟ ಸುದೀಪ್ ಜಗಳೂರು ಪಟ್ಟಣಕ್ಕೆ ಆಗಮಿಸುತ್ತಿದ್ದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಈಗಾಗಲೇ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ನಮ್ಮ ನೆಚ್ಚಿನ ನಾಯಕ ಸುದೀಪ್ ಆಗಮನದಿಂದ ಕ್ಷೇತ್ರದ ಮೂಲೆ ಮೂಲೆಗಳಿಂದ ಯುವಕರ ಪಡೆ ಸಾಗರದೊಪಾದಿಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಅಲ್ಲದೇ ಜಗಳೂರಿನಲ್ಲಿ ದೊಡ್ಡ ಮಾರಿಕಾಂಭ ಜಾತ್ರಾ ಮಹೋತ್ಸವವಿದ್ದು ಸುದೀಪ್ ಆಗಮನದ ಹಿನ್ನೆಲೆ ನಾಳೆ ಪಟ್ಟಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಯಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!