ಸುದ್ದಿವಿಜಯ,ಜಗಳೂರು:ಕ್ರೀಡೆಯಿಂದ ದೇಹ ಸದೃಢ ಹಾಗೂ ಕ್ರೀಯಾಶೀಲತೆ ಹೊಂದುತ್ತದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಬೇಡರಕಣ್ಣಪ್ಪ ವಸತಿಯುತ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಹಾಗೂ ಪ್ರೌಢಶಾಲಾ ದೂಹಿಕ ಶಿಕ್ಷಕರ ಸಂಘ ಜಗಳೂರು ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಜಗಳೂರು ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳೇ ದೇಶದ ಆಸ್ತಿ, ದೇಹವು ಸದೃಢವಾಗಿ ಇದ್ದರೆ ಮನಸ್ಸು ಸಹ ಪ್ರಬುದ್ಧವಾಗಿರುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿಯೂ ಒಳ್ಳೆಯ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ಜೀವನ ಶೈಲಿಯಲ್ಲಿನ ಬದಲಾವಣೆಗಳಿಂದ ಚಿಕ್ಕ ವಯಸ್ಸಿನಲ್ಲೇ ಬಿಪಿ, ಶುಗರ್, ಗುರುತಿಸಲಾಗದಂತ ರೋಗಗಳು ಬಾಧಿಸುತ್ತವೆ. ಹಾಗಾಗಿ ಔಷಧಿಗಳಿಗೆ ಹೊಂದಿಕೊಂಡು ಪೂರ್ಣ ಆಯುಷ್ ಕಳೆಯುವ ಮುನ್ನವೇ ಮರಣ ಹೊಂದುವಂತಹ ಪರಿಸ್ಥಿತಿಯ ನಡುವೆ ಬದುಕುತ್ತಿದ್ದೇವೆ.
ರೋಗಗಳಿಗೆ ರಾಮಬಾಣ ಕ್ರೀಡೆ ಮತ್ತು ಯೋಗ, ಧ್ಯಾನ, ಇವುಗಳಿಂದ ಎಲ್ಲವನ್ನು ಹತೋಟಿಗೆ ತರಬಹುವುದು ಎಂದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಕ್ರೀಡಾಪಟುಗಳು ಉತ್ತಮವಾಗಿ ಪ್ರದರ್ಶಿಸಿ ಗೆಲುವು ಪಡೆಯಬೇಕು. ಅದಕ್ಕೂ ಮುನ್ನ ತೀರ್ಪುಗಾರರ ತೀರ್ಪಿಗೆ ಬದ್ದರಾಗಿರಬೇಕು. ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ವಿದ್ಯಾರ್ಥಿಗಳು ಸ್ಪರ್ಧಿಸುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ರೆಡ್ಡಿ, ಕ.ಸ.ನೌ.ಸಂಘದ ಅಧ್ಯಕ್ಷ ಬಿ.ಆರ್ ಚಂದ್ರಪ್ಪ, ಕಾರ್ಯದರ್ಶಿ ನಾಗರಾಜ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪ್ರೌ.ಶಾ.ಶಿ. ಸಂಘದ ಕಾರ್ಯದರ್ಶಿ ಕಲಿನಾಥ್, ಆನಂದ್, ನಿರ್ದೇಶಕರಾದ ಶಕುಂತಲ,ಪ್ಯಾರೀನಾ ಬೇಗಂ, ಪ.ಪಂ ರಮೇಶ್ ರೆಡ್ಡಿ, ಮಂಜುನಾಥ್, ವೀರೇಶ್, ಕಾಂಗ್ರೆಸ್ ಜಿಲ್ಲಾಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ಲೋಕೇಶ್ ಎಚ್.ಎಂ ಹೊಳೆ ಸೇರಿದಂತೆ ಮತ್ತಿತರಿದ್ದರು.